ದಾವಣಗೆರೆ: ಕೋವಿಡ್ ಸೋಂಕುತಡೆಗಟ್ಟುವ ನಿಟ್ಟಿನಲ್ಲಿ ಸೆ. 28 ರಂದುದಾವಣಗೆರೆ ತಾಲೂಕಿಗೆ 5000 ಲಸಿಕೆಹಂಚಿಕೆ ಮಾಡಲಾಗಿದೆ ಎಂದುತಾಲೂಕು ಆರೋಗ್ಯಾಧಿಕಾರಿ ಡಾ|ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಚಿಗಟೇರಿ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ,ಸಮುದಾಯ ಆರೋಗ್ಯ ಸಂಸ್ಥೆಹಾಗೂ ನಗರ ಆರೋಗ್ಯಕೇಂದ್ರಗಳಲ್ಲಿ 2500 ಡೋಸ್‌ಕೊವ್ಯಾಕ್ಸಿನ್ ಹಾಗೂ 2500 ಡೋಸ್ ಕೊವಿಶೀಲ್ಡ್ ಹಂಚಿಕೆ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹವ್ಯಕ್ತಿಗಳು ಮೊದಲ ಹಾಗೂಎರಡನೆ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ.
ಸದ್ಯಕೋವಿಡ್ ಪ್ರಕರಣಗಳು ಕಡಿಮೆದಾಖಲಾಗುತ್ತಿದ್ದು, ಸಾರ್ವಜನಿಕರು ಕೋವಿಡ್ ಕಡಿಮೆಯಾಗಿದೆ ಎಂದುಭಾವಿಸಿ, ಲಸಿಕೆ ಹಾಕಿಸಿಕೊಳ್ಳುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ಆದರೆಪ್ರತಿಯೊಬ್ಬ ಅರ್ಹ ವ್ಯಕ್ತಿಯೂತಪ್ಪದೆ ಕೋವಿಡ್ ನಿರೋಧಕಲಸಿಕೆ ಹಾಕಿಸಿಕೊಳ್ಳಲೇಬೇಕಿದೆ.ಹೀಗಾಗಿ ಯಾವುದೇ ನಿರ್ಲಕ್ಷತೋರದೆ ತಪ್ಪದೆ ಎಲ್ಲ ಅರ್ಹವ್ಯಕ್ತಿಗಳೂ ಕೋವಿಡ್ ನಿರೋಧಕಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ತಾಲೂಕಿನಗ್ರಾಮಗಳಲ್ಲಿನ ಆರೋಗ್ಯಸಂಸ್ಥೆಗಳಿಗೆ ಒಟ್ಟಾರೆ 1700 ಡೋಸ್‌ಕೊವಿಶೀಲ್ಡ್ ಲಸಿಕೆ ಹಂಚಿಕೆಮಾಡಲಾಗಿದೆ. ದಾವಣಗೆರೆನಗರದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ500 ಲಸಿಕೆ, ಸೇಂಟ್‌ಫಾಲ್ಸ್ ಶಾಲೆಬಳಿಯ ನಗರ ಆರೋಗ್ಯ ಕೇಂದ್ರಕ್ಕೆ300 ಲಸಿಕೆ ಕೊವಿಶೀಲ್ಡ್ ಹಂಚಿಕೆಮಾಡಲಾಗಿದೆ. ಉಳಿದಂತೆಆಜಾದ್‌ನಗರ, ಭಾಷಾನಗರ,ಭಾರತ್ ಕಾಲೋನಿ, ದೊಡ್ಡಪೇಟೆ,ರಾಮನಗರ, ಹೆಚ್‌ಕೆಆರ್ ನಗರ,ಎಸ್‌ಎಂಕೆ ನಗರ ಹಾಗೂ ನಿಟ್ಟುವಳ್ಳಿನಗರ ಆರೋಗ್ಯ ಕೇಂದ್ರಗಳಿಗೆಒಟ್ಟಾರೆ 2500 ಡೋಸ್ ಕೊವ್ಯಾಕ್ಸಿನ್‌ಲಸಿಕೆ ಹಂಚಿಕೆ ಮಾಡಲಾಗಿದೆ ಎಂದುತಾಲೂಕು ಆರೋಗ್ಯಾಧಿಕಾರಿಗಳುತಿಳಿಸಿದ್ದಾರೆ.