Advertisement

ಕೋವಿಡ್‌: ಮೂವರು ಪಾಕ್‌ ಕ್ರಿಕೆಟಿಗರು ಗುಣಮುಖ; ಬುಧವಾರ ಇಂಗ್ಲೆಂಡಿಗೆ ಪಯಣ

12:08 AM Jul 07, 2020 | Sriram |

ಲಾಹೋರ್‌: ಕೋವಿಡ್‌ ಪಾಸಿಟಿವ್‌ ಹೊಂದಿದ್ದ ಪಾಕಿಸ್ಥಾನದ ಮೂವರು ಕ್ರಿಕೆಟಿಗರೀಗ ಗುಣಮುಖರಾಗಿದ್ದಾರೆ. ಇವರಲ್ಲಿ ನೆಗೆಟಿವ್‌ ಫ‌ಲಿತಾಂಶ ಕಂಡುಬಂದಿದ್ದು, ಬುಧವಾರ ಇಂಗ್ಲೆಂಡಿಗೆ ಪ್ರಯಾಣಿಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

Advertisement

ನೆಗೆಟಿವ್‌ ಫ‌ಲಿತಾಂಶ ದಾಖಲಿಸಿದ ಕ್ರಿಕೆಟಿಗರೆಂದರೆ ಹೈದರ್‌ ಅಲಿ, ಇಮ್ರಾನ್‌ ಖಾನ್‌ ಮತ್ತು ಕಾಶಿಫ್ ಭಟ್ಟಿ. ಜತೆಗೆ ಮಸಾಜ್‌ ಮಾಡುವ ಮಲಂಗ್‌ ಅಲಿ ಫ‌ಲಿತಾಂಶವೂ ನೆಗೆಟಿವ್‌ ಬಂದಿದ್ದು, ಅವರೂ ಲಂಡನ್ನಿಗೆ ವಿಮಾನ ಏರಲಿದ್ದಾರೆ.ಆದರೆ ವೇಗಿ ಹ್ಯಾರಿಸ್‌ ರವೂಫ್ ಅವರ ಫ‌ಲಿತಾಂಶ ಪುನಃ ಪಾಸಿಟಿವ್‌ ಬಂದ ಕಾರಣ ಅವರು ಪಾಕಿಸ್ಥಾನದಲ್ಲೇ ಚಿಕಿತ್ಸೆ ಮುಂದುವರಿಸಲಿದ್ದಾರೆ.

ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆಯಾದ 10 ಮಂದಿ ಕ್ರಿಕೆಟಿಗರ ಮೊದಲ ಸುತ್ತಿನ ಕೋವಿಡ್‌ ಫ‌ಲಿತಾಂಶ ಪಾಸಿಟಿವ್‌ ಬಂದಿತ್ತು. ಇವರನ್ನು ಹೊರತುಪಡಿಸಿ ಉಳಿದವರೆಲ್ಲ ಇಂಗ್ಲೆಂಡಿಗೆ ಪಯಣಿಸಿದ್ದರು. ದ್ವಿತೀಯ ಸುತ್ತಿನಲ್ಲಿ 6 ಮಂದಿಯಲ್ಲಿ ನೆಗೆಟಿವ್‌ ಫ‌ಲಿತಾಂಶ ಕಂಡುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next