Advertisement

ಬಾಲ ಕಾರ್ಮಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್

07:35 AM Jun 13, 2020 | mahesh |

ವರದಿಯ ಪ್ರಮುಖಾಂಶ
ಕೋವಿಡ್ ದಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ನಾನಾ ದೇಶಗಳಲ್ಲಿ ಕೋಟ್ಯಂತರ ಜನರ ದುಡಿಮೆಯನ್ನು ಕಸಿದುಕೊಂಡಿದೆ. ಇದು ಬಡವರ ಮನೆಗಳ ಮಕ್ಕಳು ಅನಿವಾರ್ಯವಾಗಿ ಕೆಲಸಕ್ಕಿಳಿಯಬೇಕಿದೆ. ಸಾಂಕ್ರಾಮಿಕ ಭೀತಿಯಿಂದ ಶಾಲೆಗಳು ಮುಚ್ಚಿರುವುದು ಇದಕ್ಕೆ ಅನುಕೂಲಕರವಾಗಿದೆ. ಆದರೆ, ಶಾಲೆಗಳು ಪುನರಾರಂಭವಾದರೂ ಅನೇಕ ಕುಟುಂಬಗಳಿಗೆ ಮಕ್ಕಳನ್ನು ಶಾಲೆಗೆ ಕಳಿಸುವಷ್ಟು ಚೈತನ್ಯ ಕೋಟ್ಯಂತರ ಕುಟುಂಬಗಳಿಗೆ ಇಲ್ಲ.

Advertisement

ಎಲ್ಲೆಲ್ಲಿ ಇಂಥ ಸಮಸ್ಯೆ
ಭಾರತ, ಬ್ರೆಜಿಲ್‌ನಲ್ಲಿ ಬಾಲಕಾರ್ಮಿಕರು ಸಮಸ್ಯೆ ಅತಿ ಹೆಚ್ಚಾಗಿದೆ. ಇನ್ನುಳಿದಂತೆ, ಗ್ವಾಟೆಮಾಲ, ಮೆಕ್ಸಿಕೊ, ತಾಂಜೇನಿಯಾ, ಏಷ್ಯಾದ ಹಲವು ರಾಷ್ಟ್ರಗಳು ಸೇರಿದಂತೆ 130 ದೇಶಗಳಲ್ಲಿ ಈ ಸಮಸ್ಯೆ ತಲೆಯೆತ್ತಿದೆ. ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ಮಕ್ಕಳು ಈ ಪಿಡುಗಿಗೆ ಬಲಿಯಾಗಬೇಕಿದೆ ಎಂಬ ಆತಂಕವೂ ಮೂಡಿದೆ.

ಅವರಿಗಂತೂ ನರಕ
ಈಗಾಗಲೇ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳು, ಕೋವಿಡ್ ಬಿಕ್ಕಟ್ಟಿನಿಂದಾಗಿ ಹೆಚ್ಚು ಅವಧಿವರೆಗೆ ಕೆಲಸ ಮಾಡಬೇಕಿರುತ್ತದೆ. ಅವರಿಗೆ ಸಿಗಬೇಕಿದ್ದ ಕೂಲಿ ಮತ್ತಿತರ ಅರೆಬರೆ ಸವಲತ್ತುಗಳಿಗೂ ಕತ್ತರಿ ಬಿದ್ದಿದೆ. ಕೆಲವು ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡುವಂಥ ಪರಿಸ್ಥಿತಿಯೂ ಬಂದೊಂದಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next