Advertisement
ಸೋಂಕಿನ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣ ಕಾಯ್ದೆಯಡಿ ಇದ್ದ ಎಲ್ಲ ನಿರ್ಬಂಧಗಳು ಮಾ.31ಕ್ಕೆ ಕೊನೆಯಾಗಲಿವೆ ಎಂದು ಬುಧವಾರ ಕೇಂದ್ರ ಸರ ಕಾರ ಘೋಷಿಸಿದೆ. ಕೋವಿಡ್ ಸುರಕ್ಷಾ ಕ್ರಮವಾಗಿ ಇನ್ನು ಮುಂದೆ ಈ ಕಾಯ್ದೆ ಯನ್ನು ಜಾರಿ ಮಾಡಬೇಕಾದ ಅಗತ್ಯವಿಲ್ಲ. ಆದರೆ ಎಚ್ಚರ ವಹಿಸುವುದು ಅಗತ್ಯ. ಜತೆಗೆ ಮಾಸ್ಕ್ ಧಾರಣೆ ನಿಯಮ ಮುಂದು ವರಿಯಲಿದೆ ಎಂದೂ ಸ್ಪಷ್ಟಪಡಿಸಿದೆ. ಮೊದಲ ಬಾರಿಗೆ ದೇಶ ವ್ಯಾಪಿ ಕೊರೊನಾ ಲಾಕ್‌ಡೌನ್ ಹೇರಿ ಗುರುವಾರಕ್ಕೆ 2 ವರ್ಷಗಳು ತುಂಬುತ್ತಿರುವಾಗಲೇ ಸರಕಾರದಿಂದ ಈ ಘೋಷಣೆ ಹೊರಬಿದ್ದಿದೆ.
ಕೇಂದ್ರ ಗೃಹ ಸಚಿವಾಲಯದಡಿ ಬರುವ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ(ಎನ್‌ಡಿಎಂಎ)ವೇ ಎಲ್ಲ ರಾಜ್ಯ ಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಗೆ ಈ ಕುರಿತು ಸೂಚನೆ ನೀಡಿದೆ. ಎಲ್ಲ ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಸಿನೆಮಾ ಹಾಲ್‌ಗಳು, ರೆಸ್ಟೋರೆಂಟ್, ಬಾರ್, ಕ್ರೀಡಾ ಸಂಕೀರ್ಣ, ಜಿಮ್, ಸ್ಪಾ, ಈಜು ಕೊಳ, ಧಾರ್ಮಿಕ ಕೇಂದ್ರಗಳು ಶೇ.100ರ ಆಸನ ಭರ್ತಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಲಸಿಕೆ ವಿತರಣೆ, ಮಾಸ್ಕ್ ಧರಿಸುವಿಕೆ, ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತಿತರ ಕ್ರಮಗಳನ್ನು ಜನರು ಮುಂದುವರಿಸುವ ಮೂಲಕ ಸೋಂಕಿನ ಹೊಸ ಅಲೆಗಳನ್ನು ಸಮರ್ಥವಾಗಿ ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದೂ ತಿಳಿಸಲಾಗಿದೆ. ಒಮಿಕ್ರಾನ್‌ನ ಬಿಎ 2 ಎಂಬ ಹೊಸ ರೂಪಾಂತರಿಯು ಚೀನ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಅಬ್ಬರಿಸುತ್ತಿದ್ದು, ಹಲವೆಡೆ ಲಾಕ್‌ಡೌನ್ ಕೂಡ ಜಾರಿಯಾಗುತ್ತಿರುವ ನಡುವೆಯೇ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿರುವುದು ವಿಶೇಷ.
Related Articles
ಮಾಸ್ಕ್ ಧಾರಣೆ ಮುಂದುವರಿಯಲಿದೆ ಎಂದು ಕೇಂದ್ರ ಹೇಳಿದ್ದರೂ ಮುಂಬಯಿ ನಗರವಾಸಿಗಳಿಗೆ ಅಲ್ಲಿನ ಪಾಲಿಕೆಯು ಸಿಹಿಸುದ್ದಿ ನೀಡಿದೆ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ನಿಯಮವನ್ನು ತೆಗೆದುಹಾಕಲಾಗಿದೆ ಬಿಎಂಸಿ ತಿಳಿಸಿದೆ.
Advertisement
1,778 ಹೊಸ ಪ್ರಕರಣಮಂಗಳವಾರದಿಂದ ಬುಧವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,778 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 62 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 800ರಷ್ಟಿದ್ದು, ಒಟ್ಟಾರೆ ಸೋಂಕಿನ ಶೇ.0.05ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 181 ಕೋಟಿ ಡೋಸ್ ಲಸಿಕೆ ಪೂರ್ಣ
ಕೊರೊನಾ ಸೋಂಕಿನ 3 ಅಲೆಗಳನ್ನು ನೋಡಿರುವ ಭಾರತವು ಈಗ ಈ ಸೋಂಕನ್ನು ಸಮರ್ಥವಾಗಿ ಎದುರಿಸುವ ಬಗೆಯನ್ನು ಅರಿತುಕೊಂಡಿದೆ. ಅಲ್ಲದೆ, ದೇಶದ ಲಸಿಕಾ ಅಭಿ ಯಾನವು ಈ ಸವಾಲು ಎದುರಿಸಲು ಮತ್ತಷ್ಟು ಧೈರ್ಯ ನೀಡಿದೆ. ಬುಧವಾರದವರೆಗೆ ದೇಶಾದ್ಯಂತ 181.89 ಕೋಟಿ ಡೋಸ್ ಲಸಿಕೆ ವಿತರಣೆ ಪೂರ್ಣಗೊಂಡಿದೆ. ಈಗಾಗಲೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ. 2 ವರ್ಷಗಳ ಹಿಂದೆ ಜಾರಿ
ಕೊರೊನಾ ಸೋಂಕು ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ವಿಪತ್ತು ನಿರ್ವಹಣ ಕಾಯ್ದೆಯ ನಿಬಂಧನೆಗಳನ್ನು ದೇಶವ್ಯಾಪಿ ಜಾರಿ ಮಾಡಲಾಗಿತ್ತು. ಈ ಕಾಯ್ದೆಯಡಿ ಕೇಂದ್ರ ಸರಕಾರ ಅನುಷ್ಠಾನ ಗೊಳಿಸಿದ್ದ ಕೊರೊನಾ ಸುರûಾ ಕ್ರಮಗಳ ಅವಧಿ ಮಾ.31ರಂದು ಮುಗಿಯಲಿದೆ. ಕಾಯ್ದೆಯಲ್ಲೇನಿತ್ತು?
1. ವಿಪತ್ತು ನಿರ್ವಹಣ ಕಾಯ್ದೆ ಪ್ರಕಾರ, ಸರಕಾರದ ಆದೇಶ ಉಲ್ಲಂಘಿ ಸಿದರೆ 1 ವರ್ಷ ಜೈಲು, ದಂಡ ಅಥವಾ ಎರಡನ್ನೂ ವಿಧಿಸಬಹುದಿತ್ತು. ಗಂಭೀರ ಅಪರಾಧಗಳಾದರೆ 2 ವರ್ಷ ಜೈಲು ಶಿಕ್ಷೆ.
2. ಪರಿಹಾರ ಅಥವಾ ನೆರವಿಗಾಗಿ ಸುಳ್ಳು ಹೇಳಿ ದರೆ 2 ವರ್ಷ ಜೈಲು ಮತ್ತು ದಂಡ.
3. ಅಗತ್ಯ ಪರಿಕರಗಳು ಅಥವಾ ಹಣಕಾಸು ಅವ್ಯವಹಾರಕ್ಕೆ 2 ವರ್ಷ ಜೈಲು, ದಂಡ.
4. ವಿಪತ್ತಿನ ಕುರಿತು ಸುಳ್ಳು ಎಚ್ಚರಿಕೆ ಕೊಟ್ಟರೆ 2 ವರ್ಷ ಜೈಲು ಮತ್ತು ದಂಡ.