Advertisement
6ನೇ ತರಗತಿಯಿಂದ ಕಾಲೇಜುವರೆಗೆ ಎಲ್ಲ ತರಗತಿಗಳೂ ಸರಾಗವಾಗಿ ನಡೆಯುತ್ತಿವೆ. ಆದರೆ,ಈಗ ಮತ್ತೆ ಕೋವಿಡ್ ತನ್ನ ಆರ್ಭಟವನ್ನು ತೀವ್ರಗೊಳಿಸಿದೆ. ಶಾಲೆಗೆ ಬನ್ನಿ ಮಕ್ಕಳೇ ಮಹಾಮಾರಿ ಕೋವಿಡ್ ಓಡಿಸೋಣ ಮಕ್ಕಳನ್ನು ಓದಿಸೋಣಎಂಬ ಘೋಷ ವಾಕ್ಯದೊಂದಿಗೆ ಜ.1ರಂದು ಶಾಲಾ-ಕಾಲೇಜುಗಳು ಆರಂಭಗೊಂಡಿದ್ದವು. ಜಿಲ್ಲೆಯ ವಿದ್ಯಾರ್ಥಿಗಳು ಶಾಲೆಗಳತ್ತ ಸಂತಸದಿಂದಲೇಬಂದಿದ್ದರು. ಶಾಲೆಗೆ ಬಂದ ಮಕ್ಕಳನ್ನು ಜನಪ್ರತಿನಿಧಿಗಳು, ಜಿಪಂ ಸಿಇಒ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಭವ್ಯವಾಗಿ ಸ್ವಾಗತಿಸಿದ್ದರು. ಅಂದು ಪ್ರಾರಂಭದಲ್ಲಿ ಶಾಲಾ-ಕಾಲೇಜಿಗೆ ಮಕ್ಕಳ ಸಂಖ್ಯೆ ಕಡಿಮೆಯಾದರೂ, ಆನಂತರ ಎಲ್ಲಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿತುಎಂದಿನಂತೆ ಶಾಲೆಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿದ್ದವು.
Related Articles
Advertisement
ಮಾಸ್ಕ್ ಹಾಕಿಕೊಂಡೇ ಶಾಲೆಗೆ ಬನ್ನಿ : ಕೋವಿಡ್ ಮಹಾಮಾರಿ ತನ್ನ ಆರ್ಭಟವನ್ನು ತೀವ್ರಗೊಳಿಸುತ್ತಲೇ ಮತ್ತೆ ಶಾಲೆಗಳಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಶೌಚಾಲಯ ಸ್ವತ್ಛತೆ ಕಾಪಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಲಾಗುತ್ತಿದೆ. ಈ ಎಲ್ಲ ಮುಂಜಾಗ್ರತ ಕ್ರಮ ಕೈಗೊಂಡು ಬಹಳ ಎಚ್ಚರಿಕೆಯಿಂದ ಶಾಲೆ ನಡೆಸಲಾಗುತ್ತಿದೆ. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡೇ ಶಾಲೆಗೆ ಬರಬೇಕು ಎಂದು ಸೂಚಿಸಲಾಗಿದೆ. ಜ್ವರ, ಕೆಮ್ಮು, ನೆಗಡೆ, ತಲೆನೋವು ಬಂದ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ತೋರಿಸಲು ಸೂಚನೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕಾಗಿ ಎಲ್ಲಮುಂಜಾಗ್ರತಾ ಕ್ರಮ ಆರೋಗ್ಯ ಇಲಾಖೆಯಿಂದ ಮಾಡಲಾಗಿದೆ. ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ಇತರೆ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕ್ರಮವಹಿಸಬೇಕು. ● ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ತುಮಕೂರು.
ಕೋವಿಡ್ ವೈರಸ್ ಹೆಚ್ಚುತ್ತಿರುವ ಹಿನ್ನೆಲೆನಮ್ಮ ಶಾಲೆಯಲ್ಲಿ ಎಲ್ಲ ರೀತಿಯಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿದ್ದೇವೆ. ಮಾಸ್ಕ್ ಕಡ್ಡಾಯ ಮಾಡಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಶಾಲೆ ನಡೆಯುತ್ತಿದೆ.ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಕಡಿಮೆಯಾಗಿಲ್ಲ. ಮಕ್ಕಳಲ್ಲಿ ಉತ್ಸಾಹ ಇದೆ. ● ಎಚ್.ಜಿ.ಮಹೇಶ್, ಮುಖ್ಯೋಪಾಧ್ಯಾಯ ವಿನಾಯಕ ಪ್ರೌಢಶಾಲೆ ಹಾಗಲವಾಡಿ. ಗುಬ್ಬಿ ತಾಲೂಕು.
ಕೋವಿಡ್ ಸೋಂಕಿತರ ಸಂಖ್ಯೆ ಎಲ್ಲ ಕಡೆ ಹೆಚ್ಚುತ್ತಿದೆ. ನಾವು ಕಾಲೇಜಿನಲ್ಲಿಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಂಡಿದ್ದು, ಕಾಲೇಜಿಗೆ ಬರುವ ವಿದ್ಯಾರ್ಥಿ ನಿಯರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ● ಡಾ.ಟಿ.ಆರ್.ಲೀಲಾವತಿ, ಪ್ರಾಂಶುಪಾಲೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ತುಮಕೂರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.ಜನರು ತಪ್ಪದೇ ಮಾಸ್ಕ್ ಧರಿಸಿ ಸಾಮಾಜಿಕಅಂತರ ಕಾಯ್ದುಕೊಳ್ಳಬೇಕು. ಕೋವಿಡ್ ಹರಡದಂತೆ ಜಾಗೃತಿ ವಹಿಸಬೇಕು. ● ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ
ಸೋಂಕು ಈಗ ಮತ್ತೆ ಹೆಚ್ಚುತ್ತಿದೆ. ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸುವುದು ಎನ್ನುವ ಭಯ ಇದೆ. ಆದರೆ, ಏನೂ ಮಾಡಲು ಆಗುವುದಿಲ್ಲ. ನಮ್ಮ ಜಾಗೃತಿಯಿಂದ ನಾವು ಇದ್ದುಕೋವಿಡ್ ಎದುರಿಸಬೇಕಾಗಿದೆ. ಶಾಲೆ ಬಂದ್ ಮಾಡಿದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತದೆ. ಆದ್ದರಿಂದ ಅಗತ್ಯ ಕ್ರಮ ಕೈಗೊಂಡು ಮಕ್ಕಳಿಗೆ ತೊಂದರೆ ಆಗದಂತೆ ಗಮನ ನೀಡಬೇಕು. ● ಶಾಂತಾ, ಪೋಷಕರು ತುಮಕೂರು
ಚಿ.ನಿ.ಪುರುಷೋತ್ತಮ್.