ಶಿರಸಿ: ಆರೋಗ್ಯ ರಕ್ಷಣೆಗೆ ಸರಕಾರ ಯೋಚಿಸಲಾಗದ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಸವಾಲು ಎದುರಿಸಲು ಸಾಧ್ಯವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸೋಮವಾರ ಅವರು ನಗರದ ಮಾರಿಕಾಂಬಾ ಸರಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ 15 ವರ್ಷ ಮೇಲ್ಪಟ್ಟ ಕೋವಿಡ್ ಲಸಿಕೆ ನೀಡಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಆರೋಗ್ಯ ರಕ್ಷಣೆ ನಮ್ಮದೆ:
ಒಳ್ಳೆಯ ಹವ್ಯಾಸ, ಆರೋಗ್ಯ, ಆಹಾರ, ಯೋಗ ಎಲ್ಲವೂ ಪಾಲಿಸಬೇಕು. ಆರೋಗ್ಯದ ಬೇರೆ ಸಮಸ್ಯೆ ಇದ್ದರೆ ದುಷ್ಪರಿಣಾಮ ಹೆಚ್ಚಾಗುತ್ತದೆ. ಒಮ್ಮೆ ಅನಾರೋಗ್ಯ ಆದರೂ ಆಸ್ಪತ್ರೆ ಇದೆ ಎಂದರು.
ದೇಶದಾದ್ಯಂತ ಮಹತ್ವದ ಕಾರ್ಯಕ್ರಮ. ಎರಡನೇ ಅಲೆ ಆಗಿದೆ. ಮೂರನೇ ಅಲೆ ಆತಂಕ ಇದೆ. ಅತ್ಯಂತ ಸಮರ್ಥವಾಗಿ ಎದುರಿಸಿದ ದೇಶ ಭಾರತ. 135 ಕೋಟಿ ಜನ ಸಂಖ್ಯೆಯ ಸರಕಾರವಾಗಿ, ಸಮಾಜವಾಗಿ ಜವಬ್ದಾರಿ ತೆಗದುಕೊಂಡ ಪರಿಣಾಮ ಕೋವಿಡ್ ಎದುರಿಸಲು ಸಾಧ್ಯವಾಗಿದೆ. ಕೊರೋನಾ ಯೋಧರ ಶ್ರಮ ಗುರುತಿಸಬೇಕು. ಅವರ ಕಾರ್ಯ ದೊಡ್ಡದು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಕಣ್ಣಿ ಮಾತನಾಡಿ, 15ರಿಂದ 18 ವರ್ಷದ ಕೋವಾಕ್ಸಿನ್ 28 ದಿನಕ್ಕೆ 15000 ಯುವಕರಿಗೆ ಕೊಡಲಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಬಾಲಚಂದ್ರ ಭಟ್ಟ ಇತರರು ಇದ್ದರು.