Advertisement

ಕೋವಿಡ್ ಟಾಸ್ಕ್ ಫೋರ್ಸ್‌ ಪರಿಣಾಮಕಾರಿ ಅಗತ್ಯ

06:23 PM Oct 09, 2020 | Suhan S |

ಕಲಬುರಗಿ: ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್ ಸೋಂಕಿನ ಸಾವಿನ ಪ್ರಮಾಣ ಮತ್ತು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೂ,ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್‌ ರ್ಸ್‌ (ಕಾರ್ಯಪಡೆ) ಮುಂದುವರೆಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್‌ ಮೋಹನ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್‌-19 ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇತರೆಡೆ ಹೋಲಿಸಿದರೆ, ಕಲಬುರಗಿ ನಗರದಲ್ಲಿ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣಗಳುಕಂಡು ಬರುತ್ತಿವೆ. ಇದರ ನಿಯಂತ್ರಣ ನಿಟ್ಟಿನಲ್ಲಿ ಬೂತ್‌ ಮತ್ತು ವಾರ್ಡ್‌ಮಟ್ಟದಲ್ಲಿ ಕಾರ್ಯಚರಿಸುತ್ತಿರುವ ಟಾಸ್ಕ್ ಫೋರ್ಸ್‌ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಾಗ ಬೇಕೆಂದರು.

ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಮುಂತಾದಸುರಕ್ಷತಾ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ, ಶಿಕ್ಷಣ ಹಾಗೂ ಸಂವಹನ (ಐಇಸಿ)ಮೂಲಕ ಜಾಗೃತಿ ಮೂಡಿಸಬೇಕು. ವಾಡಿ, ಚಿತ್ತಾಪುರ ಹಾಗೂ ಶಹಬಾದ್‌ಗಳಲ್ಲೂ ಪ್ರಕರಣಗಳು ಹೆಚ್ಚಿವೆ. ಜಿಲ್ಲೆಯಲ್ಲಿ 1,819 ಸಕ್ರಿಯ ಕಂಟೈನ್‌ಮೆಂಟ್‌ ಝೋನ್‌ ಇವೆ. ಈ ಪೈಕಿಜೇವರ್ಗಿ ಪಟ್ಟಣ ಸೇರಿ ತಾಲೂಕಿನಲ್ಲಿ129 ಸಕ್ರಿಯ ಕಂಟೈನ್‌ಮೆಂಟ್‌ ಝೋನ್‌ ಇವೆ. ನೆರೆ ರಾಜ್ಯಗಳ ಗಡಿಗೆ ಹೊಂದಿಕೊಂಡಿಲ್ಲದಿದ್ದರೂ, ಜೇವರ್ಗಿಯಲ್ಲಿ ಕೋವಿಡ್‌ಪ್ರಕರಣಗಳು ಹೆಚ್ಚಾಗಿರುವುದಕ್ಕೆಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಮಾತನಾಡಿ, ಜಿಲ್ಲೆಯಲ್ಲಿ ಈ ಮೊದಲು ಕೋವಿಡ್‌ ಪ್ರಕರಣಗಳು ಸರಾಸರಿ ಪ್ರತಿದಿನ 240 ಇರುತ್ತಿತ್ತು. ಇದೀಗ200ಕ್ಕೆ ತಗ್ಗಿದೆ ಎಂದು ಮಾಹಿತಿ ನೀಡಿದರು. ಜಿಮ್ಸ್‌ ಮತ್ತು ಇಎಸ್‌ಐ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪೂರೈಕೆ ಕುರಿತಂತೆ ಜಿಮ್ಸ್‌ ನಿರ್ದೇಶಕಿ ಡಾ| ಕವಿತಾ ಪಾಟೀಲ್‌ ಮಾತನಾಡಿ, ಕೇಂದ್ರೀಕೃತ ಪೈಪ್‌ಲೈನ್‌ ಮೂಲಕ ಜಿಮ್ಸ್‌ ಕೋವಿಡ್‌ ಆಸ್ಪತ್ರೆ ಏಜೆನ್ಸಿಯೊಂದು ಆಕ್ಸಿಜನ್‌ ಪೂರೈಸುತ್ತದೆ. ಪ್ರತಿನಿತ್ಯ 1,200 ರಿಂದ 1,400 ಕೋವಿಡ್‌ ಪ್ರಕರಣಗಳನ್ನುಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಸಹಾಯಕ ಸರ್ವೇಕ್ಷಣಾಧಿಕಾರಿ ವಿವೇಕಾನಂದ ರೆಡ್ಡಿ ಮಾತನಾಡಿ, ಮೇನಲ್ಲಿ 400 ಜನರಿಗೆ ರಕ್ತದ ಮಾದರಿ ಪಡೆದು ಸೆರಾಲಜಿ ಟೆಸ್ಟಿಂಗ್‌ ಮಾಡಲಾಗಿದ್ದು, ಕೇವಲ ಒಬ್ಬರಿಗೆಮಾತ್ರ ಆಂಟಿ ಬಾಡಿ (ರೋಗ ನಿರೋಧಕ ಶಕ್ತಿ) ಪತ್ತೆಯಾಗಿದೆ.ಇದೀಗ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದರು.

Advertisement

ಸಭೆಯಲ್ಲಿ ಎಸ್‌ಪಿ ಡಾ| ಸಿಮಿ ಮರಿಯಂ ಜಾರ್ಜ್‌, ಡಿಸಿಪಿ ಡಿ.ಕಿಶೋರ್‌ ಬಾಬು, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ| ಶಂಕರ್‌ ವಣಿಕ್ಯಾಳ, ಡಿಎಚ್‌ಒ ಡಾ| ರಾಜಶೇಖರ್‌ ಮಾಲಿ ಹಾಗೂ ಇಎಸ್‌ಐ ಆಸ್ಪತ್ರೆ ನಿರ್ದೇಶಕಿ ಡಾ| ಲೋಬೋ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next