ಮಾಸ್ಕೋ: ಜಗತ್ತಿನಾದ್ಯಂತ ಕೋವಿಡ್ 19 ಸೋಂಕು ಬಿಕ್ಕಟ್ಟು, ಆತಂಕವನ್ನು ಸೃಷ್ಟಿಸಿದೆ. ಏತನ್ಮಧ್ಯೆ ಕೋವಿಡ್ ವೈರಸ್ ವಿರುದ್ಧ ರಷ್ಯಾ ಪ್ರಾಣಿಗಳಿಗೂ ಲಸಿಕೆ ನೀಡಲು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನನ್ನ ಬಂಧಿಸುವ ಧೈರ್ಯ ಯಾರಿಗೂ ಇಲ್ಲ: ಐಎಂಎಗೆ ಸೆಡ್ಡುಹೊಡೆದ ಬಾಬಾ ರಾಮ್ ದೇವ್
ನಾಯಿಗಳು, ಬೆಕ್ಕುಗಳು, ನರಿ ಮತ್ತು ಮುಂಗುಸಿಗಳಲ್ಲಿ ಕೋವಿಡ್ 19 ವಿರುದ್ಧ ರೋಗ ನಿರೋಧಕ ಪ್ರತಿಕಾಯ ಉತ್ಪಾದಿಸಿದೆ ಎಂದು ಸಂಶೋಧನೆಯಲ್ಲಿ ತೋರಿಸಿದ ನಂತರ ರಷ್ಯಾ ಮಾರ್ಚ್ ನಲ್ಲಿ ಜಗತ್ತಿನ ಮೊದಲ ಪ್ರಾಣಿಗಳ ಕಾರ್ನಿವಾಕ್ ಕೋವ್ ಲಸಿಕೆಯನ್ನು ನೋಂದಾಯಿಸಿರುವುದಾಗಿ ತಿಳಿಸಿತ್ತು.
ಇದೀಗ ರಷ್ಯಾದ ಹಲವು ಪ್ರದೇಶಗಳಲ್ಲಿ ಪಶು ಚಿಕಿತ್ಸಾಲಯಗಳಲ್ಲಿ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ ಎಂದು ರಷ್ಯಾದ ವೆಟರ್ನರಿ ವಾಚ್ ಡಾಗ್ ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದೆ. ಮತ್ತೊಂದೆಡೆ ಕಾರ್ನಿವಾಕ್ ಕೋವ್ ಲಸಿಕೆ ಬಗ್ಗೆ ಯುರೋಪಿಯನ್ ಒಕ್ಕೂಟ, ಅರ್ಜೈಂಟೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ಕೂಡಾ ಆಸಕ್ತಿ ತೋರಿಸಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ 19 ಸೋಂಕು ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತದೆ ಎಂಬ ಬಗ್ಗೆ ಸದ್ಯ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಜಗತ್ತಿನಾದ್ಯಂತ ವಿವಿಧ ಮಾದರಿಯ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಬೆಕ್ಕು ಮತ್ತು ನಾಯಿಗಳು ಮನುಷ್ಯರಿಗೆ ಕೋವಿಡ್ ವೈರಸ್ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ, ಅಲ್ಲದೇ ಕೋವಿಡ್ 19 ಪಾಸಿಟಿವ್ ಗೊಳಗಾದವರು ಅವುಗಳ ಲಕ್ಷಣಗಳು ಹೆಚ್ಚಾಗಿ ಗಂಭೀರ ಸ್ವರೂಪದ್ದಾಗಿರುವುದಿಲ್ಲ ಎಂದು ಕೆಲವು ವಿಜ್ಞಾನಿಗಳು ತಿಳಿಸಿದ್ದಾರೆ.