Advertisement
ಜಿಲ್ಲೆಗೆ ಕೊರೊನಾ ಹೆಮ್ಮಾರಿ ಕಾಲಿಟ್ಟು ಇಂದಿಗೆ (ಜು.10) ಬರೋಬ್ಬರಿ ಐದು ತಿಂಗಳು ಕಳೆದಿದೆ. ಸೌದಿಯಿಂದ ಮರಳಿದ್ದ 76 ವರ್ಷದ ವೃದ್ಧ ಮಾ.10ರಂದು ಮೃತಪಟ್ಟಿದ್ದ. ಈತ ಕೋವಿಡ್ ದಿಂದಲೇ ಸಾವನ್ನಪ್ಪಿದ್ದ ಎಂದು ಮಾ.12ರಂದು ಖಾತ್ರಿಯಾಗಿತ್ತು. ಈ ಮೂಲಕ ಸೋಂಕಿನಿಂದ ದೇಶದಲ್ಲೇ ಮೊದಲು ಸಾವು ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ (ಆ.8) ಜಿಲ್ಲೆಯಲ್ಲಿ ಒಟ್ಟು 7,147 ಜನರಿಗೆ ಕೋವಿಡ್ ವಕ್ಕರಿಸಿದೆ. 136 ಜನರು ಸೋಂಕಿಗೆ ತುತ್ತಾಗಿದ್ದಾರೆ.
Related Articles
Advertisement
ಮಕ್ಕಳು ಸೋಂಕಿತರ ಸಂಪರ್ಕ ಮತ್ತು ಸಣ್ಣ-ಪುಟ್ಟ ರೋಗಗಳ ಲಕ್ಷಣಗಳಿದ್ದ ಸೋಂಕಿತರರಾಗುತ್ತಿದ್ದಾರೆ. ಯುವಕರು ಕೆಮ್ಮು, ಜ್ವರ ಬಳಲುತ್ತಿರುವ ವಿಷಮಶೀತ ಜ್ವರ ಪ್ರಕರಣದ ರೋಗಿಗಳಿದ್ದು, ಸಮಾಧಾನದ ಸಂಗತಿ ಎಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಬೇಗ ಗುಣಮುಖರೂ ಆಗುತ್ತಿದ್ದಾರೆ ಎಂಬುವುದು ತಜ್ಞರು ಹೇಳಿಕೆ.
40ಕ್ಕೂ ಮೇಲ್ಪಟ್ಟವರ ಸ್ಥಿತಿಯೇನು?: ಯುವಕರು ಅತಿ ಹೆಚ್ಚು ಸೋಂಕಿಗೆ ಗುರಿಯಾಗುತ್ತಿದ್ದರೂ, 40 ವರ್ಷಕ್ಕೂ ಮೇಲ್ಪಟ್ಟವರ ಸ್ಥಿತಿ ಅಕ್ಷರಶಃ ವಿಷಮವಾಗಿದೆ. 40ರಿಂದ 50 ವರ್ಷದೊಳಗಿನ 1,088 ಜನರು ಮತ್ತು 50 ವರ್ಷಕ್ಕೂ ಮೇಲ್ಪಟ್ಟ 1,566 ಮಂದಿಗೆ ಸೋಂಕು ಹರಡಿದೆ. ಈ ವಯಸ್ಸಿನರಿಗೆ ಮಧುಮೇಹ, ಅಕ್ತದೊತ್ತಡ, ಹೃದ್ರೋಗ ಕಾಡುತ್ತಿರುವುದರಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಸೂಕ್ತ ಚಿಕಿತ್ಸೆ ದೊರೆತರೂ ರೋಗಿಗಳು ಕೊನೆಯುಸಿರೆಳೆಯುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 40ರಿಂದ 50 ವರ್ಷದೊಳಗಿನ 1,088 ಸೋಂಕಿತರಲ್ಲಿ 659 ರೋಗಿಗಳು ಗುಣಮುಖರಾಗಿದ್ದಾರೆ. 412 ರೋಗಿಗಳು ಸಕ್ರಿಯಾಗಿದ್ದು, ಈ ವಯೋಮಾನದ 17 ಮೃತಪಟ್ಟಿದ್ದಾರೆ. ಅದೇ ರೀತಿ 50 ವರ್ಷಕ್ಕೂ ಮೇಲ್ಪಟ್ಟ 1,566 ರೋಗಿಗಳಲ್ಲಿ 685 ಜನರು ಗುಣಮುಖಗೊಂಡಿದ್ದರೆ, ಇನ್ನೂ 777 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 104 ರೋಗಿಗಳು ಕೋವಿಡ್ ಗೆ ಬಲಿಯಾಗಿದ್ದಾರೆ.
ಶೇ.36 ಐಎಲ್‌ಐ ಪ್ರಕರಣ : ಜಿಲ್ಲೆಯ ಕೋವಿಡ್ ರೋಗಿಗಳಲ್ಲಿ ವಿಷಮ ಶೀತ ಜ್ವರ(ಐಎಲ್‌ಐ)ದಿಂದ ಬಳಲುತ್ತಿರುವವರ ಸಂಖ್ಯೆ ಅಧಿ ಕವಾಗಿದೆ. ಶನಿವಾರದವರೆಗೆ ದೃಢಪಟ್ಟ ಒಟ್ಟು 7,147 ಸೋಂಕಿತರ ಪೈಕಿ 2,574 ಜನರು ಅಂದರೆ, ಶೇ.36.2 ಐಎಲ್‌ಐ ಪ್ರಕರಣಗಳೇ ಆಗಿವೆ. ಸೋಂಕಿತರ ನೇರ ಸಂಪರ್ಕಕ್ಕೆ ಬಂದವರು ಶೇ.18.3 (1,298 ರೋಗಿಗಳು), ಸೋಂಕಿನ ಮೂಲವೇ ಪತ್ತೆಯಾಗದ ಶೇ.17.4 (1,239), ಮಹಾರಾಷ್ಟ್ರದಿಂದ ವಾಪಸ್ ಆದ ವಲಸಿಗರು ಶೇ.17.4 (1,238), ತೀವ್ರ ಉಸಿರಾಟದ ತೊಂದರೆ (ಸಾರಿ)ಯಿಂದ ಬಳಲುತ್ತಿದವರು ಕೇವಲ ಶೇ.3 (235)ರಷ್ಟು ರೋಗಿಗಳು ಸೋಂಕಿನಿಂದ ಬಳಲುತ್ತಿದ್ದಾರೆ.
ಯುವಕರು ಹೆಚ್ಚಾಗಿ ಹೊರಗಡೆ ಸುತ್ತುತ್ತಿರುವುದರಿಂದ ಅವರಲ್ಲೇ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸುವುದು, ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಆದರೂ, ನಿರ್ಲಕ್ಷಿಸುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರೋಗ ನಿರೋಧಕಶಕ್ತಿ ಹೆಚ್ಚಿರುವುದರಿಂದ ಯುವಕರು ಬೇಗ ಗುಣಮುಖರಾಗುತ್ತಿದ್ದಾರೆ. ಆದರೆ, ತಮಗೆ ಅರಿವಿದಲ್ಲೇ ತಮ್ಮ ಮನೆಗಳಲ್ಲಿ ಈಗಾಗಲೇ ಬೇರೆ-ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. -ಡಾ.ರಾಜಶೇಖರ ಮಾಲಿ, ಜಿಲ್ಲಾ ವೈದ್ಯಾಧಿಕಾರಿ.
-ರಂಗಪ್ಪ ಗಧಾರ