Advertisement
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈ ವರ್ಷ ಶಾದಿಭಾಗ್ಯದ ಮಾದರಿಯಲ್ಲಿ ಸಪ್ತಪದಿಯೋಜನೆ ಅನುಷ್ಠಾನಗೊಳಿಸಿತ್ತು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವಂಥ ದೇವಸ್ಥಾನಗಳಲ್ಲಿ ಉಚಿತ ಸಾಮೂಹಿಕವಿವಾಹ ಮಾಡಿಕೊಡುವ ಕಾರ್ಯಕ್ರಮ ಇದಾಗಿತ್ತು. ಕಳೆದ ಬೇಸಿಗೆಯಲ್ಲಿಯೇ ಕಾರ್ಯಕ್ರಮ ಆರಂಭಿಸಿತ್ತು. ಅದಕ್ಕೆ ಜಿಲ್ಲೆಯಲ್ಲೂ ವ್ಯಾಪಕ ಸ್ಪಂದನೆ ಸಿಕ್ಕಿತ್ತು. ಆದರೆ, ಕೋವಿಡ್-19 ಹಾವಳಿಯಿಂದ ಕಾರ್ಯಕ್ರಮಕ್ಕೆ ಹಿನ್ನಡೆಯಾಯಿತು.
Related Articles
Advertisement
ಪ್ರಯತ್ನಕ್ಕೆ ಕೋವಿಡ್ ಅಡ್ಡಿ ಮಾಡಿದ್ದರೂಜನರಿಂದ ಸಿಕ್ಕ ಸ್ಪಂದನೆ ಸರ್ಕಾರಕ್ಕೂ ಪ್ರೇರಣೆನೀಡಿದೆ. ಹೀಗಾಗಿ ಮುಜರಾಯಿ ಸಚಿವರುಈಚೆಗೆ ಮತ್ತೂಮ್ಮೆ ಸಭೆ ನಡೆಸಿ ಸಪ್ತಪದಿಯೋಜನೆ ಮುಂದುವರಿಸಲು ಸೂಚನೆ ನೀಡಿದ್ದು, ಜನವರಿ, ಫೆಬ್ರವರಿಯಲ್ಲಿ ಆರು ದಿನಗಳನ್ನು ನಿಗದಿ ಮಾಡಿದ್ದಾರೆ. ಈ ಬಗ್ಗೆ ಪ್ರಚಾರ ನಡೆಸಿ ಬಡವರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಏನಿದು ಸಪ್ತಪದಿ?: ಬಡವರು ಮಕ್ಕಳ ಮದುವೆ ಮಾಡಲು ನಾನಾ ಕಷ್ಟ ಪಡುತ್ತಾರೆ.ಸಾಲ ಮಾಡಿ ದುಂದು ವೆಚ್ಚ ಮಾಡುತ್ತಾರೆ.ಅದರ ಬದಲಿಗೆ ಸರ್ಕಾರವೇ ಸಪ್ತಪದಿಯೋಜನೆ ಹೆಸರಿನಲ್ಲಿ ಸಾಮೂಹಿಕವಿವಾಹ ಮಾಡಲು ಮುಂದಾಗಿತ್ತು.ಈ ರೀತಿ ಮದುವೆಯಾದ ವರನಿಗೆ 5 ಸಾವಿರ ರೂ. ವಧುವಿಗೆ 10 ರೂ.ಹಾಗೂ 8 ಗ್ರಾಂ ತಾಳಿಯನ್ನು ಸರ್ಕಾರವೇನೀಡುತ್ತಿತ್ತು. ಇನ್ನು ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆಯನ್ನು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಯೇ ನೋಡಿಕೊಳ್ಳಬೇಕಿತ್ತು. ಒಂದು ಬಾರಿ
25ರಿಂದ 50 ಮದುವೆಗಳನ್ನು ಮಾಡಲು ಅವಕಾಶವಿತ್ತು. ಅದಕ್ಕಿಂತ ಹೆಚ್ಚು ಮದುವೆ ನೋಂದಣಿಯಾಗಿದ್ದರೆ ಸರ್ಕಾರದ ಗಮನಕ್ಕೆ ತರಬೇಕಿತ್ತು. ಇನ್ನು ಮದುವೆಯಾದಲ್ಲಿ ಸ್ಥಳದಲ್ಲೇ ಸಹಾಯಧನದ ಚೆಕ್ ವಿತರಿಸಿದರೆ,ಉಪನೋಂದಣಾಧಿಕಾರಿ ಮದುವೆ ನೋಂದಣಿ ಮಾಡಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇತ್ತು.
ರಾಜ್ಯ ಸರ್ಕಾರ ಆರಂಭಿಸಿದ್ದ ಸಪ್ತಪದಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಕೋವಿಡ್ ಕಾರಣಕ್ಕೆ ಯಾವ ಮದುವೆಗಳೂ ನಡೆದಿಲ್ಲ. ನೋಂದಣಿ ಮಾಡಿದವರನ್ನು ಸಂಪರ್ಕಿಸಿದ್ದು, ಅವರೆಲ್ಲ ಈಗಾಗಲೇ ಮದುವೆಗಳನ್ನು ಮುಗಿಸಿದ್ದಾರೆ. ಈಗ ಮತ್ತೂಂದು ಸೂಚನೆ ಬಂದಿದ್ದು ಜನವರಿ, ಫೆಬ್ರವರಿಯಲ್ಲಿ ಮತ್ತೆ ಮದುವೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಪ್ರಚಾರ ನೀಡಲಾಗುವುದು. –ಸೆಲ್ವಮಣಿ, ದತ್ತಿ ಸಹಾಯಕ, ಧಾರ್ಮಿಕ ದತ್ತಿ ಇಲಾಖೆ, ರಾಯಚೂರು
-ಸಿದ್ಧಯ್ಯಸ್ವಾಮಿ ಕುಕುನೂರು