Advertisement

ಕೋವಿಡ್ ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ : ವಿವಾಹದಲ್ಲಿ 40 ಮಂದಿಗೆ ಅವಕಾಶ

01:54 AM Jun 12, 2021 | Team Udayavani |

ಬೆಂಗಳೂರು: ಕೊರೊನಾ ಅನ್‌ ಲಾಕ್‌ಗೆ ಸಂಬಂಧಿಸಿ ಮಾರ್ಗಸೂಚಿ ಹೊರಡಿಸಿರುವ ರಾಜ್ಯ ಸರಕಾರ ಮದುವೆಯಲ್ಲಿ 40
ಮಂದಿ ಭಾಗಿಯಾಗಲು ಅವಕಾಶ ಕಲ್ಪಿಸಿದೆ. ಈಗಾಗ ಲೇ ನಿಶ್ಚಯವಾಗಿರುವ ಮದುವೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಹಾಗೆಯೇ ಅಂತ್ಯ ಸಂಸ್ಕಾರದಲ್ಲಿ 5 ಮಂದಿ ಮಾತ್ರ ಪಾಲ್ಗೊಳ್ಳಬೇಕಿದೆ.

Advertisement

ಗುರುವಾರ ರಾತ್ರಿಯೇ ಸಿಎಂ ಅವರು ಅನ್‌ ಲಾಕ್‌ ಬಗ್ಗೆ ಮಾಹಿತಿ ನೀಡಿದ್ದರು. ಶುಕ್ರವಾರ ರಾಜ್ಯ ಸರಕಾರ ಅಧಿಕೃತವಾಗಿ ಮಾರ್ಗಸೂಚಿ ಹೊರಡಿಸಿದ್ದು, 11 ಜಿಲ್ಲೆಗಳಲ್ಲಿ ಜೂ. 14ರಿಂದ 21ರ ವರೆಗೆ ಲಾಕ್‌ ಡೌನ್‌ ಮುಂದುವರಿಯಲಿದೆ ಎಂದು ಹೇಳಿದೆ.

ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಕನ್ನಡಕದ ಅಂಗಡಿಗಳು, ಕೃಷಿ, ಪಿಡಬ್ಲ್ಯುಡಿ, ವಸತಿ, ಆರ್‌ಟಿಒ, ಸಹಕಾರ, ನಬಾರ್ಡ್‌ ಸಹಿತ ಸರಕಾರಿ ಇಲಾಖೆಗಳಲ್ಲಿ ಶೇ. 50 ಸಿಬಂದಿ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆರೋಗ್ಯ ಸಂಬಂಧಿ ಕೌಶಲ ತರಬೇತಿಗೂ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next