Advertisement

ಲಸಿಕೆ ಎರಡು ದಿನಗಳಲ್ಲಿ ನಮ್ಮೂರಿಗೆ

12:05 AM Jan 13, 2021 | Team Udayavani |

ಬೆಂಗಳೂರು: ಕೋವಿಡ್ ಲಸಿಕೆಗಳು ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದು, ಎರಡು ದಿನಗಳಲ್ಲಿ ರಾಜ್ಯ ದೆಲ್ಲೆಡೆ ಸರಬರಾಜಾಗಿ, ನಮ್ಮೂರಿನ ಆರೋಗ್ಯ ಕೇಂದ್ರಕ್ಕೂ ಬರಲಿವೆ.

Advertisement

ಕೇಂದ್ರ ಸರಕಾರವು ರಾಜ್ಯಕ್ಕೆ ಮೊದಲ ಹಂತದಲ್ಲಿ ಒಟ್ಟು 13.92 ಲಕ್ಷ ಡೋಸ್‌ ನಿಗದಿಪಡಿಸಿದೆ. ಸದ್ಯ 7.95 ಲಕ್ಷ ಲಭ್ಯವಾಗಿವೆ. ಈ ಪೈಕಿ ಮಂಗಳವಾರ 6,47,500 ಡೋಸ್‌ ಲಸಿಕೆ ಬೆಂಗಳೂರಿಗೆ ಆಗಮಿಸಿದ್ದು, ಬುಧವಾರ ಬೆಳಗಾವಿಗೆ 1,47,500 ಡೋಸ್‌ ಬರಲಿವೆ. ಸದ್ಯ ಬಂದಿರುವ ಲಸಿಕೆ ಬೆಂಗಳೂರಿನ ಆನಂದ ರಾವ್‌ ವೃತ್ತದ ಬಳಿಯ ಆರೋಗ್ಯ ಇಲಾಖೆ ಹಳೇ ಕಚೇರಿಯ ರಾಜ್ಯ ಮಟ್ಟದ ಸಂಗ್ರಹಾಗಾರದಲ್ಲಿವೆ.

ಪುಣೆಯಿಂದ 54 ಲಸಿಕೆ ಪೆಟ್ಟಿಗೆ ಗಳನ್ನು ಹೊತ್ತ ಸ್ಪೇಸ್‌ ಜೆಟ್‌ ವಿಮಾನವು ಮಂಗಳವಾರ ಬೆಳಗ್ಗೆ 11.45ಕ್ಕೆ ಬೆಂಗಳೂರು ಕೆಂಪೇ ಗೌಡ ವಿಮಾನ ನಿಲ್ದಾಣಕ್ಕೆ ಆಗಮಿ ಸಿತು. ಅಲ್ಲಿಂದ ರಾಜ್ಯ ಮಟ್ಟದ ಸಂಗ್ರಹಾಗಾರಕ್ಕೆ ಟ್ರಕ್‌ ಮೂಲಕ ತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next