ಮಾಗಡಿ: ಕೋವಿಡ್ ಸೋಂಕು ಬಗ್ಗೆ ಮುಚ್ಚಿಡುವುದು ಬೇಡ. ಇದರಿಂದ ಸಾವು ತಂದುಕೊಂಡಂತೆ. ಮನೆ ಬಾಗಿಲಿಗೆ ಬರುವ ನಮ್ಮ ಡಿಜಿಟಲ್ ಯೂತ್ ವಾರಿಯರ್ನಿಂದ ಪರೀಕೆ ಮಾಡಿಸಿಕೊಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವಂತೆ ಸಂಸದ ಡಿ.ಕೆ.ಸುರೇಶ್ ಸಾರ್ವಜನಿಕರಿಗೆ ಸಲಹೆ ನೀಡಿದರು.
ಪಟ್ಟಣದ ಬಾಲಾಜಿ ಆಡಿಟೋರಿಯಂನಲ್ಲಿ ಕಾಂಗ್ರೆಸ್ ಪಕ್ಷದ ಕೋವಿಡ್ ರೋಗ ಪತ್ತೆ ಜಾರಿಗೊಳಿಸಿರುವ ಆರೋಗ್ಯಹಸ್ತ ಕಿಟ್ ಗಳನ್ನು ಪಕ್ಷದ ಯುವಕರಿಗೆ ನೀಡಿ ಮಾತನಾಡಿದ ಅವರು, ದೇಶದ ಭವಿಷ್ಯ ರೂಪಿಸುವಂತ ಶಕ್ತಿ ಇರುವುದು ಯುವಶಕ್ತಿಗೆ ಮಾತ್ರ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಗ್ಯ ಹಸ್ತ ಯೋಜನೆಯ ಜವಾಬ್ದಾರಿಯನ್ನು ಪಕ್ಷದ ಯುವಶಕ್ತಿಗೆ ನೀಡಿದ್ದಾರೆ.
ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಯಶಸ್ವಿಗೊಳಿಸಬೇಕು. ಈ ಮೂಲಕ ನಾಯಕತ್ವ ಬೆಳಸಿಕೊಳ್ಳಬೇಕು. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರೋಗ್ಯಹಸ್ತ ಡಿಜಿಟಲ್ ಯೂತ್ ವಾರಿಯರ್ಸ್ ಗಳು ತಮ್ಮ ಮನೆಯ ಬಾಗಿಲಿಗೆ ಬರಲಿದ್ದಾರೆ ಎಂದರು.
ಬೂತ್ ಮಟ್ಟದಲ್ಲೂ ನೇಮಕ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಬ್ಬರಂತೆ ಕೋವಿಡ್ ಪರೀಕ್ಷೆಗೆ ನೇಮಕ ಮಾಡುವುದರ ಜೊತೆಗೆ ಬೂತ್ ಮಟ್ಟದಲ್ಲೂ ನೇಮಕ ಮಾಡುವ ಮೂಲಕ ಪ್ರತಿ ಮನೆಯಲ್ಲಿನ ಜನರ ಕೋವಿಡ್ ಸೋಂಕು, ಆರೋಗ್ಯ, ಸಮಸ್ಯೆಗಳ ಪಟ್ಟಿ ತಯಾರು ಮಾಡಬೇಕು ಎಂದರು. ಡಾ.ಮಧುಸೂಧನ್, ಡಾ.ಮಧುಶಂಕರ್, ಡಾ.ಹರೀಶ್, ಡಾ.ಭಗತ್‌ರಾಮ್ ಇವರು ಕೋವಿಡ್ ಸೋಂಕು ಪತ್ತೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ತರಬೇತಿ ನೀಡಿದರು.
ಎಂಎಲ್‌ಸಿ ಎಸ್.ರವಿ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಅಧ್ಯಕ್ಷ ಗಂಗಾಧರ್, ಸದಸ್ಯ ಎಚ್.ಎನ್.ಅಶೋಕ್, ದಿಶಾ ಕಮಿಟಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ತಾಪಂ ಅಧ್ಯಕ್ಷ ನಾರಾಯಣಪ್ಪ, ರಾಮನಗರ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್, ಎಪಿಎಂಸಿ ನಿರ್ದೇಶಕ ಎಂ.ಸಿ.ಮಾರೇಗೌಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್, ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್.ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಎಚ್.ಜೆ. ಪುರುಷೋತ್ತಮ್, ತೇಜಸ್ ಕುಮಾರ್, ಡೂಂ ಲೈಟ್ ನರಸಿಂಹಮೂರ್ತಿ, ಕಿರಣ್, ಪ್ರಶಾಂತ್, ಡಾ.ಯೋಗಿ, ಗಂಗಣ್ಣ, ಶಂಕರಪ್ಪ, ವೆಂಕಟರಮಣಪ್ಪ ಇದ್ದರು