Advertisement
ಆರೋಗ್ಯ ಇಲಾಖೆಯ ಗುರಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 12ರಿಂದ 14 ವರ್ಷದೊಳಗಿನ 30,935 ಮಂದಿ ಗುರಿ ಇರಿಸಿಕೊಂಡಿದ್ದು, 28,426 ಮಂದಿಗೆ ಲಸಿಕೆ ನೀಡಲಾಗಿದೆ. ದ.ಕ.ದಲ್ಲಿ 60,573 ಮಂದಿಯ ಗುರಿ ಇರಿಸಿಕೊಂಡಿದ್ದು, 50,350 ಮಂದಿಗೆ ಮೊದಲನೇ ಡೋಸ್ ನೀಡಲಾಗಿದೆ.
Related Articles
Advertisement
ಗುರಿ ಮೀರಿ ಸಾಧನೆ :
ದ.ಕ.ದಲ್ಲಿ ಈಗಾಗಲೇ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಮುಂಚೂಣಿ ಕಾರ್ಯಕರ್ತರು, 15ರಿಂದ 17 ವರ್ಷದೊಳಗಿನ ಮಂದಿ, 45ರಿಂದ 60 ವರ್ಷದೊಳಗಿನವರಲ್ಲಿ ಶೇ. 100 ಮತ್ತು ಅದಕ್ಕಿಂತ ಮಿಕ್ಕಿ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ. 100ರಷ್ಟು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದುಕೊಂಡರೆ, ಶೇ. 119.65ರಷ್ಟು ಮಂದಿ 15ರಿಂದ 17 ವರ್ಷದೊಳಗಿನವರು ಪಡೆದುಕೊಂಡಿದ್ದಾರೆ. ಅದೇ ರೀತಿ ಶೇ. 105.77ರಷ್ಟು ಮಂದಿ 45ರಿಂದ 60 ವರ್ಷದೊಳಗಿನವರು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 343 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೆ 29,339 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಮೊದಲ ಆರು ಸ್ಥಾನ:
ಪ್ರಥಮ ವಿಜಯಪುರ (ಶೇ. 103)
ದ್ವಿತೀಯ ಬೀದರ್ (ಶೇ. 92)
ತೃತೀಯ ಉಡುಪಿ (ಶೇ. 92)
ಚತುರ್ಥ ಹಾಸನ (ಶೇ. 84)
ಐದನೇ ಗದಗ (ಶೇ. 84)
ಆರನೇ ದಕ್ಷಿಣ ಕನ್ನಡ (ಶೇ. 83)
ದ.ಕ. ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 12ರಿಂದ 14 ವರ್ಷದೊಳಗಿನ ಮಕ್ಕಳ ಲಸಿಕೆ ಅಭಿಯಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೂ ಬಾಕಿ ಇರುವ ಅರ್ಹರು ಲಸಿಕೆ ಪಡೆಯಿರಿ.– ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
ಲಸಿಕೆ ನೀಡಿಕೆಯಲ್ಲಿ ಉಡುಪಿ ಜಿಲ್ಲೆ 3ನೇ ಸ್ಥಾನ ಪಡೆದುಕೊಂಡಿದೆ. ನಿರಂತರ ಜಾಗೃತಿಯ ಫಲ ಇದು. ಅರ್ಹರು ಲಸಿಕೆ ಪಡೆಯಲು ಮುಂದೆ ಬರಬೇಕಿದೆ.–ಡಾ| ನಾಗಭೂಷಣ್ ಉಡುಪ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ