Advertisement

ಪೊಲೀಸರಿಗೆ ಕೋವಿಡ್‌ ಪರೀಕ್ಷೆ

11:40 AM Aug 09, 2020 | Suhan S |

ಮಾಲೂರು: ಕೋವಿಡ್ ವಾರಿಯರ್ ಆಗಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಪರೀಕ್ಷೆಯನ್ನು ಮಾಡಿಸಲಾಗುತ್ತಿದೆ ಎಂದು ಉಪನಿರೀಕ್ಷಕ ಆಂಜಿನಪ್ಪ ಹೇಳಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿ ಗಂಟಲು ದ್ರವ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಠಾಣಾ ವ್ಯಾಪ್ತಿಯಲ್ಲಿ ಸೊಂಕು ತಡೆಗೆ ಪೊಲೀಸರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಎಸ್ಪಿ ಕಾರ್ತಿಕ್‌ ರೆಡ್ಡಿ ಆದೇಶದ ಮೇರೆ ಮಾಲೂರು ಠಾಣೆ ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದರು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ದ್ರವ ನೀಡಲಾಗಿತ್ತು. ಆದರೆ, ಯಾರಿಗೂ ಸೋಂಕು ದೃಢಪಟ್ಟಿಲ್ಲ. ಎಲ್ಲಾ ಪೊಲೀಸರು ಆರೋಗ್ಯವಂತರಾಗಿದ್ದಾರೆ. ಮುಂಬರುವ ದಿನಗಳಲ್ಲಿಯೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ವೇಳೆ ಮಾಸ್ಕ್ ಧರಿಸಿ, ಸ್ಯಾನಿಟೈಜರ್‌ ಬಳಸಿಕೊಂಡು ಸಾಮಾಜಿಕ ಅಂತರದಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಂಡು ಕುಟುಂಬದತ್ತ ಗಮನ ಹರಿಸುವಂತೆ ತಿಳಿಸಿದರು.

ಎಎಸ್‌ಐ ರಾಮಕೃಷ್ಣಪ್ಪ, ಮುಖ್ಯ ಪೇದೆ ಈರಣ್ಣ, ಮುನೇಗೌಡ, ನಾರಾಯಣ ಸ್ವಾಮಿ, ಸಿಬ್ಬಂದಿ ಅಶೋಕ್‌, ಸುರೇಶ್‌, ರಮೇಶ್‌, ಶಫಿವುಲ್ಲಾ, ನಾಗೇಶ್‌, ನಾಗಭೂಷಣ್‌ ರೆಡ್ಡಿ, ರಾಧಮ್ಮ, ಮುನಿರತ್ನ, ಗುರಪ್ಪ, ಶಿವಶಂಕರ್‌, ನಟರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next