Advertisement
“ಬಹುಶಃ ಇದೇ ನನ್ನ ಲಾಸ್ಟ್ ಗುಡ್ ಮಾರ್ನಿಂಗ್. ಈ ವೇದಿಕೆಯಲ್ಲಿ ಮತ್ತೆ ನಾನು ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ತೀರಾ ಕಡಿಮೆ. ನನ್ನ ದೇಹ ಸಾಯುತ್ತಿದೆ; ಆದರೆ, ಆತ್ಮವಲ್ಲ. ಆತ್ಮ ಅಮರ. ಎಲ್ಲರೂ ಸುರಕ್ಷಿತರಾಗಿರಿ’!- ಮುಂಬಯಿಯ ಸೆವ್ರಿ ಟಿಬಿ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ| ಮನಿಷಾ ಜಾಧವ್ ಹೀಗೊಂದು ಕಣ್ತೇವಗೊಳಿಸುವ ಸಾಲುಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಕೊರೊನಾ ಸೋಂಕಿತೆಯಾಗಿದ್ದ ಈಕೆ, ಈ ಪೋಸ್ಟ್ ಹಾಕಿ ಕೇವಲ 36 ಗಂಟೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮಹಾರಾಷ್ಟ್ರದಲ್ಲಿ ಇದುವರೆಗೆ ಸುಮಾರು 18 ಸಾವಿರ ವೈದ್ಯರಿಗೆ ಕೊರೊನಾ ತಗಲಿದ್ದು, ಈ ಪೈಕಿ 168 ಮಂದಿ ಸಾವನ್ನಪ್ಪಿದ್ದಾರೆ.
Related Articles
Advertisement
ಕೋವಿಡ್ ಸೋಂಕು ದೃಢಪಟ್ಟು ಹೊಸದಿಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಪ್ ಶಾಸಕ ಸೌರಭ್ ಭಾರದ್ವಾಜ್ ತಮಗೆ ಮೆಡಿಕಲ್ ಆಕ್ಸಿಜನ್ ಕೊರತೆಯಾಗಿದೆ. ನಾನು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಕೇವಲ 3 ಗಂಟೆ ಮಾತ್ರ ಲಭ್ಯವಾಗಲಿದೆ. ಹೀಗಾಗಿ, ಕೇಂದ್ರ ಮತ್ತು ಹರಿಯಾಣ ದೊಡ್ಡ ಮನಸ್ಸು ಮಾಡಿ ಆಸ್ಪತ್ರೆಗಳಿಗೆ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ನಿಂದಲೇ ವೀಡಿಯೋ ಮಾಡಿದ್ದಾರೆ. ಉಸಿರಾಡಲು ತೊಂದರೆ ಉಂಟಾಗು ತ್ತಿರುವಂತೆಯೇ ಅವರು ಮನವಿ ಮಾಡಿ, ಸದ್ಯದ ಪರಿಸ್ಥಿತಿಯನ್ನು ಹರಿಯಾಣ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ನಿಭಾಯಿಸಬೇಕು. ಈಜು ಬಾರದ ವ್ಯಕ್ತಿ ಯನ್ನು ಕೊಳಕ್ಕೆ ತಳ್ಳಿದರೆ ಆತ ಹೇಗೆ ತೊಂದರೆಗೆ ಒಳಗಾಗುತ್ತಾನೋ, ಅದೇ ರೀತಿ ಮಾಸ್ಕ್ ತೆಗೆದರೆ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.