Advertisement

ಸೋಂಕು ತಡೆಗೆ ಪರೀಕ್ಷೆ ಹೆಚ್ಚಿಸಲು ಸಜ್ಜು

11:36 AM Sep 25, 2020 | Suhan S |

ಬೆಂಗಳೂರು: ನಗರದಲ್ಲಿ ಸೋಂಕು ಪ್ರಕರಣ ಪತ್ತೆ ಈಗ ಶೇ.13ರಷ್ಟಿದ್ದು, ಇದನ್ನು ಶೇ.5 ಕ್ಕಿಂತ ಕಡಿಮೆ ಮಾಡುವುದು ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

Advertisement

ನಗರದಲ್ಲಿ ಕೋವಿಡ್ ಪ್ರಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೋಂಕು ಪರೀಕ್ಷೆ ಹೆಚ್ಚಿಸಲು ಹಾಗೂ ಸೋಂಕು ಪ್ರಮಾಣವನ್ನು ಶೇ.5ಕ್ಕೆ ಇಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು, ನಗರದಲ್ಲಿ ಸೋಂಕು ಪ್ರಕರಣ ಪತ್ತೆ ಈಗ ಶೇ.13ರಟ್ಟಿದ್ದು, ಇದನ್ನು ಶೇ.5 ಕ್ಕಿಂತ ಕಡಿಮೆ ಮಾಡುವುದು, ಸೋಂಕುಪರೀಕ್ಷೆ ಸಂಖ್ಯೆದ್ವಿಗುಣಗೊಳಿಸಬೇಕು ಹಾಗೂ ಸೋಂಕಿತರ ಮರಣ ಪ್ರಮಾಣವನ್ನು ಶೇ.1ಕ್ಕಿಂತಇಳಿಸುವುದು ಸೇರಿದಂತೆ ಕೆಲವು ನಿರ್ದಿಷ್ಟ ನಿರ್ದೇಶ ನಗಳನ್ನು ಪ್ರಧಾನಮಂತ್ರಿ ನೀಡಿದ್ದಾರೆ ಎಂದರು.

ಮೈಕ್ರೋ ಕಂಟೈನ್ಮೆಂಟ್‌ನಲ್ಲಿ ಪರೀಕ್ಷೆ: ನಗರದಲ್ಲಿ ಒಂದರಿಂದ ಮೂರು ಸೋಂಕು ಪ್ರಕರಣಗಳು ದೃಢಪಡುವ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್‌ ಪ್ರದೇಶ ಎಂದು ಗುರುತಿಸಿ, ಎಲ್ಲರನ್ನೂ ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಪ್ರಧಾನಿ ನಿರ್ದೇಶನ ನೀಡಿದ್ದಾರೆ. ಹೀಗಾಗಿ, ನಗರದಲ್ಲಿ 1 ರಿಂದ 3 ಪ್ರಕರಣ ದೃಢಪಡುವ ಪ್ರದೇಶಗಳಲ್ಲೂ ಸೋಂಕು ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗುವುದು. ಅದೇ ರೀತಿ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕಿರನ್ನೂ ಮತ್ತೆ ಪರೀಕ್ಷಿಸಲಾಗುವುದು. ಇನ್ನು ನಗರದಲ್ಲಿ ಸಕ್ರಿಯ ಪ್ರಕರಣಗಳ ಪೈಕಿ ಶೇ.58 ಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಅವರಿಗೆ ಟೆಲಿಮೆಡಿಸನ್‌ ಮೂಲಕ ಅಗತ್ಯ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದರು.

ಸೋಂಕು ಪರೀಕ್ಷೆ ಪ್ರಮಾಣ ದುಪ್ಪಟ್ಟು: ಪ್ರಸ್ತುತ ಪ್ರತಿದಿನ 20 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 40 ಸಾವಿರ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು. ಇದರಿಂದ ಸೋಂಕಿತರ ಪತ್ತೆ ಪ್ರಮಾಣ ಶೇ.5ಕ್ಕಿಂತ ಕುಸಿತವಾಗಲಿದೆ. ಸೋಂಕು ಪರೀಕ್ಷೆ ಹೆಚ್ಚಿಸುತ್ತಿರುವುರಿಂದ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾಗಿದೆ. ಅಗತ್ಯ ಸಿಬ್ಬಂದಿ ಮತ್ತು ಸೋಂಕು ಪರೀಕ್ಷೆಗೆ ಬೇಕಾದ ಕಿಟ್‌ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸದ್ಯ 2 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಕೋವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಕಡಿಮೆ ಮಾಡುವ ಉದ್ದೇಶದಿಂದ ಶೀತಕೆಮ್ಮು, ಉಸಿರಾಟದ ಸಮಸ್ಯೆ, ಹಿರಿಯ ನಾಗರಿಕರು, ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಶೀಘ್ರ ಪತ್ತೆ ಮಾಡಿ, ಚಿಕಿತ್ಸೆಗೆ ಆದ್ಯತೆ ನೀಡಲಾಗುವುದು. ಈ ಮೂಲಕ ಮರಣ ಪ್ರಮಾಣ ದರ ಇಳಿತಕ್ಕೆ ಶ್ರಮಿಸಲಾಗುವುದು ಎಂದರು.

Advertisement

………………………………………………………………………………………………………………………………………………………….

ನಿಯಮ ಸಡಿಲಿಕೆಯಿಂದ ಜನರ ಮನಸ್ಥಿತಿ ಬದಲು : ಬೆಂಗಳೂರು: ನಗರದಲ್ಲಿ ಒಂದರಿಂದ ಮೂರು ಜನ ಕೋವಿಡ್ ಸೋಂಕಿತರಿರುವ ಪ್ರದೇಶಗಳಲ್ಲಿ ಕಂಟೈನ್ಮೆಂಟ್‌ ಪದ್ಧತಿ ಹಾಗೂ ಬ್ಯಾರಿಕೇಡ್‌ ಹಾಕುವುದು, ಭಿತ್ತಿಪತ್ರ ಅಂಟಿಸುವುದನ್ನು ನಿಲ್ಲಿಸಿದ ಮೇಲೆ ಸಾರ್ವಜನಿಕರೇ ಮುಂದೆ ಬಂದು ಸೋಂಕು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿ, ನಗರದಲ್ಲಿ ಸೋಂಕು ದೃಢಪಟ್ಟವರಮನೆಯಮುಂದೆ ಬ್ಯಾರಿಕೇಟ್‌ ಹಾಕುವುದು ಹಾಗೂ ಭಿತ್ತಿಪತ್ರ ಅಂಟಿಸುವುದನ್ನು ನಿಲ್ಲಿಸಿದ ಮೇಲೆ ಸಾರ್ವಜನಿಕರು ಮುಜುಗರಕ್ಕೆ ಒಳಗಾಗುವುದು ತಪ್ಪಿದೆ.ಈಹಿಂದೆ ಇದ್ದಂತಹ ಭಯದ ವಾತಾವರಣ ಇಲ್ಲ. ಇದರಿಂದ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಇದೇ ಮಾದರಿ ಮುಂದುವರಿಸ ಲಾಗುವುದು ಎಂದರು. ಮೈಕ್ರೋ, ಮ್ಯಾಕ್ರೋ ಎಂಬ ಎರಡು ಕಂಟೈನ್ಮೆಂಟ್‌ ಪದ್ಧತಿ ಇದೆ. ಹೆಚ್ಚು ಸೋಂಕು ಪ್ರಕರಣಕಂಡುಬಂದ ಇಡೀಪ್ರದೇಶವನ್ನುಮ್ಯಾಕ್ರೋ ಕಂಟೈನ್ಮೆಂಟ್‌ ವಲಯ ಎಂದೂ, ಮೂರು ಹಾಗೂ ಮೂರಕ್ಕಿಂತ ಹೆಚ್ಚು ಸೋಂಕು ಪತ್ತೆಯಾದರೆ ಅದನ್ನು ಮೈಕ್ರೋಕಂಟೈನ್ಮೆಂಟ್‌ ವಲಯ ಎಂದು ಗುರುತಿಸಲಾಗುತ್ತದೆ. ಇನ್ನು ಮುಂದೆ ಎರಡೂ ವಲಯಗಳಲ್ಲಿ ಸೋಂಕುಪರೀಕ್ಷೆಹೆಚ್ಚಿಸಲಾಗುವುದುಎಂದು ಮಾಹಿತಿ ನೀಡಿದರು.

ನಗರದಲ್ಲಿ 33 ಸಾವಿರ ಕಂಟೈನ್ಮೆಂಟ್‌ ವಲಯಗಳಿದ್ದು, ಇದರಲ್ಲಿ 11,582 ಪ್ರದೇಶ ಕಂಟೈನ್ಮೆಂಟ್‌ ಮುಕ್ತವಾಗಿವೆ.21,558 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next