Advertisement

ಕೋವಿಡ್‌ ಟೆಸ್ಟ್‌ ಗೆ ಸಹಕರಿಸಿ

06:02 PM Nov 22, 2020 | Suhan S |

ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಇರುವ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಡ್ಡಾಯವಾಗಿ ಕೋವಿಡ್‌-19 ತಪಾಸಣೆಗೊಳಪಡಬೇಕು. ಇದಕ್ಕಾಗಿ ಆರೋಗ್ಯ ಇಲಾಖೆ ತಂಡದೊಂದಿಗೆ ಸಹಕರಿಸಬೇಕುಎಂದು ತಹಶೀಲ್ದಾರ್‌ ಜಿ.ಎಸ್‌. ಮಳಗಿ ತಿಳಿಸಿದರು.

Advertisement

ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿಕೋವಿಡ್‌-19 ಸ್ಕ್ರೀನಿಂಗ್‌ ಬಗ್ಗೆ ಮಾಹಿತಿನೀಡಿದ ಅವರು, ಜಿಲ್ಲಾಧಿಕಾರಿಗಳ ಸೂಚನೆ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ ಮಾತನಾಡಿ, ಈಗಾಗಲೇ ಪದವಿ ಕಾಲೇಜುಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳು ನಿಧಾನವಾಗಿಕಾಲೇಜಿನತ್ತ ಬರುತ್ತಿದ್ದಾರೆ. ಹೀಗೆಕಾಲೇಜಿಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಬೇಕು. ಬೇರೆಕಡೆ ಇರುವವರನ್ನೂ ಕರೆಸಿ ತಪಾಸಣೆಗೆ ಒಳಪಡಿಸಬೇಕು. ನೆಗೆಟಿವ್‌ ವರದಿಬಂದವರನ್ನು ಮಾತ್ರ ಕಾಲೇಜಿನೊಳಕ್ಕೆಸೇರಿಸಿಕೊಳ್ಳಬೇಕು. ಪಾಸಿಟಿವ್‌ ವರದಿಬಂದವರಿಗೆ ಅವರು ತಮ್ಮ ಮನೆಯಲ್ಲೇ10 ದಿನಗಳ ಸ್ವಯಂ ಕ್ವಾರಂಟೈನ್‌ಗೆ ಒಳಪಡಬೇಕು. ಇದನ್ನು ಎಲ್ಲಕಾಲೇಜುಗಳ ಮುಖ್ಯಸ್ಥರು ಕಟ್ಟುನಿಟ್ಟಾಗಿಪಾಲಿಸಿ ಕೋವಿಡ್‌ ನಿಯಂತ್ರಿಸಲು ಸಹಕರಿಸಬೇಕು ಎಂದರು.

ಉಚಿತ ಕೋವಿಡ್‌ ತಪಾಸಣೆಗಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಆರ್‌ಟಿಪಿಸಿಆರ್‌ ಕಿಟ್‌ಗಳು ಲಭ್ಯವಿವೆ. ಈ ತಾಲೂಕಿಗೆ ದಿನಕ್ಕೆ 375 ಆರ್‌ಟಿಪಿಸಿಆರ್‌ ಹಾಗೂ 100 ಆರ್‌ಎಟಿ ತಪಾಸಣೆ ಗುರಿ ನಿಗದಿಪಡಿಸಲಾಗಿದೆ. ಈ ಗುರಿ ಸಾಧಿಸಲೇಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಕಾಲೇಜಿನ ಮುಖ್ಯಸ್ಥರು, ಪ್ರಾಂಶುಪಾಲರು ತಮ್ಮ ಕಾಲೇಜಿಗೆ ಬರುವ ಕೋವಿಡ್‌ ಟೆಸ್ಟಿಂಗ್‌ ತಂಡದೊಂದಿಗೆ ಸಹಕರಿಸಬೇಕು. ವಿದ್ಯಾರ್ಥಿಗಳು ಹಾಗೂ ಪಾಲಕರಿಗೂ ತಪಾಸಣೆ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಪಿಯುಸಿ ಗೊಂದಲ: ಈಗ ಪದವಿ ಕಾಲೇಜುಗಳು ಮಾತ್ರ ಆರಂಭಗೊಂಡಿದೆ. ಪಿಯುಸಿ ಕಾಲೇಜುಗಳು ಇನ್ನೂಆರಂಭಗೊಂಡಿಲ್ಲ. ಇದಕ್ಕೆ ಸರ್ಕಾರಅನುಮತಿ ಕೊಟ್ಟಿಲ್ಲ. ಹೀಗಿದ್ದರೂ ಆರೋಗ್ಯ ಇಲಾಖೆಯವರು ಪಿಯುಸಿ ಪ್ರಥಮ, ದ್ವಿತೀಯ ವರ್ಷದವಿದ್ಯಾರ್ಥಿಗಳನ್ನೂ ಕಾಲೇಜಿಗೆ ಕರೆಸಿಕೋವಿಡ್‌ ತಪಾಸಣೆ ನಡೆಸಲು ಸಹಕರಿಸಬೇಕು ಎಂದು ಹೇಳಿದ್ದು ಗೊಂದಲ ಮೂಡಿಸಿದಂತಾಗಿತ್ತು.ಪಿಯುಸಿ ವಿದ್ಯಾರ್ಥಿಗಳನ್ನು ಈಗಲೇಕರೆಸಿ ತಪಾಸಣೆ ನಡೆಸುವುದರಿಂದಉಂಟಾಗುವ ಗೊಂದಲ ಅರಿತಆರೋಗ್ಯಾಧಿಕಾರಿಗಳು ಸರ್ಕಾರದ ಆದೇಶದವರೆಗೂ ಪಿಯು ವಿದ್ಯಾರ್ಥಿಗಳ ತಪಾಸಣೆಗೆ ಒತ್ತಡ ಹೇರದಿರಲು ತೀರ್ಮಾನಿಸಿದರು. ಸರ್ಕಾರ ಅನುಮತಿ ಕೊಟ್ಟ ನಂತರ ಪಿಯು ಕಾಲೇಜುಗಳು ಆರಂಭಗೊಂಡಲ್ಲಿ ಆಗ ವಿದ್ಯಾರ್ಥಿಗಳತಪಾಸಣೆಗೆ ಮುಂದಾಗುವ ಕುರಿತು ಚರ್ಚಿಸಲಾಯಿತು.

ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ, ನಗರ ಕೋವಿಡ್‌-19 ಮೇಲ್ವಿಚಾರಕ ಎಂ.ಎಸ್‌. ಗೌಡರ, ವಿವಿಧ ಕಾಲೇಜುಗಳು ಪ್ರಾಂಶುಪಾಲರು ಸಭೆಯಲ್ಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next