Advertisement

ICMR leak: 81 ಕೋಟಿ ಭಾರತೀಯರ ಮಾಹಿತಿ ಸೋರಿಕೆ

11:50 PM Oct 30, 2023 | Team Udayavani |

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 81 ಕೋಟಿ ಭಾರತೀಯರ ಖಾಸಗಿ ಮಾಹಿತಿಗಳು ಡಾರ್ಕ್‌ವೆಬ್‌ನಲ್ಲಿ ಸೋರಿಕೆಯಾಗಿವೆ. ಕೊರೊನಾ ವೇಳೆ ಜನರ ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ(ಐಸಿಎಂಆರ್‌) ಸಂಗ್ರಹಿಸಿತ್ತು. ಇವು ಸೋರಿಕೆಯಾಗಿದ್ದು, ಇದನ್ನು ಮಾರಾಟಕ್ಕೂ ಇರಿಸಲಾಗಿದೆ.

Advertisement

ಏನೇನು ಸೋರಿಕೆ?
ಥ್ರೆಟ್ ಆ್ಯಕ್ಟರ್‌ ಎಂಬ ಎಕ್ಸ್‌ ಖಾತೆಯಲ್ಲಿ ಭಾರತೀಯರ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ 81.5 ಕೋಟಿ ಭಾರತೀಯರ ಮಾಹಿತಿ ಇದೆ. ಆಧಾರ್‌ ಕಾರ್ಡ್‌ ಸಂಖ್ಯೆ, ಪಾಸ್‌ಪೋರ್ಟ್‌ ಮಾಹಿತಿ, ಹೆಸರುಗಳು, ಮೊಬೈಲ್‌ ನಂಬರ್‌ ಮತ್ತು ಅವರ ವಿಳಾಸಗಳು ಇವೆ. ಈ ಬಗ್ಗೆ ನ್ಯೂಸ್‌18 ವಾಹಿನಿ ವರದಿ ಮಾಡಿದೆ.

ಎಲ್ಲಿಂದ ಸಿಕ್ಕಿತು?
ಥ್ರೆಟ್ ಆ್ಯಕ್ಟರ್‌ ಹೇಳುವಂತೆ ಭಾರತೀಯರ ಮಾಹಿತಿಯನ್ನು ಐಸಿಎಂಆರ್‌ನಿಂದಲೇ ಕಳವು ಮಾಡಲಾಗಿದೆ. ಆದರೆ ಬೇರೊಂದು ಮೂಲ ಹೇಳುವಂತೆ ಎಲ್ಲಿಂದ ಕಳವು ಮಾಡಲಾಗಿದೆ ಎಂಬ ಎಂಬ ಮಾಹಿತಿ ಇಲ್ಲ.

ಹ್ಯಾಕ್‌ಗಾಗಿ ಸರಣಿ ಪ್ರಯತ್ನ
ಐಸಿಎಂಆರ್‌ ಪ್ರಕಾರ ಈ ವರ್ಷದ ಫೆಬ್ರವರಿವರೆಗೆ 6 ಸಾವಿರ ಬಾರಿ ಮಾಹಿತಿ ಕದಿಯಲು ಹ್ಯಾಕರ್‌ಗಳು ಪ್ರಯತ್ನಿಸಿ ಸೋತಿದ್ದಾರೆ. ಹ್ಯಾಕರ್‌

ಗಳಿಂದ ಪಾರಾಗಲು ಪರಿಹಾರೋಪಾಯ ಗಳನ್ನು ಹುಡುಕಿಕೊಳ್ಳುವಂತೆ ತನಿಖಾ ಸಂಸ್ಥೆಗಳು ಐಸಿಎಂಆರ್‌ಗೆ ಸೂಚಿಸಿದ್ದವು.

Advertisement

ವಿದೇಶಿ ಹ್ಯಾಕರ್‌ಗಳ ಕೈವಾಡ?
ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಸರಕಾರ ಮತ್ತು ವಿವಿಧ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈ ಸಂಬಂಧ ಕಾರ್ಯಮಗ್ನರಾಗಿದ್ದಾರೆ. ಈ ಸೋರಿಕೆಯಲ್ಲಿ ವಿದೇಶಿ ಹ್ಯಾಕರ್‌ ಗಳ ಕೈವಾಡವಿರಬಹುದು ಎನ್ನಲಾಗಿದ್ದು, ದತ್ತಾಂಶವನ್ನು ರಕ್ಷಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.

ಥ್ರೆಟ್ ಆ್ಯಕ್ಟರ್‌ ಅಲಿಯಾಸ್‌ ಪಿಡಬ್ಲ್ಯುಎನ್‌0001
ಈ ಹ್ಯಾಕರ್‌ಗಳೇ ಮಾಹಿತಿ ಕದ್ದಿರಬಹುದು ಎಂಬ ಅನುಮಾನವಿದೆ. ಇದು ಅ. 9ರಂದೇ ಭಾರತೀಯ ನಾಗರಿಕರ ಮಾಹಿತಿ ಕದ್ದಿರುವ ಬಗ್ಗೆ ತನ್ನ ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿತ್ತು. ಜತೆಗೆ ನಾಲ್ಕು ಮಾದರಿ ಪುಟಗಳನ್ನೂ ಬಿಡುಗಡೆ ಮಾಡಿತ್ತು.

ಇದೇ ಮೊದಲಲ್ಲ
ವಿಚಿತ್ರವೆಂದರೆ ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಆಗಾಗ ಇಂಥ ಸೈಬರ್‌ ದಾಳಿಗಳು ನಡೆಯುತ್ತಲೇ ಇರುತ್ತವೆ. ಕಳೆದ ವರ್ಷ ಏಮ್ಸ್‌ನಲ್ಲಿ ಸೈಬರ್‌ ದಾಳಿ ಆಗಿದ್ದು, ವ್ಯವಸ್ಥೆಯೇ ಬದಲಾಗಿತ್ತು. ಆಗ ಭಾರತದ ನೆರೆಯ ದೇಶವೊಂದರ ಐಪಿ ವಿಳಾಸ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next