Advertisement

ಟೆಸ್ಟಿಂಗ್ ಲ್ಯಾಬ್ ಸೀಲ್ ಡೌನ್: ಚಾಮರಾಜನಗರದಲ್ಲಿ ಲಭ್ಯವಾಗದ ಕೋವಿಡ್ ಪರೀಕ್ಷಾ ಫಲಿತಾಂಶ

06:32 PM Jun 29, 2020 | keerthan |

ಚಾಮರಾಜನಗರ: ಕೋವಿಡ್-19 ಪ್ರಯೋಗಾಲಯ ಸೀಲ್‌ಡೌನ್ ಆಗಿರುವುದರಿಂದ ಜಿಲ್ಲೆಯ ಕೋವಿಡ್ ಪರೀಕ್ಷಾ ಫಲಿತಾಂಶ ಸತತ ಎರಡನೆಯ ದಿನವಾದ ಸೋಮವಾರವೂ ಲಭ್ಯವಾಗಲಿಲ್ಲ.

Advertisement

ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ತೆರೆಯಲಾಗಿದ್ದು, ಕೋವಿಡ್ ಪರೀಕ್ಷೆ ನಡೆಸುವ ಪ್ರಯೋಗಾಲಯ ತಂತ್ರಜ್ಞೆಗೆ ಸೋಂಕು ತಗುಲಿದೆ. ಹೀಗಾಗಿ ಕಳೆದ ಶನಿವಾರದಿಂದ ಕೋವಿಡ್ ಪ್ರಯೋಗಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.

ಹೀಗಾಗಿ ಶನಿವಾರದಿಂದ ಸೋಮವಾರದವರೆಗೆ ನಡೆಸಿರುವ ಕೋವಿಡ್ ಶಂಕಿತರ ಗಂಟಲು ದ್ರವ ಮಾದರಿಯ ಪರೀಕ್ಷಾ ಫಲಿತಾಂಶ ದೊರೆತಿಲ್ಲ. ನಗರದ ಪ್ರಯೋಗಾಲಯ ಸೀಲ್ ಡೌನ್ ಆಗಿರುವುದರಿಂದ ಭಾನುವಾರ ರಾತ್ರಿ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಇದರ ವರದಿ ಮಂಗಳವಾರ ಬರುವ ನಿರೀಕ್ಷೆಯಿದೆ.

ಶನಿವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 33 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಓರ್ವ ಗುಣಮುಖನಾಗಿದ್ದಾನೆ. 32 ಸಕ್ರಿಯ ಪ್ರಕರಣಗಳಿವೆ. ಶನಿವಾರದಿಂದ ಲ್ಯಾಬ್ ಲಿತಾಂಶ ಲಭ್ಯವಾಗದ ಕಾರಣ ಎರಡು ದಿನದ ಮಾಹಿತಿ ಲಭ್ಯವಾಗಿಲ್ಲ. ಮಂಗಳವಾರ ಫಲಿತಾಂಶ ಬಂದರೆ ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next