Advertisement

ಲಸಿಕೆ ಉತ್ಸವದಲ್ಲಿ 51,450 ಫ‌ಲಾನುಭವಿಗಳು

06:18 PM Apr 16, 2021 | Team Udayavani |

ಮೈಸೂರು: ಜಿಲ್ಲೆಯಲ್ಲಿ ಏ.11 ರಿಂದ ಏ.14ರವರೆಗೆ ನಡೆದ ನಾಲ್ಕು ದಿನಗಳ ಕೋವಿಡ್‌ಲಸಿಕಾ ಉತ್ಸವದಲ್ಲಿ ಒಟ್ಟು 51,450 ಮಂದಿಗೆಲಸಿಕೆ ಹಾಕಲಾಗಿದೆ. ಭಾನುವಾರ, ಯುಗಾದಿಹಬ್ಬ, ವರ್ಷದ ತೊಡಗು ಎಲ್ಲ ಸೇರಿದ್ದರಿಂದಜನರು ಲಸಿಕಾ ಕೇಂದ್ರಗಳತ್ತ ನಿರೀಕ್ಷಿತಪ್ರಮಾಣದಲ್ಲಿ ಬರಲಿಲ್ಲ.

Advertisement

ಆದರೂಸಮಾಧಾನಕರ ಸಂಖ್ಯೆಯಲ್ಲಿ ಜನರು ಲಸಿಕೆಪಡೆದಿದ್ದಾರೆ.ಮೈಸೂರು ಜಿಲ್ಲೆಯಲ್ಲಿ ನಾಲ್ಕು ದಿನದಮೊದಲೆರಡು ದಿನದಲ್ಲಿ ಮಾತ್ರ ಶೇ.80ರಷ್ಟುಗುರಿ ತಲುಪಿದರೂ ಯುಗಾದಿ ದಿನ ಶೇ 10ರಗುರಿಯನ್ನೂ ತಲುಪಲಾಗಲಿಲ್ಲ. ಲಸಿಕಾಅಭಿಯಾನ ಶುರು ಮಾಡಿದ್ದ ಆರೋಗ್ಯಇಲಾಖೆ 356 ಲಸಿಕಾ ಕೇಂದ್ರಗಳಲ್ಲಿ ಉತ್ಸವಹಮ್ಮಿಕೊಂಡಿತ್ತು.ಏ.11ರಂದು 17,510 ಜನರಿಗೆ ಲಸಿಕೆಹಾಕಲಾಗಿದೆ. ಅಂದು 25,050 ಗುರಿಹೊಂದಲಾಗಿತ್ತು.

ಏ. 12ರಂದು 19,145ಜನರು ಲಸಿಕೆ ಪಡೆದಿದ್ದಾರೆ. ಅಂದು 25,050ಗುರಿ ಹಾಕಿಕೊಳ್ಳಲಾಗಿತ್ತು. ಏ. 13ರಂದುಚಾಂದ್ರಮಾನ ಯುಗಾದಿಯಾದ ಕಾರಣಕೇವಲ 1,865 ಜನರು ಲಸಿಕೆಹಾಕಿಸಿಕೊಂಡಿದ್ದಾರೆ. ಅಂದು 15,050ಟಾರ್ಗೆಟ್‌ ಹೊಂದಲಾಗಿತ್ತು. ಏ. 14ರಂದು12,930 ಮಂದಿ ಲಸಿಕೆ ಪಡೆದುಕೊಂಡರು.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರು 8.5ಲಕ್ಷ ಮಂದಿಯಿದ್ದು, ಈ ಪೈಕಿ ಇದುವರೆಗೆ4,06,534 ಮಂದಿಗೆ ಲಸಿಕೆ ಹಾಕಲಾಗಿದೆ.

ಮಹಾನ್‌ನೊಂದಿಗೆ ಒಪ್ಪಂದ: 45 ವರ್ಷಮೇಲ್ಪಟ್ಟವರಿಗೆ ಲಸಿಕೆ ನೀಡುವ ಸಲುವಾಗಿಜಿಲ್ಲಾಡಳಿತ ಮಹಾನ್‌ (ಖಾಸಗಿ ಆಸ್ಪತ್ರೆಗಳಒಕ್ಕೂಟ)ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ನಗರದ 65 ವಾರ್ಡ್‌ಗಳಲ್ಲಿಖಾಸಗಿ ಆಸ್ಪತ್ರೆಯ ಸಿಬ್ಬಂದಿ ಲಸಿಕೆ ನೀಡುವಕೆಲಸದಲ್ಲಿ ಭಾಗಿಯಾಗಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next