ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಪ್ರಸ್ತಾವನೆ ಬಗ್ಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶಕರ (ಡಿಜಿಸಿಎ) ಒಪ್ಪಿಗೆ ಸಿಗುವ ತನಕ, ಬೇರೆ ಯಾವುದೇ ಮಕ್ಕಳ ಕೋವಿಡ್ ಲಸಿಕೆಗಳಿಗೆ ಒಪ್ಪಿಗೆ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಅಲ್ಲಿಗೆ, ಮಕ್ಕಳಿಗೆ ಕೋವಿಡ್ ಲಸಿಕೆಗಳು ಮಾರುಕಟ್ಟೆಯಲ್ಲಿ ಸಿಗುವುದಕ್ಕೆ ಮತ್ತಷ್ಟು ವಾರಗಳು ತಡವಾಗಬಹುದೆಂದು ಅಂದಾಜಿಸಲಾಗಿದೆ.
ಸದ್ಯಕ್ಕೆ ಹೆಚ್ಚುವರಿ 12ರಿಂದ 17 ವರ್ಷ ವಯಸ್ಸಿನವರಿಗೆ ತುರ್ತು ಸಂದರ್ಭಗಳಲ್ಲಿ (ಎಮರ್ಜೆನ್ಸಿ ಯೂಸ್ ಆಥೋರೇಷನ್ – ಇಯುಎ) ಮಾತ್ರ ನೀಡುವಂತೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಮುಕೇಶ್ ಅಂಬಾನಿ ಮನೆ ವಿಳಾಸ ಕೇಳಿದವ ಅರೆಸ್ಟ್
ಆದರೆ, ಅದನ್ನು 2ರಿಂದ 18 ವರ್ಷ ಮೇಲ್ಪಟ್ಟವರಿಗೂ ವಿಸ್ತರಿಸಬಹುದು ಎಂದು ತಜ್ಞರು ಈಗಾಗಲೇ ವರದಿ ಸಲ್ಲಿಸಿದ್ದಾರೆ. ಆದರೆ, ಆ ಅರ್ಜಿಗೆ ಬಗ್ಗೆ ಡಿಜಿಸಿಎ ನಿರ್ಧಾರ ಕೈಗೊಂಡಿಲ್ಲ.