Advertisement

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ; ದ.ಕ. 29, ಉಡುಪಿಯ 21 ಆಸ್ಪತ್ರೆಗಳು

07:34 AM Jun 22, 2020 | mahesh |

ಮಂಗಳೂರು/ ಉಡುಪಿ: ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 29 ಆಸ್ಪತ್ರೆಗಳನ್ನು ಉಡುಪಿ ಜಿಲ್ಲೆಯ 21 ಆಸ್ಪತ್ರೆಗಳನ್ನು ಸರಕಾರ ಗುರುತಿಸಿದೆ. ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಕಾರ್ಡ್‌ನ
ಮಾನದಂಡದಂತೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬದ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಹಾಗೂ ಎಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬದ ಚಿಕಿತ್ಸಾ ವೆಚ್ಚದ ಶೇ. 30ರಷ್ಟು ಭಾಗವನ್ನು ಸುವರ್ಣ ಕರ್ನಾಟಕ ಆರೋಗ್ಯ ಟ್ರಸ್ಟ್‌ ವತಿಯಿಂದ ಭರಿಸಲಾಗುತ್ತದೆ.

Advertisement

ಮಾಹಿತಿ ಕಡ್ಡಾಯ
ರಾಜ್ಯ ಸರಕಾರ ಗುರುತಿಸಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿ ಬಂದಿದೆ. ಖಾಸಗಿ ಆಸ್ಪತ್ರೆಗಳ ಜತೆ ಆರೋಗ್ಯ ಇಲಾಖೆ ಮಾತುಕತೆ ನಡೆಸಿ ಚಿಕಿತ್ಸೆಯ ಬಗ್ಗೆ ಮುಂದಿನ ಪ್ರಕ್ರಿಯೆಗಳು ಜರಗಲಿವೆ. ಸೋಂಕು ಬಾಧಿತರು ದಾಖಲಾದರೆ ಅವರ ಮಾಹಿತಿಯನ್ನು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ಸಲ್ಲಿಸಬೇಕಾಗು ತ್ತದೆ. ಈ ವಿವರವನ್ನು ತೆಗೆದುಕೊಂಡು ಆ ರೋಗಿ ಸಂಪರ್ಕ ಸಾಧಿಸಿದ ವಿವರ, ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಮಾಹಿತಿ ಯನ್ನು ಆರೋಗ್ಯ ಇಲಾಖೆ ಸಂಗ್ರಹಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ಅವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ಆಸ್ಪತ್ರೆಗಳು
ಮಂಗಳೂರಿನ ಅಂಬೇಡ್ಕರ್‌ ಸರ್ಕಲ್‌ ಮತ್ತು ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಗಳು, ದೇರಳಕಟ್ಟೆ ಮತ್ತು ಕೊಡಿಯಾಲ್‌ಬೈಲ್‌ನಲ್ಲಿರುವ ಯೇನಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಪಂಪ್‌ವೆಲ್‌ನ ಇಂಡಿಯಾನ ಆಸ್ಪತ್ರೆ, ಒಮೇಗಾ ಆಸ್ಪತ್ರೆ ಮತ್ತು ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಒಂಕಾಲಜಿ, ಫಳ್ನೀರ್‌ನ ಯುನಿಟಿ ಆಸ್ಪತ್ರೆ, ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆ, ದೇರಳಕಟ್ಟೆಯ ಜ| ಕೆ.ಎಸ್‌. ಹೆಗ್ಡೆ ಆಸ್ಪತ್ರೆ, ಕುಂಟಿಕಾನದ ಎ.ಜೆ. ಆಸ್ಪತ್ರೆ, ಮುಕ್ಕದ ಶ್ರೀನಿವಾಸ ಆಸ್ಪತ್ರೆ, ನಾಟೆಕಲ್‌ನ ಕಣಚೂರು ಆಸ್ಪತ್ರೆ, ಹಂಪನಕಟ್ಟೆ ಜಿ.ಎಚ್‌.ಎಸ್‌. ರಸ್ತೆಯ ತಾರಾ ಆಸ್ಪತ್ರೆ, ಮೂಡುಬಿದಿರೆಯ ಆಳ್ವಾಸ್‌ ಹೆಲ್ತ್‌ ಸೆಂಟರ್‌, ಬಂಟ್ವಾಳ ಬಿ.ಸಿ.ರೋಡ್‌ನ‌ ಸೋಮಯಾಜಿ ಆಸ್ಪತ್ರೆ, ತುಂಬೆಯ ಫಾದರ್‌ ಮುಲ್ಲರ್‌ ಆಸ್ಪತ್ರೆ, ಪುತ್ತೂರಿನ ಪ್ರಗತಿ ಆಸ್ಪತ್ರೆ, ಆದರ್ಶ ಆಸ್ಪತ್ರೆ,
ಚೇತನಾ ಆಸ್ಪತ್ರೆ, ಮಹಾವೀರ ಮೆಡಿಕಲ್‌ ಸೆಂಟರ್‌, ಧನ್ವಂತರಿ ಆಸ್ಪತ್ರೆ, ಬೆಳ್ತಂಗಡಿಯ ಬೆನಕ ಹೆಲ್ತ್‌ ಸೆಂಟರ್‌, ಅಭಯ ಆಸ್ಪತ್ರೆ, ಲಾೖಲದ ಜ್ಯೋತಿ ಆಸ್ಪತ್ರೆ, ಉಜಿರೆಯ ಎಸ್‌ಡಿಎಂ ಆಸ್ಪತ್ರೆ, ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ, ಬದ್ಯಾರಿನ ಫಾ| ಎಲ್‌.ಎಂ. ಪಿಂಟೋ ಹೆಲ್ತ್‌ ಸೆಂಟರ್‌, ಸುಳ್ಯದ ಕೆವಿಜಿ ಆಸ್ಪತ್ರೆ.

ಉಡುಪಿಯ ಆಸ್ಪತ್ರೆಗಳು
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಆದರ್ಶ ಆಸ್ಪತ್ರೆ, ನ್ಯೂಸಿಟಿ ಆಸ್ಪತ್ರೆ, ಪ್ರಸಾದ್‌ ನೇತ್ರಾಲಯ, ಮಿತ್ರ ಆಸ್ಪತ್ರೆ, ಹೈಟೆಕ್‌ ಆಸ್ಪತ್ರೆ, ಸುನಾಗ್‌ ಆರ್ಥೋ ಕೇರ್‌ ಆ್ಯಂಡ್‌ ಮಲ್ಟಿ ಸ್ಪೆಶಾಲಿಟಿ ಸೆಂಟರ್‌, ದೊಡ್ಡಣಗುಡ್ಡೆಯ ಎ.ವಿ. ಬಾಳಿಗಾ ಆಸ್ಪತ್ರೆ, ಬನ್ನಂಜೆಯ ಮಂಜುನಾಥ ಕಣ್ಣಿನ ಆಸ್ಪತ್ರೆ, ಬ್ರಹ್ಮಾವರದ ಮಹೇಶ ಆಸ್ಪತ್ರೆ, ಪ್ರಣವ್‌ ಆಸ್ಪತ್ರೆ, ಕೋಟೇಶ್ವರದ ಸರ್ಜನ್ಸ್‌ ಆಸ್ಪತ್ರೆ, ಕುಂದಾಪುರದ ಆದರ್ಶ ಆಸ್ಪತ್ರೆ, ಚಿನ್ಮಯಿ ಆಸ್ಪತ್ರೆ, ಎನ್‌ಆರ್‌ ಆಚಾರ್ಯ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ, ಶ್ರೀಮಂಜುನಾಥ ಆಸ್ಪತ್ರೆ, ಶ್ರೀಮಾತಾ ಆಸ್ಪತ್ರೆ, ವಿವೇಕ ಆಸ್ಪತ್ರೆ, ನಿಟ್ಟೆಯ ಗಾಜ್ರಿಯ ಆಸ್ಪತ್ರೆ, ಕಾರ್ಕಳದ ಸ್ಪಂದನ ಆಸ್ಪತ್ರೆ.

Advertisement

Udayavani is now on Telegram. Click here to join our channel and stay updated with the latest news.

Next