Advertisement

ಕೋವಿಡ್ ಪರೀಕ್ಷೆ ಶುಲ್ಕ ಇಳಿಕೆ

12:37 AM Dec 10, 2020 | mahesh |

ಬೆಂಗಳೂರು: ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಸೋಂಕು ಪರೀಕ್ಷೆ ಶುಲ್ಕವನ್ನು ಇಳಿಕೆ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶಿಸಿದ್ದು, ಆರ್‌ಟಿಪಿಸಿಆರ್‌ ಪರೀಕ್ಷೆಗೆ 800 ರೂ., ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ 400 ರೂ. ನಿಗದಿ ಪಡಿಸಿದೆ.

Advertisement

ಈ ಹಿಂದೆ ಖಾಸಗಿಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ 1,200 ರೂ., ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ 700 ರೂ. ಶುಲ್ಕ ಇತ್ತು. ಸದ್ಯ ಕೊರೊನಾ ಪರೀಕ್ಷೆಗಳನ್ನು ನಡೆಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಹಾಗೂ ಇತರ ಅಗತ್ಯ ವಸ್ತುಗಳ ದರಗಳನ್ನು ಪರಿಗಣಿಸಿ ಹಾಗೂ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಆಧರಿಸಿ ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಪರೀಕ್ಷೆಗಳ ಶುಲ್ಕವನ್ನು ಇಳಿಕೆ ಮಾಡಿದೆ.

ಸರಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಾಲಯಗಳಿಗೆ ರವಾನಿ ಸುವ ಪ್ರತಿ ಮಾದರಿಗೆ 500 ರೂ., ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ನಡೆಸುವ ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಶುಲ್ಕ 500 ರೂ., ಖಾಸಗಿ ಆಸ್ಪತ್ರೆಯಲ್ಲಿ ಟ್ರೂ ನ್ಯಾಟ್‌ ಪರೀಕ್ಷೆ 1,250 ರೂ., ಸಿಬಿ ನ್ಯಾಟ್‌ ಪರೀಕ್ಷೆಗೆ 2,400 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋ ಧನಾ ಸಂಸ್ಥೆ (ಐಸಿಎಂಆರ್‌) ಮಾನ್ಯತೆ ಪಡೆದ ರಾಜ್ಯದ ಪ್ರಯೋ ಗಾಲಯಗಳಿಗೆ ಮಾತ್ರ ನೂತನ ಶುಲ್ಕ ಅನ್ವಯವಾಗಲಿದ್ದು, ಹೆಚ್ಚು ವರಿ ಶುಲ್ಕ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾರಲ್ಲಿ ಒಬ್ಬರಿದ್ದರೂ ಮಾಸ್ಕ್ ಕಡ್ಡಾಯ!
ಕಾರಿನ ಕಿಟಿಕಿಗಳನ್ನು ತೆರೆದುಕೊಂಡು ಪ್ರಯಾಣಿಸುತ್ತಿದ್ದರೆ, ಕಾರಲ್ಲಿ ಒಬ್ಬನೇ ವ್ಯಕ್ತಿ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ. ಕಿಟಿಕಿಗಳನ್ನು ಮುಚ್ಚಿದ್ದರೆ ಮಾಸ್ಕ್ ಧರಿಸಲೇಬೇಕೆಂದಿಲ್ಲ.

Advertisement

ಇದು ಹೊಸ ಅಧಿಸೂಚನೆಯಲ್ಲಿರುವ ಅಂಶ. ನಿಯಮ ಉಲ್ಲಂಘನೆ ದಂಡವನ್ನು ಸರಕಾರ ಪರಿಷ್ಕರಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದರೆ ಆ ಸ್ಥಳ ಅಥವಾ ಸಂಸ್ಥೆ ಮಾಲಕರಿಗೆ ದಂಡ ವಿಧಿಲಾಗುವುದು. ಸಾಮಾನ್ಯ ಪಾರ್ಟಿ ಹಾಲ್‌, ಮಳಿಗೆಗೆ 5,000 ರೂ., ಹವಾನಿಯಂತ್ರಿತ ಪಾರ್ಟಿ ಹಾಲ್‌, ಮಳಿಗೆಗಳು, ತ್ರೀ ಸ್ಟಾರ್‌ ಹೊಟೇಲ್‌, ಮದುವೆ ಸಭಾಂಗಣಗಳಿಗೆ 10,000 ರೂ., ತೆರೆದ ಜಾಗದಲ್ಲಿ ಕಾರ್ಯಕ್ರಮ/ರ್ಯಾಲಿ ಆಯೋಜಿಸಿದರೆ ಆಯೋಜಕರಿಗೆ 10,000 ರೂ. ದಂಡ ನಿಗದಿಪಡಿಸಲಾಗಿದೆ.

800 ಆರ್‌ಟಿಪಿಸಿಆರ್‌ ಪರೀಕ್ಷೆ
400 ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ಖಾಸಗಿ ಪ್ರಯೋಗಾಲಯಗಳಿಗೆ ಅನ್ವಯ

Advertisement

Udayavani is now on Telegram. Click here to join our channel and stay updated with the latest news.

Next