Advertisement

ಕೋವಿಡ್ : ಐಪಿಎಲ್‌ ತೊರೆದ ಅಂಪಾಯರ್ಸ್

11:32 PM Apr 29, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಆರ್ಭಟದಿಂದಾಗಿ ಕೆಲವು ಆಟಗಾರರು ಈಗಾಗಲೇ ಐಪಿಎಲ್‌ ತೊರೆದಿದ್ದಾರೆ. ಇವರ ಬೆನ್ನಲ್ಲೇ ಇದೀಗ ಇಬ್ಬರು ಅಂಪಾಯರ್‌ಗಳು ಕೂಡ ಟೂರ್ನಿಯಿಂದ ಹೊರಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ತವರಿನ ನಿತಿನ್‌ ಮೆನನ್‌ ಮತ್ತು ಆಸ್ಟ್ರೇಲಿಯದ ಪಾಲ್‌ ರೀಫೆಲ್‌ ಅವರು ವೈಯುಕ್ತಿಕ ಕಾರಣ ನೀಡಿ ಐಪಿಎಲ್‌ನಿಂದ ದೂರ ಹೋಗುತ್ತಿದ್ದಾರೆ.

ಇಂದೋರ್‌ನವರಾದ ನಿತಿನ್‌ ಮೆನನ್‌ ಅವರ ತಾಯಿ ಮತ್ತು ಹೆಂಡತಿ ಇಬ್ಬರಿಗೂ ಕೋವಿಡ್‌ ಸೋಕು ತಗುಲಿದೆ. ಈ ಕಷ್ಟಕರ ಸಂದರ್ಭದಲ್ಲಿ ಕುಟುಂಬದ ಜತೆ ತಾನು ಇರಬೇಕಾದ ಅಗತ್ಯ ಬಹಳ ಇದೆ ಎಂದು ಮೆನನ್‌ ಹೇಳಿದ್ದಾರೆ.

ಭಾರತದಿಂದ ವಿಮಾನಗಳಿಗೆ ಆಸ್ಟ್ರೇಲಿಯ ನಿರ್ಬಂಧ ಹೇರಿದ್ದು ರೀಫೆಲ್‌ ಭೀತಿಗೆ ಕಾರಣವಾಗಿದೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ ಸ್ಥಳೀಯ ಅಂಪಾಯರ್‌ಗಳಿಗೆ ಸಜ್ಜಾಗಿರುವಂತೆ ಸೂಚಿಸಲಾಗಿತ್ತು. ಅದರಂತೆ ಮೆನನ್‌ ಮತ್ತು ರೀಫೆಲ್‌ ಕರ್ತವ್ಯ ನಿಭಾಯಿಸಬೇಕಿದ್ದ ಪಂದ್ಯಗಳಿಗೆ ಬಿಸಿಸಿಐ ಬೇರೆ ಅಂಪಾಯರ್‌ಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next