Advertisement

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ: ಬಿ.ಸಿ.ಪಾಟೀಲ್

02:18 PM May 16, 2021 | Team Udayavani |

ಹಾವೇರಿ: ಹಿರೇಕರೂರು ಮತಕ್ಷೇತ್ರದ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ಎರಡನೇ ಅಲೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 50ಸಾವಿರ ರೂ.ಪರಿಹಾರ ಧನ ನೀಡುವುದಾಗಿ ಕೃಷಿ ಸಚಿವ, ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಘೋಷಿಸಿದ್ದಾರೆ.

Advertisement

ಹಿರೇಕೆರೂರು ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಸುಮಾರು ಹದಿನೆಂಟು ಮಂದಿ‌ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಮೃತಪಟ್ಟವರ ಕುಟುಂಬದ ಸದಸ್ಯರನ್ನು ನಾಳೆ ಬಿ.ಸಿ.ಪಾಟೀಲ್ ಭೇಟಿಯಾಗಿ ಪರಿಹಾರ ಧನ ವಿತರಿಸಲಿದ್ದಾರೆ.

ಇದನ್ನೂ ಓದಿ : ರೈತರಿಂದ ನೇರವಾಗಿ ಟೊಮೇಟೋ ಖರೀದಿಸಿ ಉಚಿತವಾಗಿ ವಿತರಿಸಿದ ನಟ ಉಪೇಂದ್ರ

ಇನ್ನು ಕೆಲವು ದಿನಗಳ ಹಿಂದೆ ಹಿರೇಕೆರೂರು ಮತಕ್ಷೇತ್ರ ವ್ಯಾಪ್ತಿಯಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಹಿರೇಕೆರೂರು ಸೇರಿದಂತೆ ಹಾವೇರಿ ಜಿಲ್ಲೆಯ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ದಾಖಲಾಗಿ ಚಿಕಿತ್ಸೆ ಪಡೆದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಬಿಸಿಪಿ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next