Advertisement

ಯುನೈಟೆಡ್‌ ಆಸ್ಪತ್ರೆಯಲ್ಲಿ ಕೋವಿಡ್ ನಿರೋಧಕ ಅಳೆಯುವ ಪರೀಕ್ಷೆ

04:49 PM Sep 25, 2020 | Suhan S |

ಕಲಬುರಗಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ನಿಖರವಾಗಿ ಗುರುತಿಸುವ ಪರೀಕ್ಷಾ ಸೌಲಭ್ಯ ಇಲ್ಲಿನ ಯುನೈಟೆಡ್‌ ಆಸ್ಪತ್ರೆಯಲ್ಲಿ ಕಾರ್ಯಾನುಷ್ಠಾನಕ್ಕೆ ತರಲಾಗಿದೆ.

Advertisement

ಕೋವಿಡ್ ಈಗಾಗಲೇ ಬಂದು ಹೋಗಿದೆಯಾ? ಎಂಬುದನ್ನು ಜತೆಗೆ ಕೋವಿಡ್ ವೈರಸ್‌ ಎದುರಿಸುವ ಶಕ್ತಿ ನಮ್ಮ ಶರೀರದಲ್ಲಿ ಎಷ್ಟು ಪ್ರಮಾಣದಲ್ಲಿದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕುರಿತಾಗಿ ಸಮರ್ಪಕ ವರದಿ ನೀಡುವ ಐಜಿಜಿ ಆಂಟಿಬಾಡಿ ಪರೀಕ್ಷೆಯನ್ನು ಯುನೈಟೆಡ್‌ ಆಸ್ಪತ್ರೆಯಲ್ಲಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಯುನೈಟೆಡ್‌ ಆಸ್ಪತ್ರೆ ಮತ್ತು ಯುನೈಟೆಡ್‌ ಡಯಾಗ್ನೋಸ್ಟಿಕ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಮ್‌ ಎಸ್‌ ಸಿದ್ದಾರೆಡ್ಡಿ ಗುರುವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್‌-19 ರೋಗ ನಿರೋಧಕ ಶಕ್ತಿಯನ್ನು ಜನರಿಗೆ ತಿಳಿಸಲು ಈ ಪರೀಕ್ಷೆ ಸೌಲಭ್ಯ ಕಲ್ಪಿಸಲಾಗಿದೆ. ಬಹುಮುಖ್ಯವಾಗಿ ಯುನೈಟೆಡ್‌ ಹಾಸ್ಪಿಟಲ್‌ ಮತ್ತು ಯುನೈಟೆಡ್‌ ಡಯಾಗ್ನೋಸ್ಟಿಕ್ಸ್‌ನಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಎಲ್ಲಾ ಕೋವಿಡ್ ವಾರಿಯರ್ಸ್‌ಗಳಿಗೆ ಈ ಪರೀಕ್ಷೆ ಹೆಚ್ಚಿನ ಅನುಕೂಲ ಮಾಡಲಿದೆ. ವೈಯಕ್ತಿಕ ಪರೀಕ್ಷೆಯೊಂದಕ್ಕೆ ವೆಚ್ಚ 1200 ರೂ. ತಗುಲಿದರೆ, ಸಮುದಾಯವಾಗಿ ಪರೀಕ್ಷೆಗೆ ಬಂದರೆ 900 ರೂ. ವೆಚ್ಚವಾಗಲಿದೆ. ಐಜಿಜಿ ರೋಗ ನಿರೋಧಕ ಪರೀಕ್ಷಾ ಸಾಧನವು ಕೋವಿಡ್‌-19 ಸೋಂಕಿಗೆ ಒಡ್ಡಿಕೊಂಡಾಗಲೆಲ್ಲಾ ಮಾನವ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತವೆ. ಒಮ್ಮೆ ಪರೀಕ್ಷೆ ಫ‌ಲಿತಾಂಶ ಆಧಾರದ ಮೇಲೆ ಕೈಗೊಂಡ ಕ್ರಮಗಳು ದೀರ್ಘ‌ಕಾಲದವರೆಗೆ ರಕ್ತ ಪರಿಚಲನೆಯಲ್ಲಿ ಉಳಿಯುತ್ತವೆ ಮತ್ತು ಇದರಿಂದಾಗಿ ವ್ಯಕ್ತಿಯು ಭವಿಷ್ಯದಲ್ಲಿ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ರೋಗ ನಿರೋಧಕನಾಗಿರುತ್ತಾನೆ. ಈ ಪರೀಕ್ಷೆಯು ಬಹುಮುಖ್ಯವಾಗಿ ಕೋವಿಡ್‌ -19ನಿಂದ 100% ಯಾರು ರಕ್ಷಿತರಾಗಿದ್ದಾರೆಂದು ನಮಗೆ ತಿಳಿಸುತ್ತದೆ ಜತೆಗೆ ಸೋಂಕಿನ ವಿರುದ್ಧದ ಪ್ರತಿರಕ್ಷೆಯನ್ನು ಖಚಿತಪಡಿಸುತ್ತದೆ ಎಂದು ಡಾ| ವಿಕ್ರಮ್‌ ವಿವರಣೆ ನೀಡಿದರು.

ಯುನೈಟೆಡ್‌ ಹಾಸ್ಪಿಟಲ್‌ ಮತ್ತು ಯುನೈಟೆಡ್‌ ಡಯಾಗ್ನೋಸ್ಟಿಕ್ಸ್‌ನವು ಕೋವಿಡ್‌-19 ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಅಭಿಯಾನ ಕೈಗೊಂಡಿದೆ. ಹೀಗಾಗಿ ಮೈ ಇಮ್ಯುನಿಟಿ ಟೆಸ್ಟ್‌ (ಎಂಐಟಿ) ಪ್ರಾರಂಭಿಸಿದೆ. ಈ ಅಭಿಯಾನವು ಒಟ್ಟಾರೆಯಾಗಿವ್ಯಕ್ತಿ, ಸಂಸ್ಥೆ ಮತ್ತು ಸಮುದಾಯದ ರೋಗ  ನಿರೋಧಕ ಮಟ್ಟವನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಜತೆಗೆ ರೋಗ ಬಾರದಂತೆ ಯಾವ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕೆಂಬುದನ್ನು ತಿಳಿಸುತ್ತದೆ ಎಂದರು.

ಜನತೆ ಅನುಕೂಲಕ್ಕಾಗಿ ಯುನೈಟೆಡ್‌ ಡಯಾಗ್ನೋಸ್ಟಿಕ್ಸ್‌ ಪರೀಕ್ಷೆಗೆ ಅನುಕೂಲವಾಗುವಂತೆ ಜಿಲ್ಲಾದ್ಯಂತ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸುವ ಅವಕಾಶ ಕಲ್ಪಿಸಲಾಗಿದೆ. ಕಲಬುರಗಿ ನಗರದ ಜೇವರ್ಗಿ ರಸ್ತೆಯ ಕೊಟನೂರ ಮಠದ ಬಳಿಯ ಓಂ ಸಾಯಿ ಕ್ಲಿನಿಕ್‌, ಆಳಂದ ಚೆಕ್‌ ಪೋಸ್ಟ್‌ ಹತ್ತಿರದ ಶರಣಬಸವೇಶ್ವರ ಡಯಾಗ್ನೋಸ್ಟಿಕ್ಸ್‌, ಬಸವೇಶ್ವರ ಕಾಲೋನಿಯ ರಾಷ್ಟ್ರೀಯ ರೋಗ ನಿರ್ಣಯ ಪ್ರಯೋಗಾಲಯ ಹಾಗೂ ಎಂಎಸ್‌ಕೆ ಮಿಲ್‌ ರಸ್ತೆಯ ಅಮನ್‌ ಕೇರ್‌ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸಾ ಆಸ್ಪತ್ರೆಯಲ್ಲಿ ಜನರು ರೋಗ ನಿರೋಧಕ ಶಕ್ತಿ ಪ್ರಮಾಣ ಪ್ರಮಾಣೀಕರಿಸಲು ಮಾದರಿಗಳನ್ನು ನೀಡಬಹುದಾಗಿದೆ ಎಂದು ಡಾ| ಸಿದ್ಧಾರೆಡ್ಡಿ ತಿಳಿಸಿದರು.

Advertisement

12 ಸಾವಿರ ಕೋವಿಡ್ ಪರೀಕ್ಷೆ: ಯುನೈಟೆಡ್‌ ಆಸ್ಪತ್ರೆಯಲ್ಲಿ ಕೋವಿಡ್‌-19 ಪರೀಕ್ಷಾಲಯ ಪ್ರಾರಂಭವಾದ ಇಲ್ಲಿಯವರೆಗೆ 12 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್‌-19ಅನ್ನು ಪತ್ತೆ ಹಚ್ಚಲು ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಪ್ರಾರಂಭಿಸಿದ ಬೆಂಗಳೂರಿನ ಹೊರಗಿನ ಭಾಗದ ಮೊದಲ ಖಾಸಗಿ ಪ್ರಯೋಗಾಲಯ ತಮ್ಮ ಆಸ್ಪತ್ರೆಯದ್ದಾಗಿದೆ. ಬಹುಮುಖ್ಯವಾಗಿ ಕೋವಿಡ್‌ -19 ಚಿಕಿತ್ಸಾಲಯ ಹಾಗೂ ಐಷುಲೇಷನ್‌ ವಾರ್ಡ್‌ ಸಹ ಪ್ರಾರಂಭಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಡಾ| ವಿಕ್ರಮ್‌ ಸಿದ್ಧಾರೆಡ್ಡಿ ತಿಳಿಸಿದರು.

ಈ ನಿರ್ದಿಷ್ಟ ಐಜಿಜಿಸಿರೊ ಟೈಟ್ರೆ ಪರೀಕ್ಷೆಯು ಈಗ ಕೋವಿಡ್‌-19 ಇಮ್ಯುನಿಟಿ ಕುರಿತಾಗಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಯಾವುದೇ ದೇಶಕ್ಕೆ ಪ್ರಯಾಣಿಸಲು ಆರ್‌ ಟಿಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಿವೆ. ಅದೇ ಸಮಯದಲ್ಲಿ, ಜಾಗತಿಕ ಮಟ್ಟದಲ್ಲಿ ಐಜಿಜಿ ಸಿರೊ ಟೈಟ್ರೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಸಹ ಚಿಂತನೆ ನಡೆಸಲಾಗುತ್ತಿದೆ. ಹೀಗಾಗಿ ಇದನ್ನು ಯುನೈಟೆಡ್‌ ಆಸ್ಪತ್ರೆಯಿಂದ ಪ್ರಮುಖವಾಗಿ ಕಾರ್ಯಾನುಷ್ಠಾನಕ್ಕೆ ತರಲಾಗಿದೆ. – ಡಾ| ವಿಕ್ರಮ್‌ ಎಸ್‌ ಸಿದ್ದಾರೆಡ್ಡಿ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಯುನೈಟೆಡ್‌ ಆಸ್ಪತ್ರೆ ಮತ್ತು ಯುನೈಟೆಡ್‌ ಡಯಾಗ್ನೋಸ್ಟಿಕ್ಸ್‌

ರೋಗ ನಿರೋಧಕ ಶಕ್ತಿ ನಿಖರವಾಗಿ ಗುರುತಿಸುವ ಐಜಿಜಿ ಆಂಟಿಬಾಡಿ ಪರೀಕ್ಷೆಯನ್ನು ಜನರ ಅನುಕೂಲಕ್ಕಾಗಿ ವಿಶೇಷವಾಗಿ ಕೈಗಾರಿಕಾ ಮತ್ತು ವ್ಯಾಪಾರ ಘಟಕಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳಿಗೆ ಅವಕಾಶವನ್ನು ಬಳಸಿಕೊಳ್ಳುವಂತೆ ಮತ್ತು ಪರಿಣಾಮಕಾರಿ ಕಾರ್ಯಕ್ಷೇತ್ರವನ್ನು ರಚಿಸಲು ತಮ್ಮ ಇಡೀ ಸಿಬ್ಬಂದಿಗೆ ಐಜಿಜಿಟಿ ಬಾಡಿ ಪರೀಕ್ಷೆ ಮಾಡಿಸುವಂತೆ ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಮೊ.9535601919 ಮತ್ತು 9343382517 ಬೆಳಿಗ್ಗೆ 7ರಿಂದ ರಾತ್ರಿ 9ರ ವರೆಗೆ ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next