Advertisement

ಮಾಸ್ಕ್ ಧರಿಸದಿದ್ದರೆ ಕೋವಿಡ್ ಟೆಸ್ಟ್‌

03:24 PM Oct 16, 2020 | Suhan S |

ಕೋಲಾರ: ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸದಿದ್ದರೆ ಕೋವಿಡ್ ಪರೀಕ್ಷೆಗೆ ಒಳಪಡ ಬೇಕಾಗುತ್ತದೆ ಎಂದು ಪೌರಾಯುಕ್ತ ಶ್ರೀಕಾಂತ್‌ ಎಚ್ಚರಿಸಿದರು.

Advertisement

ನಗರದ ಮತ್ತು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ನಗರಸಭೆ,ಆರೋಗ್ಯಇಲಾಖೆಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಮಾರ್ಗ ಸೂಚಿಗಳನ್ನು ಪಾಲಿಸುತ್ತಿಲ್ಲ. ಮಾಸ್ಕ್ ಧರಿಸದಿದ್ದವರಿಗೆ ಈಗ 100 ರೂ.ದಂಡ ವಿಧಿಸಲಾ ಗುತ್ತಿದೆ. ಮುಂದಿನದಿನಗಳಲ್ಲಿ ಇದಕ್ಕೂ ಬಗ್ಗದಿದ್ದರೆ ಕೋವಿಡ್ ಟೆಸ್ಟ್‌ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಂದಿನ ಶನಿವಾರ ನಗರದ ಕೆಲವು ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಧರಿಸುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದನ್ನುಪಾಲಿಸದಿದ್ದವರಿಗೆ ಕೋವಿಡ್ ಟೆಸ್ಟ್‌ ಮಾಡಿಸಲು ಆರೋಗ್ಯ ಇಲಾಖೆ ಯೊಂದಿಗೆ ಯೋಜಿಸಲಾಗುತ್ತಿದೆ ಎಂದು ವಿವರಿಸಿದರು.ತಹಶೀಲ್ದಾರ್‌ ಶೋಭಿತಾ ಮತ್ತು ನಗರಸಭೆ, ಆರೋಗ್ಯ ಇಲಾಖೆ, ತಾಲೂಕು ಆಡಳಿತದ ಅಧಿಕಾರಿ, ಸಿಬ್ಬಂದಿ ಮಾಸ್ಕ್ ಧರಿಸುವ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

ಕೋವಿಡ್ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದುಅತ್ಯಗತ್ಯ. ಮಾಸ್ಕ್ ಧರಿಸದವರಿಗೆಲ್ಲರಿಗೂ ಸಾಮೂಹಿಕವಾಗಿ ಕೊರೊನಾಟೆಸ್ಟ್‌ ಮಾಡಿಸುವಯೋಜನೆಯಿಲ್ಲ. ನಿತ್ಯವೂ ಆಯ್ದಪ್ರದೇಶಗಳಲ್ಲಿಕೊರೊನಾಟೆಸ್ಟ್‌ ಮಾಡಲಾಗುತ್ತಿದೆ. ಡಾ.ವಿಜಯಕುಮಾರ್‌, ಆರೋಗ್ಯಾಧಿಕಾರಿ,ಕೋಲಾರ

ಸೌಲಭ್ಯ ಸದ್ಬಳಕೆಗೆಕಾರ್ಮಿಕರಿಗೆ ಸಲಹೆ :

Advertisement

ಶ್ರೀನಿವಾಸಪುರ: ಜೀವನ ನಡೆಸಲು ಹತ್ತಾರು ರೀತಿಯಲ್ಲಿ ವಿವಿಧ ಕೆಲಸಗಳಲ್ಲಿ ತೊಡಗುವ ಕಾರ್ಮಿಕರು ತಮಗೆ ಕಾರ್ಮಿಕರ ಕಲ್ಯಾಣ ಮಂಡಳಿನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕುಟುಂಬಗಳನ್ನು ಆರ್ಥಿಕಾಭಿವೃದ್ಧಿಹೊಂದಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿಉಪಾಧ್ಯಕ್ಷ ಸೋಮಶೇಖರ್‌ ಹೇಳಿದರು.

ತಾಲೂಕಿನ ನೆಲವಂಕಿ ಹೋಬಳಿ ವ್ಯಾಪ್ತಿಯ ಪುಲಗೂರಕೋಟೆ ಗ್ರಾಪಂ ವ್ಯಾಪ್ತಿಯಪಿ.ಜೀಡಿಮಾಕಲಹಳ್ಳಿಯಲ್ಲಿ ಕೋಲಾರ ಜಿಲ್ಲಾ ಕಟ್ಟಡಮತ್ತು ಇತರೆ ಕಾರ್ಮಿಕರ ಕಾರ್ಮಿಕ ಸಂಘದವತಿಯಿಂದಹಮ್ಮಿಕೊಂಡಿದ್ದಪುಲಗೂರಕೋಟೆ ಗ್ರಾಪಂಗ್ರಾಮಗಳ 170 ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಹಾಗು ಕೊರೊನಾ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಟ್ಟಡ ಮತ್ತು ಇತರೆಕಾರ್ಮಿಕರಕಾರ್ಮಿಕ ಸಂಘದಜಿಲ್ಲಾಧ್ಯಕ್ಷ ಪಿ.ಆರ್‌.ರಾಮಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ,ಕಾರ್ಮಿಕರು ಸೌಲಭ್ಯಗಳನ್ನುಪಡೆಯಬೇ ಕಾದರೆ ಸಂಘಟನೆಯಾಗಬೇಕು ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ಆನಂದ್‌ಮಾತನಾಡಿ, ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿ ಅವರನ್ನು ಸಂಘಟಿತರನ್ನಾಗಿ ಮಾಡಲಾಗುತ್ತಿದೆ ಎಂದರು.ಸಂಘಧಸಂಘಟನಾಕಾರ್ಯದರ್ಶಿಸತ್ಯನಾರಾಯಣ, ಸಹ ಕಾರ್ಯದರ್ಶಿ ಜಿ.ಆರ್‌.ಚಂದ್ರಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಸೌಭಾಗ್ಯಮ್ಮ,ಜಿಲ್ಲಾಖಜಾಂಚಿಆದೆಪ್ಪ, ಲಕ್ಷ್ಮೀಪುರ ವೆಂಕಟರವಣ, ಮುನಿಸ್ಯಾಮಿ, ಲಕ್ಷ್ಮೀ ನಾರಾಯಣಪ್ಪ, ಯಲ್ಲಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next