Advertisement
ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯ 140 ಬೆಡ್‌ಗಳಲ್ಲಿ ಸುಮಾರು 125 ಬೆಡ್‌ಗಳು ಈಗಾಗಲೇ ಭರ್ತಿಯಾಗಿವೆ. ಇಲ್ಲಿ ಐಸಿಯು (ಇಂಟೆನ್ಸಿವ್ ಕೇರ್ ಯುನಿಟ್) 8 ಮತ್ತು ಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್) 10 ಒಟ್ಟು 18 ಇದ್ದು ಇವುಗಳಲ್ಲಿ 16 ಭರ್ತಿಯಾಗಿವೆ. ಹೀಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ 32 ಬೆಡ್‌ಗಳನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಇವೆಲ್ಲವೂ ಭರ್ತಿಯಾಗಿವೆ ಎಂದು ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
Related Articles
ಬಹುತೇಕ ರೋಗಿಗಳಿಗೆ ರೋಗ ಲಕ್ಷಣ ಇಲ್ಲದೆ ಇರಬಹುದು ಅಥವಾ ಸೌಮ್ಯ ಲಕ್ಷಣ ಇರಬಹುದು. ಆದರೆ ಲಕ್ಷಣ ಇರುವವರಲ್ಲಿ ಬಹುತೇಕರಿಗೆ ಆಕ್ಸಿಜನ್ ಅಗತ್ಯವಿರುತ್ತದೆ. ಆದ್ದರಿಂದ ಸಾಮಾನ್ಯ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡು “ನಾವು ಸುಖವಾಗಿದ್ದೇವೆ. ಕೋವಿಡ್ ದೊಡ್ಡ ಸಂಗತಿಯಲ್ಲ. ಸೋಂಕು ಬಂದರೇನಂತೆ?’ ಎಂಬ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ಇತರರ ಕಷ್ಟ ಗೊತ್ತಿಲ್ಲ. ಇಂತಹ ಜನರಿಂದ ಪ್ರೇರಿತರಾದವರು ಗುಂಪು ಸೇರಿ ಇತರರಿಗೂ ಸೋಂಕು ಹರಡುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಸೋಂಕನ್ನು ಯಾರೂ ಲಘುವಾಗಿ ಪರಿಗಣಿಸಬೇಡಿ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ಪಾಲಿಸಿ, ಗುಂಪು ಇರುವಲ್ಲಿ ತೆರಳಬೇಡಿ.
– ಡಾ| ಶಶಿಕಿರಣ್ ಉಮಾಕಾಂತ್, ನೋಡಲ್ ಅಧಿಕಾರಿ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ
Advertisement