Advertisement

ಜಾಗತಿಕ ಡೋಸ್‌ ನೋಟ

01:42 AM Jan 16, 2021 | Team Udayavani |

ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಒಟ್ಟಾರೆ ಅಂದಾಜು 3 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಕೆಲವು ದೇಶಗಳಲ್ಲಿ ಮೊದಲ ಹಂತ ಮುಕ್ತಾಯದ ಅಂಚಿಗೂ ಬಂದಿದೆ. ಮತ್ತೆ ಕೆಲವು ದೇಶಗಳಲ್ಲಿ ಆಮೆಗತಿಯಲ್ಲಿ ಸಾಗಿದೆ. ಯಾವ್ಯಾವ ದೇಶಗಳ ಲಸಿಕೆ ಕಾರ್ಯಕ್ರಮಗಳು ಹೇಗೆ ವಿಭಿನ್ನ? ಅಲ್ಲಿ ಎದುರಾಗಿರುವ ಸವಾಲುಗಳೇನು?- ಮುಂತಾದವುಗಳ ಕಿರುನೋಟ ಇಲ್ಲಿದೆ…

Advertisement

ಕೆನಡಾ :

ಹೈಲೈಟ್‌: ಉಚಿತ ಲಸಿಕೆ

ಲಸಿಕೆ: ಫೈಜರ್‌, ಮಾಡೆರ್ನಾ

ಮೊದಲ ಹಂತದ ಲಸಿಕೆ ಉಚಿತ. ಆರೋಗ್ಯ ಸಿಬಂದಿ, ಸ್ವದೇಶಿಯರಿಗೆ ಮೊದಲ ಆದ್ಯತೆ. ಮಾರ್ಚ್‌ ಅಂತ್ಯಕ್ಕೆ 1ನೇ ಹಂತ ಪೂರ್ಣ ಗುರಿ.ಸುದೀರ್ಘ‌ ಶೈತ್ಯ ಸಂಗ್ರಹ, ಫ್ಯಾಕ್ಟರಿಯಿಂದ ಆಸ್ಪತ್ರೆಗಳಿಗೆ ಲಸಿಕೆ ಸಾಗಾಟ, ಹಿರಿಯ ನಾಗರಿಕರಿಗೆ ಲಸಿಕೆ ತಲುಪಿಸುವ ಪ್ರಕ್ರಿಯೆ ನಿಧಾನಗತಿ.

Advertisement

ಕೇಸ್‌ 6.8 ಲಕ್ಷ  ,ಸಾವು 17,383

ಇಸ್ರೇಲ್‌ :

ಹೈಲೈಟ್‌: 24×7 ಲಸಿಕೆ

ಲಸಿಕೆ: ಫೈಜರ್‌, ಮಾಡೆರ್ನಾ

ಒಟ್ಟು 93 ಲಕ್ಷ ಇಸ್ರೇಲಿಗರಲ್ಲಿ ಶೇ.15 ಮಂದಿಗೆ ಇನ್ನೆರಡು ವಾರಗಳಲ್ಲಿ ಲಸಿಕೆ ಪೂರ್ಣ ಗುರಿ. ಲಸಿಕಾ ಕೇಂದ್ರಗಳು 24 ಗಂಟೆಯೂ ಓಪನ್‌. ಫೈಜರ್‌ನ 1 ಡೋಸ್‌ಗೆ 2,192 ರೂ. ನಿಗದಿ. ಬೇರೆಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ, ಈ ದರ ದುಪ್ಪಟ್ಟು. ಪ್ರತಿನಿತ್ಯ 1,50,000 ಮಂದಿಗೆ ಲಸಿಕೆ ನೀಡುವ ಟಾರ್ಗೆಟ್‌.

ಕೇಸ್‌ 5 ಲಕ್ಷ  ,ಕೇಸ್‌ 5 ಲಕ್ಷ

ಡೆನ್ಮಾರ್ಕ್‌ :

ಹೈಲೈಟ್‌: ವ್ಯಾಕ್ಸಿನ್‌ ಪಾಸ್‌ಪೋರ್ಟ್‌!

ಲಸಿಕೆ: ಫೈಜರ್‌

58 ಲಕ್ಷ ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಡಿಸೆಂಬರ್‌ನಿಂದಲೇ ಲಸಿಕೆ ಶುರು. ಇದುವರೆಗೆ ಶೇ.1 ಮಂದಿಗಷ್ಟೇ ಲಸಿಕೆ ಪೂರ್ಣ. ಲಸಿಕೆ ಪಾಸ್‌ಪೋರ್ಟ್‌ ಪರಿಚಯಿಸಿದ ಜಗತ್ತಿನ ಮೊದಲ ದೇಶ. ವಿದೇಶ ಪ್ರವಾಸಕ್ಕೂ ಈ ಪಾಸ್‌ಪೋರ್ಟ್‌ ಸಿಂಧು. ಪ್ರಜೆಗಳು ತಾವೇ ಅಪಾಯಿಂಟ್‌ಮೆಂಟ್‌ ಪಡೆದು ಸ್ಥಳೀಯ ಕೇಂದ್ರಗಳಿಗೆ ತೆರಳಬಹುದು. ಆದರೆ ಅಧಿಕಾರಿಗಳ ಒಪ್ಪಿಗೆ ಬಳಿಕವಷ್ಟೇ ಲಸಿಕೆ ನೀಡಲಾಗುತ್ತದೆ.

ಕೇಸ್‌ 1.8 ಲಕ್ಷ , ಸಾವು 1,623

ಅಮೆರಿಕ :

ಹೈಲೈಟ್‌: ನೂರಾರು ಲಸಿಕೆ ಬಾಟಲಿಗಳು ವ್ಯರ್ಥ

ಲಸಿಕೆ: ಫೈಜರ್‌, ಮಾಡೆರ್ನಾ

ಕ್ಯಾಲಿಫೋರ್ನಿಯಾದಲ್ಲಿ ಸುಮಾರು 35 ಲಕ್ಷ ಡೋಸ್‌ಗಳ ನೀಡಿಕೆ ಪೂರ್ಣ. ಸರಕಾರದ ಕಠಿನ ನೀತಿಗಳು, ರಾಜ್ಯಗಳ ಪಾಲಿಸಿಗಳಲ್ಲಿನ ದ್ವಂದ್ವಕ್ಕೆ ವ್ಯಾಪಕ ಟೀಕೆ. ನಿತ್ಯವೂ ಲಸಿಕೆಯ ನೂರಾರು ಅರ್ಧ ಬಾಟಲಿಗಳು ತ್ಯಾಜ್ಯ ಸೇರುತ್ತಿವೆ. ಫೈಜರ್‌ ಬಾಟಲಿಗಳಲ್ಲಿ 6 ಡೋಸ್‌ ಇದ್ದರೂ, ಇವುಗಳನ್ನು ತುಂಬಿಕೊಳ್ಳುವ ಅಮೆರಿಕ ಸಿರಿಂಜ್‌ಗಳ ಗಾತ್ರ ಭಾರೀ ಚಿಕ್ಕದು. ಹೀಗಾಗಿ ಉಳಿದರ್ಧ ವೇಸ್ಟ್‌!

ಕೇಸ್‌ 2.3 ಕೋಟಿ,ಸಾವು 3.8 ಲಕ್ಷ

ಇಂಗ್ಲೆಂಡ್‌ :

ಹೈಲೈಟ್‌: ಡೋಸ್‌ ನಡುವೆ ಹೆಚ್ಚಿದ ಅಂತರ

ಲಸಿಕೆ: ಫೈಜರ್‌, ಆಕ್ಸ್‌ಫ‌ರ್ಡ್‌

ಲಸಿಕೆ ನೀಡುವಿಕೆ ಕಾರ್ಯ ಭಾರೀ ನಿಧಾನದಿಂದ ಸಾಗಿದೆ. 1ನೇ ಡೋಸ್‌ನಿಂದ 2ನೇ ಡೋಸ್‌ಗೆ 3-4ರ ವಾರಗಳ ಬದಲು, 12 ವಾರಗಳ ನಿಗದಿ. ಶೇ.70 ಮಂದಿಯನ್ನು ಸೋಂಕಿನಿಂದ ರಕ್ಷಿಸುವುದಕ್ಕಾಗಿ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಬೋರಿಸ್‌ ಜಾನ್ಸನ್‌ ಸರಕಾರ ಸ್ಪಷ್ಟನೆಯನ್ನೂ ನೀಡಿದೆ.

ಕೇಸ್‌ 31 ಲಕ್ಷ ,ಕೇಸ್‌ 31 ಲಕ್ಷ

ಇಟಲಿ :

ಹೈಲೈಟ್‌: ರೋಮ್‌ ಶೈಲಿ!

ಲಸಿಕೆ: ಫೈಜರ್‌

ಇಟಲಿಯ ಪ್ರಸಿದ್ಧ ವಾಸ್ತುಶಿಲ್ಪಿ ಸ್ಟೀಫ‌ನೋ ಬೋರಿ ಅವರಿಂದ ವಿಭಿನ್ನ ಶೈಲಿಯ “ವ್ಯಾಕ್ಸಿನ್‌ ಪೆವಿಲಿಯನ್‌’ ನಿರ್ಮಾಣ. ಲಸಿಕಾ ಕೇಂದ್ರಗಳಲ್ಲಿ ಜನ ಹೆಚ್ಚಾದರೆ, ಆಸ್ಪತ್ರೆಗಳಲ್ಲೂ ವ್ಯವಸ್ಥೆ. ಡಿ. 27ರಿಂದ ಇಲ್ಲಿಯವರೆಗೆ ಶೇ.55 ಡೋಸ್‌ಗಳು ಪೂರ್ಣ.

ಕೇಸ್‌ 23 ಲಕ್ಷ ,ಸಾವು 79,819

Advertisement

Udayavani is now on Telegram. Click here to join our channel and stay updated with the latest news.

Next