Advertisement
ಗಣೇಶೋತ್ಸವ ಸೇರಿದಂತೆ ಹಲವು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಅಲ್ಲದೇ, ಆಗಸ್ಟ್ ತಿಂಗಳಿಡೀ ಮುಬಯಿಯಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳಿಗೆ ಹೋಲಿಸಿದರೆ, ಅದರ ಶೇ.28ರಷ್ಟು ಪ್ರಕರಣಗಳು ಸೆಪ್ಟಂಬರ್ ತಿಂಗಳ ಮೊದಲ 6 ದಿನಗಳಲ್ಲೇ ಪತ್ತೆಯಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಹೇಳಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.
Related Articles
Advertisement
ನಿಫಾ: ಮೃತ ಬಾಲಕನ ಸಂಪರ್ಕಿತರಿಗೆ ನೆಗೆಟಿವ್ :
ಸಮಾಧಾನದ ಸುದ್ದಿಯೆಂಬಂತೆ, ಕೇರಳದಲ್ಲಿ ನಿಫಾ ವೈರಸ್‌ಗೆ ಬಲಿಯಾದ 12 ವರ್ಷದ ಬಾಲಕನೊಂದಿಗೆ ನೇರ ಸಂಪರ್ಕಕ್ಕೆ ಬಂದವರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಬಾಲಕನ ಹೆತ್ತವರು ಹಾಗೂ ಆರೋಗ್ಯ ಸಿಬಂದಿ ಸೇರಿದಂತೆ 8 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೇರಳದಲ್ಲಿ ನಿರ್ಬಂಧ ತೆರವು :
ಕೇರಳದಲ್ಲಿ ಕೊರೊನಾ ಪ್ರಕರಣ ಸ್ವಲ್ಪ ತಗ್ಗಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ, ರವಿವಾರ ಲಾಕ್‌ಡೌನ್ ಅನ್ನು ಸರಕಾರ ತೆರವುಗೊಳಿಸಿದೆ. ಪಾಸಿಟಿವಿಟಿ ದರ ಶೇ.15.87ಕ್ಕಿಳಿದಿದ್ದು, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ತಗ್ಗಿದೆ. ಶೇ.76.15 ರಷ್ಟು ಮಂದಿಗೆ ಸಿಂಗಲ್ ಡೋಸ್ ಲಸಿಕೆ ಪೂರ್ಣಗೊಂಡಿದೆ. ಹೀಗಾಗಿ ನಿರ್ಬಂಧ ತೆರವು ಮಾಡಿದ್ದೇವೆ ಎಂದು ಸಿಎಂ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ಮಂಗಳ ವಾರ ರಾಜ್ಯದಲ್ಲಿ 25,772 ಪ್ರಕರಣ ಪತ್ತೆಯಾಗಿ, 189 ಮಂದಿ ಅಸುನೀಗಿದ್ದಾರೆ.