Advertisement

ಸೋಂಕು ಹೆಚ್ಚಿರುವ ರಾಜ್ಯದಿಂದ ಬಂದವರಿಗೆ ಟೆಸ್ಟ್‌ ಕಡ್ಡಾಯ

01:47 PM Feb 15, 2021 | Team Udayavani |

ಬೆಂಗಳೂರು: ಕೋವಿಡ್ ಜಾಸ್ತಿ ಇರುವ ರಾಜ್ಯ ಗಳಿಂದ ಆಗಮಿಸುವರಿಗೆ ಕೋವಿಡ್‌-19 ಪರೀಕ್ಷೆಗೆ ಒಳಪಡಿಸುವುದರಿಂದ ಕೋವಿಡ್ ಎರಡನೇ ಹಂತದ ಆತಂಕವನ್ನು ದೂರಮಾಡಬಹುದು ಎಂದು ಕೋವಿಡ್‌ ಸಲಹಾ ತಜ್ಞರ ಸಮಿತಿಯ ಸದಸ್ಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ಅಭಿಪ್ರಾಯ ಪಟ್ಟಿದ್ದಾರೆ.

Advertisement

ವಿಶ್ವ ಪ್ರೇಮಿಗಳ ದಿನ ಪ್ರಯುಕ್ತ ಯಶವಂತಪುರ ಗೋರೆಗುಂಟೆಪಾಳ್ಯದ ಪೀಪಲ್‌ ಟ್ರೀ ಆಸ್ಪತ್ರೆಯ ಲ್ಲಿಂದು ನೂತನವಾಗಿ ಅತ್ಯಾಧುನಿಕ ಹೃದಯ ಚಿಕಿತ್ಸಾ ಕೇಂದ್ರ “ಕ್ಯಾಥ್‌ಲ್ಯಾಬ್‌’ ಉದ್ಘಾಟನೆ ಹಾಗೂಹೃದಯ ಚಿಕಿತ್ಸೆಗೆ ರಿಯಾಯಿತಿ ದರದ ಕಾರ್ಡ್‌ ಬಿಡುಗಡೆ ಮಾಡಿ ಮಾತನಾಡಿದರು. ಭಾರತದಲ್ಲಿ ಮಾಹಾರಾಷ್ಟ್ರ, ಕೇರಳ ಹೊರತು ಪಡಿಸಿದರೆ ಬೇರೆ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ರಾಜ್ಯದಲ್ಲಿ ಎರ ಡನೇ ಅಲೆ ಬರಬಹುದು ಎಂಬ ಆತಂಕದ ಪ್ರತಿಪಾದನೆ ಇದೆ. ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಈಗಾಗಲೇ ಆರ್‌ ಟಿಪಿಸಿಆರ್‌ ಕೋವಿಂಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿ ಸೋಂಕು ಹೆಚ್ಚಿರುವ ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ ನಡೆಸುವುದು ಸೂಕ್ತ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ವಾಯುಮಾಲಿನ್ಯದಿಂದ 20 ಲಕ್ಷ ಮಂದಿಗೆ ಹೃದಯಾಘಾತ: ಇತ್ತೀಚೆಗೆ ನಗರದಲ್ಲಿ ಹೆಚ್ಚು ವಾಯು ಮಾಲಿನ್ಯದ ಕಾರಣದಿಂದ ಜನ ಹೃದಯಘಾತಕ್ಕೆ ಒಳಗಾಗುತ್ತಿದ್ದಾರೆ. ದೇಶದಲ್ಲಿ 20 ಲಕ್ಷ ಮಂದಿ ವಾಯು ಮಾಲಿನ್ಯದಿಂದ ಹೃದ್ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ  1.30 ಕೋಟಿ ಜನ ಸಂಖ್ಯೆ ಇರುವುದರಿಂದ ವಾಹನ ಗಳ ಸಂಖ್ಯೆ ಹೆಚ್ಚಳ ಪ್ರಮಾಣದಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಹೃದಯಘಾತಕ್ಕೆ ಒಳಗಾದ ವ್ಯಕ್ತಿಯನ್ನು 1ರಿಂದ 2 ಗಂಟೆಯೊಳಗೆ ಆಂಜಿಯೋಪ್ಲಾಸ್ಟ್‌ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರೆ ಪ್ರಾಣಾಪಾಯದಿಂದ ಬದುಕಿಸಬಹುದು. ಈ ಹಿನ್ನೆಲೆಯಲ್ಲಿ ನಗರದ ಹೊರ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೀಪಲ್‌ ಟ್ರೀ ಆಸ್ಪತ್ರೆಯ ಮಾದರಿಯಲ್ಲಿ ಹೃದಯ ಶಸ್ತ್ರ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದುಅಗತ್ಯವಾಗಿದೆ ಎಂದರು.

ಯುವಕರು ಹೆಚ್ಚು: ರಾಜ್ಯದಲ್ಲಿ 20ರಿಂದ 40 ವರ್ಷದ ಯುವಕರು ಹೃದಯಘಾತಕ್ಕೆ ಹೆಚ್ಚು ಪ್ರಮಾಣದಲ್ಲಿ ಒಳಗಾಗುತ್ತಿದ್ದು, ಇದಕ್ಕೆ ಯುವಜನಾಂಗ ಅನುಸರಿಸುತ್ತಿರುವ ಜೀವನ ಶೈಲಿ ಕಾರಣವಾಗಿದೆ. ಅಧುನಿಕ ಜೀವನ ಶೈಲಿಯ ನೆಪ ದಲ್ಲಿ ಯುವಕರು ಹಣ ಸಂಪಾದನೆ ಮತ್ತು ಮೊಬೈಲ್‌ಗೀಳಿಗೆ ಒಳಗಾಗಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಒತ್ತಡ ಮುಕ್ತ, ಆರೋಗ್ಯಕರ ಜೀವನಶೈಲಿಯಿಂದ ಹೃದ್ರೋಗದಿಂದ ದೂರ ಉಳಿಯಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next