ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವು ನೀಡುವ ಸಂಬಂಧ ಸರಕಾರದಿಂದ ಗುರುವಾರ ಅಧಿಕೃತ ಆದೇಶ ಹೊರ ಬಿದ್ದಿದೆ.
ಬಿಪಿಎಲ್ ಕುಟುಂಬಕ್ಕೆ ಮಾತ್ರ ಈ ನೆರವು ಸಿಗಲಿದೆ. ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಇದು ಇನ್ವಯ.
ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರೇ ಈ ಘೋಷಣೆ ಮಾಡಿದ್ದು, ಯೋಜನೆಗೆ ರಾಜ್ಯ ಸರಕಾರಕ್ಕೆ ಸುಮಾರು 250ರಿಂದ 300 ಕೋಟಿ ರೂ. ವೆಚ್ಚವಾಗಲಿದೆ.
ಪರಿಹಾರ ಪಡೆಯಲು ಕೆಲವು ಷರತ್ತು ಗಳನ್ನು ವಿಧಿಸಲಾಗಿದೆ. ಬಿಪಿಎಲ್ ಕುಟುಂಬ ದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಮರಣ ಹೊಂದಿದ್ದರೂ ಒಬ್ಬರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನಿಗದಿಪಡಿಸಿರುವ ಮಾನದಂಡಗಳ ವ್ಯಾಪ್ತಿಗೆ ಒಳಪಡುವಂತಿದ್ದರೆ ಮಾತ್ರ ಪರಿಹಾರ ಸಿಗಲಿದೆ.
ಮೃತನ ವಿವರವನ್ನು ಜಿಲ್ಲಾ ವೈದ್ಯಾಧಿಕಾರಿ ಗಳಿಂದ ಜಿಲ್ಲಾಧಿಕಾರಿ ಪಡೆಯಬೇಕು. ಜಿಲ್ಲಾಧಿಕಾರಿಗಳಿಗೆ ವರದಿ ನೀಡುವ ಮೊದಲು ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿ ಯನ್ನು ಡಿಎಚ್‌ಒ ಪರಿಶೀಲಿಸಿ ಖಚಿತಪಡಿಸಿ ಕೊಳ್ಳಬೇಕು. ಡಿಸಿಗಳು ಮೃತರ ಕಾನೂನುಬದ್ಧ ವಾರಸುದಾರರನ್ನು ಗುರುತಿಸಿ, ಅವರಿಂದ ಬ್ಯಾಂಕ್ ಹಾಗೂ ಸೂಕ್ತ ದಾಖಲೆ ಪಡೆದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇ ಶನಾಲಯದ ನಿರ್ದೇಶಕರಿಗೆ ಸಲ್ಲಿಸಬೇಕು.