ಬೈಲಹೊಂಗಲ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ 2022ನ್ನು ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು.
ಬೆಳಗ್ಗೆ 7 ಗಂಟೆಗೆ ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣನ ಅರ್ಚಕರಾದ ಬಸಪ್ಪ ಡೊಳ್ಳಿನ್ ರಾಯಣ್ಣನ ಕತೃ ಗದ್ದುಗೆಗೆ ಪೂಜೆ ಸಲ್ಲಿಸಿದರು.
ನಂದಗಡದಿಂದ ಬಂದ ರಾಯಣ್ಣನ ಜ್ಯೋತಿಯನ್ನು ಬೆಳಗಾವಿ ಕಾಡಾ ಅಧ್ಯಕ್ಷ ಡಾ| ವಿಶ್ವನಾಥ ಪಾಟೀಲ್, ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಗುರುಲಿಂಗ ಶಿವಾಚಾರ್ಯರು, ಗಣ್ಯರು ಬರಮಾಡಿಕೊಂಡರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕಿತ್ತೂರು ನಂದಿ ಧ್ವಜಾರೋಹಣ ನೆರವೇರಿಸಿ, ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಸಂಗೊಳ್ಳಿಯ ಶ್ರೀ ಬೀರಲಿಂಗೇಶ್ವರ ಡೊಳ್ಳು ಕುಣಿತ, ಶ್ರೀ ಮರಿಯಮ್ಮ ದೇವಿ ಕರಡಿಮಜಲು, ಸಾರವಾಡದ ಶ್ರೀ ಶಕ್ತಿ ಗೊಂಬೆ ಕುಣಿತ ಹಾಗೂ ಗದ್ದಿ ಕರವಿನಕೊಪ್ಪದ ಡೊಳ್ಳಿನ ಮಜಲು, ಬೊಂಬೆ ಪ್ರದರ್ಶನ, ಇತರ ಕಲಾವಿದರು ಕಲಾ ಪ್ರದರ್ಶನ ನಡೆಸಿದರು.
ಈ ವೇಳೆ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಬಸವರಾಜ ನಾಗರಾಳ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ, ತಾಪಂ ಇಒ ಸುಭಾಸ ಸಂಪಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗ್ರಾಪಂ ಅಧ್ಯಕ್ಷ ಪಕೀರಪ್ಪ ಕುರಿ, ಉಪಾಧ್ಯಕ್ಷೆ ರತ್ನಾ ಅನೇಮಠ, ಸದಸ್ಯರಾದ ಬಸವರಾಜ ಕೊಡ್ಲಿ, ಶಿವಕುಮಾರ್ ಪೂಜಾರ, ವೀರೇಶ ಹಳೆಮನೆ, ಇಮಾಮಹುಸೇನ್ ಖುದ್ದುನವರ, ಸುರೇಶ ಮಾಳಗಿ, ಐ.ಎಸ್.ಪಾಟೀಲ, ಸಿ.ಕೆ. ಹೊಳೆಪ್ಪನ್ನವರ, ಉಮೇಶ ಲಾಳ, ಈರಣಗೌಡ ಪಾಟೀಲ್, ಅರುಣ್ ಯಲಿಗಾರ, ಚನ್ನಪ್ಪ ಹೊಳೆಪ್ಪನವರ, ಇತಿಹಾಸ ಸಂಶೋಧಕ ಬಸವರಾಜ ಕಮತ, ಮಲ್ಲಿಕಾರ್ಜುನ ಕೆ., ರಾಯಪ್ಪ ಹೆಗಡೆ, ಬಸವರಾಜ ಡೊಳ್ಳಿನ, ಮಲ್ಲಿಕಾರ್ಜುನ ಚನ್ನಕನವರ, ಸಂಪ್ರೀತ್ ತಿಗಡಿ, ಸುನೀಲ್ ಕುಲಕರ್ಣಿ, ಮಡಿವಾಳಪ್ಪ ಹಕ್ಕಿ , ಸುರೇಶ್ ಕುರಿ, ಪುಂಡಲಿಕ್ ಅಂಬಿಗೇರ ಇದ್ದರು.