Advertisement

ಲಸಿಕೆ ವಿರುದ್ಧ ಪ್ರತಿಪಕ್ಷಗಳ ಅಪಪ್ರಚಾರ

05:24 PM Jun 19, 2021 | Team Udayavani |

ದೊಡ್ಡಬಳ್ಳಾಪುರ: ಕೊರೊನಾ ಎರಡು ಅಲೆಯಲ್ಲೂ ವೈದ್ಯರು, ನರ್ಸ್‌ಗಳು,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ನಿರಂತರ ಪರಿಶ್ರಮಹೋರಾಟದಿಂದ ಕೊರೋನಾ ಗೆಲ್ಲಲುಸಾಧ್ಯವಾಗಿದೆ ಎಂದು ಬಿಡಿಎ ಅಧ್ಯಕ್ಷಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದರು.

Advertisement

ನಗರದ ದತ್ತಾತ್ರೇಯ ಕಲ್ಯಾಣಮಂಟಪದಲ್ಲಿವಿಶ್ವವಾಣಿಫೌಂಡೇಷನ್‌ವತಿಯಿಂದ ನಡೆದ ಕೊರೊನಾವಾರಿಯರ್ಸ್‌ಗೆ ದಿನಸಿ ಕಿಟ್‌ ವಿತರಣೆಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್‌ ಕಾನ್ಸಟ್ರೇಟರ್‌ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ,ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಮೇಲ್ದರ್ಜೆಗೇರಿಸಿ, ಜಿಲ್ಲಾಸ್ಪತ್ರೆಮಾಡುವ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಲಸಿಕೆ ವಿರುದ್ಧ ಪ್ರತಿಪಕ್ಷಗಳುಅಪಪ್ರಚಾರ ಮಾಡುತ್ತಿದ್ದು, ಲಸಿಕೆಸರಬರಾಜಾಗುತ್ತಿದ್ದು ಎಲ್ಲರಿಗೂ ಲಸಿಕೆಸಿಗಲಿದೆ ಎಂದರು.

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿರುತ್ತಾರೆ. ಎಚ್‌.ವಿಶ್ವನಾಥ ಅವರು ಹುಚ್ಚರಂತೆ ಮಾತನಾಡುತ್ತಾರೆ. 2008ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೂನಾನು ಮಂತ್ರಿ ಮಾಡಿ ಎಂದು ಕೇಳಲಿಲ್ಲ. ಅಧಿಕಾರಕ್ಕಾಗಿ ನಾನು ಪಕ್ಷದಲ್ಲಿ ಕೆಲಸ ಮಾಡುತ್ತಿಲ್ಲ. ಆದರೆ, ಅವರಿಗೆಅಧಿಕಾರ ಬೇಕು. ಹೀಗಾಗಿ ಮಾನಸಿಕಅಸ್ವಸ್ಥತೆಯಿಂದ ಆಧಾರ ರಹಿತಆರೋಪ ಮಾಡುವುದನ್ನು ಕಲಿತಿದ್ದಾರೆ ಎಂದರು.

ವನ್ಯಜೀವಿ ಮಂಡಳಿ ನಿರ್ದೇಶಕ ಎಸ್‌.ವಿ.ಅಲೋಕ್‌, ದೊಡ್ಡಬಳ್ಳಾಪುರ ಯೋಜನಾಭಿವೃದ್ಧಿ ಪ್ರಾಧಿಕಾರಅಧ್ಯಕ್ಷದಿಬ್ಬೂರುಜಯಣ್ಣ,ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ,ಟಿ.ಎನ್‌. ನಾಗರಾಜು, ಎಚ್‌.ಎಸ್‌.ಶಿವಶಂಕರ್‌, ಧೀರಜ್‌ ಮುನಿರಾಜು,ವೆಂಕಟೇಶ್‌,ಲಗ್ಗೆರೆನಾರಾಯಣಸ್ವಾಮಿಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next