ವೈದ್ಯ ಅಭಯ್ ರಾಂಜನ್ ಸಿಂಗ್ ಉತ್ತರ ಪ್ರದೇಶ ದಲ್ಲಿ ನಡೆದಿದ್ದ ಅವರ ಸಂಬಂಧಿಯೊಬ್ಬರ ಮದುವೆಗೆ ರಜೆ ಪಡೆಯದೇ ಜೂ.23ರಂದು ತೆರಳಿ ಜು.1ಕ್ಕೆ ವಾಪಸಾಗಿದ್ದರು.
Advertisement
ಅಲ್ಲಿಂದ ವಾಪಸಾದ ಬಳಿಕ ಅವರ ಪತ್ನಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡವು. ಪತ್ನಿಗೆ ಕೋವಿಡ್ ದೃಢವಾದರೆ ತಾವು ಅನಧಿಕೃತವಾಗಿ ರಜೆ ಪಡೆದ ವಿಷಯ ಬೆಳಕಿಗೆ ಬರುತ್ತದೆ ಎಂದು ಅವರು ತಮ್ಮ ಪತ್ನಿಯ ಗಂಟಲು ದ್ರವದ ಮಾದರಿಯನ್ನು ಸಹಾಯಕಿ ಹೆಸರಿನಲ್ಲಿ ಕಳಿಸಿದ್ದರು. ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಸಹಾಯಕಿ ಮನೆಗೆ ತೆರಳಿದ್ದ ವೇಳೆ ಈ ವಂಚನೆ ಎಲ್ಲವೂ ಬಯಲಿಗೆ ಬಂದಿದೆ.