Advertisement

ಬಿಳಿಗಿರಿರಂಗನ ಬೆಟ್ಟ ಪ್ರಥಮ ವ್ಯಾಕ್ಸಿನ್ ಯುಕ್ತ ಗ್ರಾಪಂ ಆಗಲಿ

06:12 PM Jun 19, 2021 | Team Udayavani |

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟಗ್ರಾಮ ಪಂಚಾಯ್ತಿಯು ತಾಲೂಕಿನ ಪ್ರಥಮಕೋವಿಡ್‌ ಮುಕ್ತ ಗ್ರಾಪಂ ಆಗಿರುವುದು ಹೆಮ್ಮೆ ವಿಚಾರ.ಇದೇ ರೀತಿ ಇದರ ವ್ಯಾಪ್ತಿಯಲ್ಲಿ ಇರುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇದನ್ನು ರಾಜ್ಯದ ಪ್ರಥಮವ್ಯಾಕ್ಸಿನ್‌ಯುಕ್ತ ಗ್ರಾಪಂ ಆಗಿ ಮಾಡಲು ಯತ್ನಿಸಿಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಮನವಿ ಮಾಡಿದರು.

Advertisement

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿಪೋಡಿನಲ್ಲಿ ಶುಕ್ರವಾರ ಕೋವಿಡ್‌ ಲಸಿಕಾ ಚಾಲನೆಹಾಗೂ ವಿಜಿಕೆಕೆಯಲ್ಲಿ ನಡೆದ ಟಾಸ್ಕ್ಫೋರ್ಸ್‌ಸಭೆಯಲ್ಲಿ ಮಾತನಾಡಿದರು. ಇಲ್ಲಿನ ಬುಡಕಟ್ಟುಜನರು ಈಗಲೂ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಇದನ್ನು ನೀಡುವ ನಿಟ್ಟಿನಲ್ಲಿ ಸೋಲಿಗ ಮುಖಂಡರು, ಸಂಘಸಂಸ್ಥೆಯವರು,ಜನಪ್ರತಿನಿಧಿಗಳು ಆರೋಗ್ಯ ಕಾರ್ಯಕರ್ತರುಮನವೊಲಿಸಬೇಕಿದೆ ಎಂದರು.

ಶಾಸಕಎನ್‌.ಮಹೇಶ್‌ಮಾತನಾಡಿ,ಬಿಳಿಗಿರಿರಂಗನಬೆಟ್ಟ ಪ್ರಥಮ ಕೋವಿಡ್‌ ಮುಕ್ತ ಪಂಚಾಯಿತಿ ಆಗಿದೆ.ಇದೊಂದು ಪ್ರವಾಸಿತಾಣವೂ ಆಗಿದೆ. ಹಾಗಾಗಿ ಗ್ರಾಪಂವತಿಯಿಂದ ಪ್ರಮುಖ ರಸ್ತೆಗಳಲ್ಲಿ ಕೋವಿಡ್‌ ಮುಕ್ತಪಂಚಾಯಿತಿ ಎಂದು ಫ್ಲೆಕ್ಸ್‌ ಹಾಕಿಸಿ. ಇದರೊಂದಿಗೆ ಕೋವಿಡ್‌ ನಿಯಮಗಳು ಜಾಗೃತಿಯ ಬಗೆಯೂಮಾಹಿತಿಯನ್ನು ನೀಡಿ ಎಂದರು.

ಗ್ರಾಪಂ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷ ಬೇದೇಗೌಡ,ಸದಸ್ಯರಾದ ಪ್ರದೀಪ್‌ಕುಮಾರ್‌, ಕಮಲಮ್ಮ, ಸಾಕಮ್ಮ,ಮಾದಮ್ಮ, ಸಿ.ಡಿ. ಮಹದೇವ ಪಿಡಿಒ ಸ್ವಾಮಿ, ಜಿಪಂಸಿಇಒಹರ್ಷಲ್‌ ಭೋಯರ್‌ ನಾಯರಾಯಣರಾವ್‌,ತಹಶೀಲ್ದಾರ್‌ ಜಯಪ್ರಕಾಶ್‌, ಇಒ ಉಮೇಶ್‌,ಸಿಡಿಪಿಒ ದೀಪಾ, ಬಿಇಒ ವಿ. ತಿರುಮಲಾಚಾರಿ,ಜಯಕಾಂತ, ಮುಖಂಡರಾದ ಸಿ. ಮಾದೇಗೌಡ,ವೆಂಕಟೇಶ್‌, ಅರುಣ್‌ಕುಮಾರ್‌, ರಾಮಾಚಾರಿ,ನಾಗೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next