Advertisement

24 ಗಂಟೆಯಲ್ಲಿ ಕೋವಿಡ್‌ ವರದಿ : ಡಿಸಿ

01:33 PM May 07, 2021 | Team Udayavani |

ಆಳಂದ : ಜಿಲ್ಲೆಯಲ್ಲಿ ಇನ್ಮುಂದೆ ಕೋವಿಡ್‌ ತಪಾಸಣೆ ವರದಿಯನ್ನು 24 ಗಂಟೆಯಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜೋತ್ಸ್ಯಾ ತಿಳಿಸಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಅವರು, ಕೋವಿಡ್‌ ಸೋಂಕಿತ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆ ಪರಿಶೀಲಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಕೋವಿಡ್‌ ತಪಾಸಣೆ ಮಾಡುವುದಿಲ್ಲ. ಅಗತ್ಯ ಎನಿಸಿದವರಿಗೆ ಅಥವಾ ಶಂಕಿತ ರೋಗಿಗಳಿಗೆ ಮಾತ್ರ ಕೋವಿಡ್‌ ತಪಾಸಣೆ ಕೈಗೊಳ್ಳಲು ಪ್ರಥಮಾದ್ಯತೆ ನೀಡುವಂತೆ ಮೌಖೀಕ ಆದೇಶ ನೀಡಲಾಗಿದೆ.

ತಪಾಸಣೆ ಕೈಗೊಂಡ 24 ಗಂಟೆಯಲ್ಲಿ ವರದಿ ಕೈಸೇರಲಿದೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಿಲ್ಲ. ಸೋಂಕಿತರು ಮೃತಪಟ್ಟಿದ್ದಕ್ಕೆ ಬೇರೆಯೇ ಕಾರಣಗಳಿವೆ.

ರೋಗಿಗಳಿಗೆ ಆಕ್ಸಿಜನ್‌ ಸಿಲಿಂಡರ್‌ಗಳ ಕೊರತೆ ಆಗದಂತೆ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸೂಚಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಎಲ್ಲ ಸೋಂಕಿತ ರೋಗಿಗಳಿಗೂ ರೆಮ್‌ಡೆಸಿವಿಯರ್‌ ಇಂಜೆಕ್ಷನ್‌ ಅಗತ್ಯವಿಲ್ಲ. ಈ ಕುರಿತು ತಜ್ಞ ವೈದ್ಯರು ನಿರ್ಧರಿಸಿ, ಅಗತ್ಯವೆನಿಸಿದರೆ ಮಾತ್ರ ನೀಡುತ್ತಾರೆ ಎಂದು ಹೇಳಿದರು. ಆಸ್ಪತ್ರೆ ವೈದ್ಯಾಧಿ ಕಾರಿ ಚಂದ್ರಕಾಂತ ನರಬೋಳಿ ಅವರು, ಸಿಲಿಂಡರ್‌ ಕೊರತೆ ಇದ್ದು ಪೂರೈಸಬೇಕು ಎಂದಾಗ 10 ಸಿಲಿಂಡರ್‌ ಕಳುಹಿಸಲಾಗುವುದು ಎಂದು ಜಿಲ್ಲಾ ಧಿಕಾರಿಗಳು ತಿಳಿಸಿದರು.

ಸಿಲಿಂಡರ್‌ ಹಾಗೂ ಶವ ಸಾಗಿಸಲು ವಾಹನ ವ್ಯವಸ್ಥೆ ಕಲ್ಪಿಸುವಂತೆ ಹಾಜರಿದ್ದ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಮಸ್ಯೆ ಆಲಿಕೆ: ಆಸ್ಪತ್ರೆಯಲ್ಲಿ ಜಿಲ್ಲಾಧಿ ಕಾರಿಗಳನ್ನು ಭೇಟಿ ಮಾಡಿದ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್‌. ಕೊರಳ್ಳಿ, ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ತಪಾಸಣೆ ಕೈಗೊಂಡವರ ವರದಿಯನ್ನು 24 ಗಂಟೆಯಲ್ಲಿ ನೀಡಬೇಕು.

Advertisement

ಈ ಹಿಂದೆ ತಪಾಸಣೆ ವರದಿ ಬರಲು 10 ದಿನ ತೆಗೆದುಕೊಂಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ಕೊಡಲಹಂಗರಗಾದಲ್ಲಿ ಇಬ್ಬರ ಸ್ಥಿತಿ ಗಂಭೀರವಿದೆ. ಇನ್ನು ನಾಲ್ವರು ಶಂಕಿತರು ಬಳಲುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳಿಗೆ ಗ್ರಾಮಕ್ಕೆ ಬರಲು ತಿಳಿಸಿದರೂ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಜರಿದ್ದ ಅ ಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರಿಗೆ ಆಕ್ಸಿಜನ್‌ ಇಲ್ಲ ಎಂದು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿ ಜಿಲ್ಲಾಧಿ ಕಾರಿಗಳು ಕೂಡಲೇ ದಾಖಲಿಸಿಕೊಳ್ಳಲು ವೈದ್ಯಾಧಿಕಾರಿಗೆ ಸೂಚಿಸಿದರು. ನಂತರ ಕೋವಿಡ್‌ ರೋಗಿಗಳ ವಾರ್ಡ್‌ಗೆ ಭೇಟಿ ನೀಡಿದ ಜಿಲ್ಲಾ ಧಿಕಾರಿಗಳು ರೋಗಿಗಳ ಮತ್ತು ಅಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಕಲೆಹಾಕಿದರು. ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ಇಒ ನಾಗಮೂರ್ತಿ ಶೀವಲಂತ, ಆರೋಗ್ಯಾ ಧಿಕಾರಿ ಡಾ| ಜಿ. ಅಭಯಕುಮಾರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next