Advertisement
ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡ್‌ನಲ್ಲಿ ಸದ್ಯ 28 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 17668 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 2875 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 5944 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದರೆ, 8821 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ. ಇಂದಿನವರೆಗೆ 16372 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 14529 ವರದಿ ನಕಾರಾತ್ಮಕವಾಗಿದೆ. ಒಟ್ಟು 1128 ಜನರ ವರದಿಗಾಗಿ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 310 ಆಗಿದ್ದು, ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಎಂಟು ಜನರಿದ್ದಾರೆ. ಹಿರೇಬಾಗೇವಾಡಿಯ ವೃದ್ಧೆ ಕೋವಿಡ್‌ದಿಂದ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ. Advertisement
ಕೋವಿಡ್: ಇನ್ನೂ 1128 ಮಂದಿಯ ವರದಿ ಬಾಕಿ
06:44 AM Jun 20, 2020 | Suhan S |
Advertisement
Udayavani is now on Telegram. Click here to join our channel and stay updated with the latest news.