ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ 1003 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 18 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು(ಸೆ.17) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1199 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇಂದು 15960 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ 0.67 % ಹಾಗೂ ಡೆತ್ ರೇಟ್ 1.79% ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :
ಬಾಗಲಕೋಟೆ-0, ಬಳ್ಳಾರಿ-4, ಬೆಳಗಾವಿ-17, ಬೆಂಗಳೂರು ಗ್ರಾಮಾಂತರ-15, ಬೆಂಗಳೂರು ನಗರ-310, ಬೀದರ್-0, ಚಾಮರಾಜನಗರ-4, ಚಿಕ್ಕಬಳ್ಳಾಪುರ-5, ಚಿಕ್ಕಮಗಳೂರು-37, ಚಿತ್ರದುರ್ಗ-10, ದಕ್ಷಿಣ ಕನ್ನಡ- 124, ದಾವಣಗೆರೆ-3, ಧಾರವಾಡ-9, ಗದಗ-1, ಹಾಸನ-48, ಹಾವೇರಿ-0, ಕಲಬುರಗಿ-5, ಕೊಡಗು-96, ಕೋಲಾರ-14. ಕೊಪ್ಪಳ-0, ಮಂಡ್ಯ-31, ಮೈಸೂರು-46, ರಾಯಚೂರು-3, ರಾಮನಗರ-2, ಶಿವಮೊಗ್ಗ-27, ತುಮಕೂರು-61, ಉಡುಪಿ-94, ಉತ್ತರ ಕನ್ನಡ-35, ವಿಜಯಪುರ-0, ಯಾದಗಿರಿ-2.
ಇದನ್ನೂ ಓದಿ :ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನದಂದು ಜನಿಸಿದ ಮಗುವಿಗೆ ‘ನರೇಂದ್ರ’ ಎಂದು ಹೆಸರಿಟ್ಟ ದಂಪತಿ