Advertisement

ಹರಪನಹಳ್ಳಿ: ಮೂವರಿಗೆ ಕೋವಿಡ್ ದೃಢ

10:24 AM Jul 06, 2020 | Suhan S |

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಇಬ್ಬರು ಮತ್ತು ಹರಪನಹಳ್ಳಿ ಪಟ್ಟಣದಲ್ಲಿ ಓರ್ವ ಸೇರಿದಂತೆ ಒಟ್ಟು ಮೂರು ಜನರಿಗೆ ಭಾನುವಾರ ಕೋವಿಡ್ ಪಾಸಿಟವ್‌ ವರದಿ ಬಂದಿದೆ.

Advertisement

ಅರಸೀಕೆರೆ ಗ್ರಾಮದಲ್ಲಿ ಮೂವರು ಪೊಲೀಸ್‌ ಪೇದೆಗಳು ಸೇರಿ ಒಟ್ಟು 5 ಜನರಿಗೆ ಕೋವಿಡ್ ದೃಢಪಟ್ಟಿದೆ. ಅರಸೀಕೆರೆಯಲ್ಲಿ ಬಸ್‌ ಸ್ಟ್ಯಾಂಡ್‌ ಹತ್ತಿರ ಅಂಗಡಿ 47 ವರ್ಷದ ವ್ಯಾಪಾರಿ ಹಾಗೂ ಅವರ ಅಳಿಯ 17 ವರ್ಷದ ಯುವಕನಿಗೆ ಕೋವಿಡ್ ದೃಢಪಟ್ಟಿರುವುದರಿಂದ ಅವರನ್ನು ಬಳ್ಳಾರಿ ಕೋವಿಡ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಪಟ್ಟಣದ ಸುಣ್ಣಗಾರಗೇರಿಯ 49 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಇಲ್ಲಿಯ ಪ್ರದೇಶವನ್ನು ಕಂಟೈನ್‌ಮೆಂಟ್‌ ಜೋನ್‌ ಎಂದು ಗುರುತಿಸಲಾಗಿದ್ದು ಪೊಲೀಸ್‌ ಭದ್ರತೆ ಹಾಕಲಾಗಿದೆ. ಕೋವಿಡ್ ಸೋಂಕಿತನ್ನು ಬಳ್ಳಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ತಾಲೂಕಿನ ಮಾಚಿಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು 100 ಹಾಸಿಗೆ ಕೋವಿಡ್‌-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು ಇಲ್ಲಿಗೆ ಜಿಲ್ಲಾ ವೈದ್ಯಾದಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಯೋಜನಾ ಅಧಿಕಾರಿ ರಮೇಶ್‌, ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಶಿವಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಬಿ.ಆರ್‌.ನಾಗರಾಜನಾಯ್ಕ, ಪಿಎಸ್‌ಐ ಸಿ. ಪ್ರಕಾಶ್‌, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಭೀಮನಾಯ್ಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next