Advertisement

ಬರಲಿದೆ “ನಿರ್ಬಂಧ ಪಕ್ಷ “

12:52 AM Dec 05, 2020 | mahesh |

ಬೆಂಗಳೂರು: ಜನವರಿ ಅಥವಾ ಫೆಬ್ರವರಿಗೆ ಕೋವಿಡ್ ಎರಡನೇ ಅಲೆ ಬರಲಿದೆ. ಹೀಗಾಗಿ ಡಿಸೆಂಬರ್‌ 20ರಿಂದ ಜನವರಿ 3ರ ವರೆಗಿನ 15 ದಿನಗಳ ಕಾಲ ಗರಿಷ್ಠ ಎಚ್ಚರಿಕೆ ವಹಿಸಿ!

Advertisement

ವರ್ಷಾಂತ್ಯ ಮತ್ತು ಹೊಸ ವರ್ಷದ ಆರಂಭದ 15 ದಿನಗಳ ಅವಧಿಯಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು. ಮದುವೆಗೆ 100, ರಾಜಕೀಯ-ಧಾರ್ಮಿಕ ಸಮಾರಂಭಗಳಿಗೆ 200, ಅಂತ್ಯಕ್ರಿಯೆಗಳಲ್ಲಿ 50ಕ್ಕಿಂತ ಹೆಚ್ಚು ಜನರ ಸೇರುವಂತಿಲ್ಲ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಎರಡನೇ ಅಲೆ ಬರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಅವರು ಗುರುವಾರ ಬೆಂಗಳೂರಿನಲ್ಲಿ ತಾಂತ್ರಿಕ ಸಮಿತಿ ಜತೆಗೆ ಸಭೆ ನಡೆಸಿದರು.

ಡಿಸೆಂಬರ್‌, ಜನವರಿ, ಫೆಬ್ರವರಿ ಚಳಿಗಾಲವಾದ್ದರಿಂದ ನಿರ್ಣಾಯಕ. ಸೋಂಕಿಗೆ ಚಿಕಿತ್ಸೆ ನೀಡಲು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸದಾ ಸಿದ್ಧವಿವೆ. ಫೆಬ್ರವರಿ ಅಂತ್ಯದವರೆಗೂ ಹೆಚ್ಚು ಪರೀಕ್ಷೆ ನಡೆಸಬೇಕು ಎಂದರು.

ಸಿಎಂ ಜತೆ ಚರ್ಚಿಸಿ ನಿರ್ಧಾರ: ಬೊಮ್ಮಾಯಿ
ರಾತ್ರಿ ಕರ್ಫ್ಯೂ ಬಗ್ಗೆ ರವಿವಾರ ಸಿಎಂ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಹೊಸ ವರ್ಷಾಚರಣೆ ಅರ್ಥಹೀನ
ಹೊಸ ವರ್ಷ ನಮಗೆ ಹಬ್ಬವಲ್ಲ ಎಂದಿರುವ ಸಚಿವ ಸುಧಾಕರ್‌, ಈ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಅರ್ಥಹೀನ. ಜನರು ಜವಾಬ್ದಾರಿಯುತವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next