Advertisement
2020ನೇ ಮಾ. 9ರಂದು ರಾಜ್ಯದಲ್ಲಿ ಮೊದಲ ಕೊರೊನಾ ರೋಗಿಯನ್ನು ಪತ್ತೆ ಮಾಡಲಾಯಿತು. 2020ರ ಡಿಸೆಂಬರ್‌ನಲ್ಲಿ ಮೊದಲ ಅಲೆ ಅಪ್ಪಳಿಸಿತು. ಆದಾಗ್ಯೂ 2021ರ ಜನವರಿ ಬಳಿಕ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗಲು ಪ್ರಾರಂಭಿಸಿತು. 2021ರ ಮಾರ್ಚ್‌ನಿಂದ ಎರಡನೇ ಅಲೆ ಅಪ್ಪಳಿಸಿ ಜನಜೀವನ ಅಸ್ತವ್ಯಸ್ತಗೊಂಡಿತು. ಧಾರಾವಿ ಮೊದಲಾದ ಕೊಳೆಗೇರಿ ಪ್ರದೇಶಗಳಲ್ಲಿ ಕೊರೊನಾ ವೈರಸ್ ಅನ್ನು ಕಟ್ಟಿಹಾಕುವಲ್ಲಿ ಕೈಗೊಂಡ ಕ್ರಮಗಳು ಯಶಸ್ವಿಯಾಗಿದ್ದವು.
Related Articles
Advertisement
2021ರ ಜನವರಿಯಿಂದ ಮೇ ವರೆಗಿನ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.08ಕ್ಕೆ ಇಳಿದಿದೆ. ಎರಡನೇ ಅಲೆಯಲ್ಲಿ ಯಾವುದೇ ಜಿಲ್ಲೆಯ ಸಾವಿನ ಪ್ರಮಾಣವು ಮೇ 2020ರ ವರೆಗೆ ಶೇ. 3ಕ್ಕಿಂತ ಹೆಚ್ಚಾಗಿಲ್ಲ. ಈ ಅವಧಿಯಲ್ಲಿ ಅತೀ ಹೆಚ್ಚು ಮರಣ ಪ್ರಮಾಣ ಕೊಲ್ಹಾಪುರದಲ್ಲಿ ಶೇ. 2.89ರಷ್ಟಿತ್ತು. ಅದರ ಬಳಿಕ ಸಿಂಧುದುರ್ಗಾದಲ್ಲಿ ಶೇ. 2.51, ನಾಂದೇಡ್‌ನಲ್ಲಿ ಶೇ. 2.17, ಸೋಲಾಪುರದಲ್ಲಿ ಶೇ. 2.03 ಮತ್ತು ನಂದೂರ್ಬಾರ್‌ನಲ್ಲಿ ಶೇ. 2.05ರಷ್ಟು ಮರಣ ಪ್ರಮಾಣದೊಂದಿಗೆ ಅನಂತರದ ಸ್ಥಾನದಲ್ಲಿವೆ.
ಮುಂಬಯಿಯ ಮರಣ ಪ್ರಮಾಣ ಇಳಿಕೆ :
ಮೊದಲ ಅಲೆಯಲ್ಲಿ ಮುಂಬಯಿಯಲ್ಲಿ 2,93,436 ರೋಗಿಗಳನ್ನು ಹೊಂದಿದ್ದು, ಸಾವಿನ ಸಂಖ್ಯೆ 11,116 ಆಗಿತ್ತು. ಒಟ್ಟಾರೆ ಮರಣ ಪ್ರಮಾಣ ಶೇ. 3.79ರಷ್ಟಿತ್ತು. ಆದರೆ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಮುಂಬಯಿ ಯಶಸ್ವಿಯಾಗಿದೆ. ಈ ಮಧ್ಯೆ ಪುಣೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹಾಗೂ ಮರಣ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗಿದ್ದರೂ ಪುರಸಭೆಯ ಸಮಯೋಚಿತ ಕಾರ್ಯಗಳಿಂದ ಕ್ರಮೇಣ ನಿಯಂತ್ರಣಕ್ಕೆ ಬಂದಿದೆ.
ಮರಣ ಪ್ರಮಾಣ ಕಡಿಮೆ :
ಎರಡನೇ ಅಲೆಯಲ್ಲಿ ಪ್ರಮಾಣವು ಕಡಿಮೆ ಇದೆ. ಮೊದಲ ಅಲೆಯಲ್ಲಿ ಗಡಿcರೋಲಿ ಅತ್ಯಂತ ಕಡಿಮೆ ಮರಣ ಪ್ರಮಾಣವನ್ನು ಅಂದರೆ ಶೇ. 1.02 ರಷ್ಟನ್ನು ಹೊಂದಿತ್ತು. ಆದರೆ ಎರಡನೇ ಅಲೆಯಲ್ಲಿ ಬುಲ್ಡಾಣದಲ್ಲಿ ಶೇ. 0.38ರಷ್ಟನ್ನು ಹೊಂದಿ ಕಡಿಮೆ ಮರಣ ಪ್ರಮಾಣ ಹೊಂದಿದೆ. 2020ರ ಮಾರ್ಚ್ ನಿಂದ ಡಿಸೆಂಬರ್‌ವರೆಗಿನ ಒಂಬತ್ತು ತಿಂಗಳಲ್ಲಿ ಸುಮಾರು 19 ಲಕ್ಷ ರೋಗಿಗಳಲ್ಲಿ ಸುಮಾರು 49,000 ರೋಗಿಗಳು ಸಾವನ್ನಪ್ಪಿದ್ದಾರೆ.
ಐದು ತಿಂಗಳಲ್ಲಿ ರೋಗಿಗಳ ಸಂಖ್ಯೆ ಸುಮಾರು 36 ಲಕ್ಷಕ್ಕೆ ಏರಿಕೆ :
ಜನವರಿಯಿಂದ ಮೇ ವರೆಗಿನ ಐದು ತಿಂಗಳ ಅವಧಿಯಲ್ಲಿ ರೋಗಿಗಳ ಸಂಖ್ಯೆ ಸುಮಾರು 36 ಲಕ್ಷಕ್ಕೆ ಏರಿತು ಮತ್ತು ಸಾವಿನ ಸಂಖ್ಯೆ ಸುಮಾರು 39,000ರಷ್ಟಿತ್ತು. ಐದು ತಿಂಗಳಲ್ಲಿ ಸಾವಿನ ಸಂಖ್ಯೆ ಒಂಬತ್ತು ತಿಂಗಳಿಗಿಂತ ಹೆಚ್ಚಾಗಿದ್ದರೂ ಈ ಅವಧಿಯಲ್ಲಿ ಸಾವಿನ ಸಂಖ್ಯೆಯು ಮೊದಲ ಅಲೆಯ ಸಾವಿನ ಸಂಖ್ಯೆಯಷ್ಟು ವೇಗವಾಗಿ ಹೆಚ್ಚಾಗದೇ ಇರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಪೂರ್ವ ತಯಾರಿ, ಚಿಕಿತ್ಸೆಯ ನಿರ್ದೇಶನ, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ವಿವಿಧ ಕ್ರಮಗಳಿಂದಾಗಿ ಸಾವನ್ನು ತಡೆಯಲಾಯಿತು. ಎರಡನೇ ಅಲೆಯಲ್ಲಿ ಆಮ್ಲಜನಕ ಲಭ್ಯತೆಯ ಬಿಕ್ಕಟ್ಟು ಇತ್ತು. ಆದರೆ ಸಾವನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಸಾವಿನ ವಿಶ್ಲೇಷಣಾ ಸಮಿತಿಯ ಮುಖ್ಯಸ್ಥ ಡಾ| ಅವಿನಾಶ್ ಸುಪೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಗಿಗಳು ಚೇತರಿಕೆ :
ಎರಡನೇ ಅಲೆಯಲ್ಲಿ ವೈರಸ್ ಸ್ವರೂಪವನ್ನು ಬದಲಿಸಿದ್ದು, ಅದು ವೇಗವಾಗಿ ಹರಡುತ್ತಿದ್ದರೂ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಮರಣ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿದೆ. ಮೊದಲ ಅಲೆಗೆ ಹೋಲಿಸಿದರೆ ಈ ಬಾರಿ ಪೂರ್ವಸಿದ್ಧತೆ, ಹೆಚ್ಚಿದ ಪರೀûಾ ಸಾಮರ್ಥ್ಯ, ಸೋಂಕನ್ನು ನಿಯಂತ್ರಿಸಲು ತೆಗೆದುಕೊಂಡ ಉತ್ತಮ ಕ್ರಮಗಳು ಕಡಿಮೆ ಮರಣಕ್ಕೆ ಕಾರಣವಾಗಿವೆ.-ಡಾ| ಶಶಾಂಕ್ ಜೋಶಿ, ಮುಖ್ಯಸ್ಥರು, ಕೋವಿಡ್ ಕಾರ್ಯಪಡೆ