Advertisement

142 ಜನರಿಗೆ ಕೋವಿಡ್‌ ಸೋಂಕು

04:11 PM Aug 16, 2020 | Suhan S |

ಗದಗ: ಜಿಲ್ಲೆಯಲ್ಲಿ ಮತ್ತೆ ಶತಕದ ಗಡಿ ದಾಟಿದೆ. ಶನಿವಾರ ಹೊಸದಾಗಿ 142 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 2977ಕ್ಕೆ ಏರಿಕೆಯಾಗಿದೆ.

Advertisement

ಶನಿವಾರ 101 ಜನರು ಸೇರಿದಂತೆ ಈವರೆಗೆ 1758 ಜನರು ಗುಣಮುಖರಾಗಿದ್ದು, 1164 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯ ಮುಂಡರಗಿ-19, ನರಗುಂದ-22, ರೋಣ-44, ಶಿರಹಟ್ಟಿ-09, ಹೊರಜಿಲ್ಲೆಯ ಮೂವರಿಗೆ ಸೋಂಕು ಖಚಿತವಾಗಿದೆ. ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾಳಕೇಶ್ವರ ಕಾಲೋನಿ, ಸಂಬಾಪೂರ ರಸ್ತೆ, ರಾಜೀವ್‌ ಗಾಂಧಿ ನಗರ, ಕರೆಮಾಕಳ ಬಡಾವಣೆ, ಶಿವಬಸವ ನಗರ, ವಿವೇಕಾನಂದ ನಗರ, ಸಾಯಿಬಾಬಾ ದೇವಸ್ಥಾನ ಹತ್ತಿರ, ಜಿಮ್ಸ್‌ ಕ್ವಾಟರ್ಸ್‌, ವಕೀಲ್‌ ಚಾಳ, ವಿರೇಶ್ವರ ನಗರ, ಹುಡ್ಕೊ ಕಾಲೋನಿ, ಮಖಾನ್‌ಗಲ್ಲಿ, ಕೇಶವ ನಗರ, ಬೆಟಗೇರಿ ಮೈಲಾರ ಲಿಂಗೇಶ್ವರ ದೇವಸ್ಥಾನ ಹತ್ತಿರ, ವಕ್ಕಲಗೇರಿ ಓಣಿ, ರಾಚೋಟೇಶ್ವರ ನಗರ, ಮಹಾವೀರ ಕಾಲೋನಿ, ಶಿವಾನಂದ ನಗರ, ಗಂಗಾಪೂರ ಪೇಟ್‌ ಮ್ಯಾಗೇರಿ ಓಣಿ, ಜಿಮ್ಸ್‌ ಆಸ್ಪತ್ರೆ, ಎಸ್‌. ಎಂ.ಕೆ ನಗರ, ಗದಗ ತಾಲೂಕಿನ ಬೆಳದಡಿ, ನಾಗಾವಿ ತಾಂಡ, ಹರ್ತಿ, ದುಂದೂರ, ಹಾತಲಗೇರಿ, ತಿಮ್ಮಾಪೂರ, ಮುಳಗುಂದ ಭಾಗದ ಜನರಿಗೆ ಸೋಂಕು ದೃಢಪಟ್ಟಿದೆ.

ಶಿರಹಟ್ಟಿ ಪಟ್ಟಣದ ಕಲ್ಮೇಶ್ವರ ದೇವಸ್ಥಾನ ಹತ್ತಿರ, ಶಿರಹಟ್ಟಿ ತಾಲೂಕಿನ ದೇವಿಹಾಳ, ಲಕ್ಷ್ಮೇಶ್ವರದ ಬಜಾರ್‌ ರಸ್ತೆ, ಲಕ್ಷ್ಮೇಶ್ವರದ ಭಳಗೇರಿ ಓಣಿ, ಆಡರಕಟ್ಟಿ, ಕನಕವಾಡ, ಹರಿಪೂರ, ಮುಂಡರಗಿ ಪಟ್ಟಣದ ಎ.ಡಿ.ನಗರ, ಹೊಸ ಬಸ್‌ ನಿಲ್ದಾಣ, ಬಜಂತ್ರಿ ಓಣಿ, ಪುರಸಭೆ, ಹಮ್ಮಿಗಿ ಪ್ಲಾಟ್‌, ವಿದ್ಯಾನಗರ, ಹುಡ್ಕೊ ಕಾಲೋನಿ, ಅಂಬಾಭವಾನಿ ನಗರ, ಆಯುರ್ವೇ ಕ್‌ ಕಾಲೇಜ್‌, ಕಡ್ಲಿಪೇಟೆ ಓಣಿ, ಮುಂಡರಗಿ ತಾಲೂಕಿನ ದೋಣಿ, ಮೇವುಂಡಿ, ಪೇಟಾಲೂರ, ಹಿರೇವಡ್ಡಟ್ಟಿ, ಮುಷ್ಠಿಕೊಪ್ಪ, ನರಗುಂದ ಪಟ್ಟಣದ ನಾಗಲಿಂಗೇಶ್ವರ ದೇವಸ್ಥಾನ ಹತ್ತಿರ, ನರೇಗಲ್‌ ಹೊಸಪೇಟ ಓಣಿ, ನರಗುಂದ ತಾಲೂಕಿನ ಕುರ್ಲಗೇರಿ, ಸೋಮಾಪೂರ, ಶಿರೋಳ, ಹಿರೇಕೊಪ್ಪ, ಚಿಕ್ಕನರಗುಂದದ ಜನರಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ.

ರೋಣ ಪಟ್ಟಣದ ವಾರ್ಡ ನಂ 8, ರೋಣ ತಾಲೂಕಿನ ಸೂಡಿ, ಹಿರೇಹಾಳ, ನರೆಗಲ್‌, ಮಾರನಬಸರಿ, ಕೋತಬಾಳ, ಕಲ್ಕಾಪೂರ, ಹದ್ಲಿ, ಜಕ್ಲಿ, ನಿಡಗುಂದಿ, ಬೆನಹಾಳ, ಸೋಮನಕಟ್ಟಿ, ಅಬ್ಬಿಗೇರಿ, ಹೊಳೆ ಆಲೂರ, ಯಾವಗಲ್‌, ಚಿಕ್ಕಮಣ್ಣೂರ, ಮೇಣಸಗಿ, ಗಜೇಂದ್ರಗಡ ಪಟ್ಟಣದ ಗಂಜಿ ಪೇಟ್‌, ದ್ಯಾಮವ್ವನ ದೇವಸ್ಥಾನ ಹತ್ತಿರ, ಕುಂಬಾರ ಓಣಿ, ವಾಣಿ ಪೇಟ್‌, ಕೆಇಬಿ, ಶಿದ್ದಾರೂಡಮಠ, ದುರ್ಗಾ ವೃತ್ತ, ಜವಳಿ ಪ್ಲಾಟ್‌ ಭಾಗದ ಕೆಲವರಿಗೆ ಸೋಂಕು ದೃಢಪಟ್ಟಿದೆ.

ಮತ್ತಿಬ್ಬರು ಕೋವಿಡ್‌ಗೆ ಬಲಿ: ಗದಗಿನ 36 ವರ್ಷದ ವ್ಯಕ್ತಿ(ಪಿ-189357)ಗೆ ಆ. 10ರಂದು ಸೋಂಕು ದೃಢಪಟ್ಟಿದ್ದು, ಅವರು ಆ. 12ರಂದು ಮೃತಪಟ್ಟಿದ್ದಾರೆ. ಗದಗಿನ ನಿವಾಸಿ 62 ವರ್ಷದ ವೃದ್ಧೆ(ಪಿ-144188)ಗೆ ಆ. 1ರಂದು ಕೋವಿಡ್ ಸೋಂಕು ಖಚಿತವಾಗಿದ್ದು, ನಿಮೋನಿಯಾದಿಂದ ಆ. 14ರಂದು ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next