ಹುಣಸೂರು: ಯೋಗ ದಿನ ಪ್ರಯುಕ್ತ ಕೋವಿಡ್‌ವಿಶೇಷ ಲಸಿಕಾ ಅಭಿಯಾನಕ್ಕೆ ಮೊದಲ ದಿನವೇನಗರ ಸೇರಿದಂತೆ ತಾಲೂಕಿನಾದ್ಯಂತ ಉತ್ತಮಪ್ರತಿಕ್ರಿಯೆ ಸಿಕ್ಕಿದೆ.ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಬೆಳಗ್ಗೆಯೇ 500ಕ್ಕೂ ಹೆಚ್ಚು ಮಂದಿ ಸರತಿಯಲ್ಲಿ ನಿಂತಿದ್ದರು.
ನಗರವಾಸಿಗಳಿಗಿಂತ ಹೆಚ್ಚಾಗಿ ಪಕ್ಷಿರಾಜಪುರದಹಕ್ಕಿಪಿಕ್ಕಿ ಸಮುದಾಯದ ಮಂದಿ ಕಂಡು ಬಂದರು.ಇನ್ನು ತಾಲೂಕಿನ 23 ಪ್ರಾಥಮಿಕ ಆರೋಗ್ಯಕೇಂದ್ರದಲ್ಲೂ ಯುವ ಪಡೆ ಲಸಿಕೆ ಪಡೆಯಲು ಲಸಿಕೆಪಡೆಯಲು ಮುಗಿ ಬಿದ್ದಿದ್ದರು.ತಾಲೂಕಿಗೆ ಮೊದಲ ದಿನ 4 ಸಾವಿರ ಮಂದಿಗೆಲಸಿಕೆ ನೀಡುವ ಗುರಿ ನೀಡಲಾಗಿತ್ತು.
ಅಂಬೇಡ್ಕರ್‌ಭವನದ ಲಸಿಕಾ ಕೇಂದ್ರದಲ್ಲಿ ಸಂಜೆ ವೇಳೆಗೆಸಾವಿರಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದರೆ, ವಿವಿಧಪಿಎಚ್‌ಸಿ ಕೇಂದ್ರ ಸೇರಿದಂತೆ ಸುಮಾರು 3000ಕ್ಕೂಹೆಚ್ಚು ಮಂದಿ ಲಸಿಕೆ ಪಡೆದುಕೊಂಡರು. ಒಟ್ಟು3,500 ಮಂದಿ ಲಸಿಕಾ ಫಲಾನುಭವಿಗಳಾಗಿದ್ದಾರೆ.
5 ಕೌಂಟರ್ನಲ್ಲಿ ಲಸಿಕೆ: ಅಂಬೇಡ್ಕರ್ ಭವನದಲ್ಲಿಜನದಟ್ಟಣೆ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್‌ಬಸವರಾಜು, ತಾಪಂ ಇಒ. ಗಿರೀಶ್‌ರವರು ಭವನದಲ್ಲಿ ಐದುಕೌಂಟರ್ ಮೂಲಕ ಲಸಿಕೆ ನೀಡುವ ವ್ಯವಸ್ಥೆಕಲ್ಪಿಸಿದ್ದರು. ಲಸಿಕೆ ಪಡೆಯಲುಕೇಂದ್ರಕ್ಕೆ ಬರುವವರಿಗೆನಗರಸಭೆವತಿಯಿಂದ ಪೌರಾಯುಕ್ತ ರಮೇಶ್,ಪರಿಸರ ಇಂಜಿನಿಯರ್ ರೂಪಾ ಸ್ಯಾನಿ ಟೆ„ಸರ್ ವ್ಯವಸ್ಥೆ ಕಲ್ಪಿಸಿದರು. ಆರೋಗ್ಯ ಇಲಾಖೆಯ ಆಶಾ ಲಸಿಕಾಅಭಿಯಾನದ ಉಸ್ತುವಾರಿ ವಹಿಸಿದ್ದರು. ಈರ್ವರುಅಧಿಕಾರಿಗಳು ಕಲ್ಲಹಳ್ಳಿ, ಚಿಲ್ಕುಂದ, ಕೊತ್ತೆಗಾಲ,ಕಟ್ಟೆಮಳಲವಾಡಿ ಆಸ್ಪತ್ರೆಗಳಿಗೆ ಭೇಟಿ ನೀಡಿಪರಿಶೀಲಿಸಿದರೆ, ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಬಿಳಿಕೆರೆ, ಮುಳ್ಳೂರು, ಚಲ್ಲಹಳ್ಳಿ,ರತ್ನಪುರಿ ಆಸ್ಪತ್ರೆಗಳಿಗೆ ಭೇಟಿ ನೀಡಿದರು.
ತಾಲೂಕಿನಲ್ಲಿ 2,26 ಲಕ್ಷ ಮಂದಿ: ತಾಲೂಕಿನಲ್ಲಿ 18ವರ್ಷಕ್ಕೆ ಮೇಲ್ಪಟ್ಟವರು 2.26 ಲಕ್ಷ ಮಂದಿ ಇದ್ದು,ಈಗಾಗಲೇ ವಾರಿಯರ್ಸ್‌ಗಳು ಸೇರಿದಂತೆ 45 ವರ್ಷಕ್ಕಿಂತ ಮೇಲ್ಪಟ್ಟ59 ಸಾವಿರ ಮಂದಿ ಲಸಿಕೆ ಪಡೆದಿದ್ದಾರೆ.ಇನ್ನು 1,67 ಲಕ್ಷ ಮಂದಿಗೆ ಲಸಿಕೆ ನೀಡಬೇಕಿದೆ.