ಬೆಂಗಳೂರು: “ಕೋವಿಡ್ ಸೋಂಕಿನಿಂದ ಮೃತಪಟ್ಟ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ತಂದೆ. ತಂದೆಯ ಮೃತದೇಹ ಬರುವಿಕೆಗಾಗಿ ತಾಯಿ ಮತ್ತು ಅಜ್ಜಿಯ ಜತೆಗೆ ಚಿತಾಗಾರದ ಬಳಿ ಕಾಯುತ್ತಿದ್ದ ಕಂದಮ್ಮಗಳು.ಆ್ಯಂಬುಲೆನ್ಸ್‌ನಲ್ಲಿ ತಂದೆಯ ಮೃತದೇಹ ಬಂದ ಕೂಡಲೇ, ಗಂಡನನ್ನು ನೆನೆದು ಆಕ್ರಂದಿಸಿದ ತಾಯಿ. ತಾಯಿ ದುಃಖೀಸುತ್ತಿದ್ದನ್ನೇ ನೋಡುತ್ತಾ ಕಣ್ಣೀರಿಡುತ್ತಿದ್ದ ಕಂದಮ್ಮಗಳು’ ಹೀಗೆ.. ತನ್ನ ತಂದೆಯ ಹೆಗಲ ಮೇಲೆ ಕುಳಿತು ಆಡಿ ಬೆಳೆಯಬೇಕಿದ್ದ ಇಬ್ಬರು ಪುಟಾಣಿ ಮಕ್ಕಳು ಹಾಗೂ ತನ್ನ ಗಂಡನನ್ನು ಕಳೆದುಕೊಂಡ ಪತ್ನಿ ನಗರದ ಸುಮನಹಳ್ಳಿ ಚಿತಾಗಾರದ ಬಳಿ ಸೋಮವಾರ ಕಣ್ಣೀರಿಟ್ಟ ದೃಶ್ಯ ಎಂಥವರ ಕಣ್ಣಂಚಲ್ಲೂ ನೀರು ತರಿಸುವಂತಿತ್ತು. ಕೋವಿಡ್ ದಿಂದ ನಿತ್ಯ ನಗರದಲ್ಲಿ ಅನೇಕ ರೀತಿಯ ಮನಕಲಕುವ ಘಟನೆ ನಡೆಯುತ್ತವೆ.
ಇದರ ನಡುವೆ ಸೋಮವಾರ ಸೂಕ್ತ ಸಮಯಕ ಬೆಡ್ ಸಿಗದೆ, ಬಿಯು ನಂಬರ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ಕೊಡದ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಇಬ್ಬರು ಪುಟಾಣಿ ಮಕ್ಕಳು ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಗಂಡನನ್ನು ನೆನೆದು ಕಣ್ಣೀರಿಟ್ಟ ಪತ್ನಿ: “ಬೆಳಗ್ಗೆಯೇ ಚಿತಾಗಾರದ ಬಳಿ ಬಂದಿದ್ದಮೃತ ವ್ಯಕ್ತಿಯ ಪತ್ನಿ ಮತ್ತು ಸಂಬಂಧಿಕರು ಮೃತದೇಹ ಬರುವವರೆಗೂ ಕಣ್ಣೀರಿಟ್ಟರು.ತಂದೆ ಮೃತಪಟ್ಟಿದ್ದಾರೆ ಎಂಬುವುದನ್ನುಅರಿಯಲಾಗದ ಐದು ವರ್ಷದ ಮಗಳುಒಮ್ಮೆ ತಾಯಿ ಬಳಿಗೆ, ಮತ್ತೂಮ್ಮೆ ಅಜ್ಜಿಬಳಿಗೆ ಹೋಗಿ ಅವರನ್ನೇ ನೋಡುತ್ತಿತ್ತು. ಇನ್ನೊಬ್ಬ ಮಗಳು, ತಾಯಿ ಅಳುತ್ತಿದ್ದನ್ನು ಕಂಡು ತಾನೂ ದುಃಖೀಸುತ್ತಿದ್ದಳು.’ ಬಿಯು ನಂಬರ್ ಇಲ್ಲವೆಂದು
ಚಿಕಿತ್ಸೆ ಕೊಡಲಿಲ್ಲ: “ನಮ್ಮ ಭಾವನಿಗೆ 38 ವರ್ಷ. ಅವರಿಗೆ ಕೋವಿಡ್ದೃಢವಾಗಿದ್ದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಬಿಬಿಎಂಪಿಯಿಂದ ಬಿಯು ನಂಬರ್ ಕೊಡುವವರೆಗೂ ಯಾವುದೇ ರೋಗಿಗೆ ವೈದ್ಯರು ಚಿಕಿತ್ಸೆ ಕೊಡಲು ಮುಂದೆಬರುವುದಿಲ್ಲ. ಎಷ್ಟೇ ಅಲೆದರೂ ಬೆಡ್‌ಸಿಗುತ್ತಿಲ್ಲ. ಅವರು ಮಾಡಿದ ಕೆಲಸದಿಂದನಮ್ಮ ಅಕ್ಕನ ಮಕ್ಕಳು ಇಂದುಅನಾಥರಾಗಿದ್ದಾರೆ’ ಎಂದು ಮೃತ ವ್ಯಕ್ತಿಯಪತ್ನಿ ಸಹೋದರ ಮಕ್ಕಳ ಮುಂದಿನ ಭವಿಷ್ಯ ನೆನೆದು ಕಣ್ಣೀರಾದರು.