ಧಾರವಾಡ: ಜಿಲ್ಲೆಯಲ್ಲಿ ಸೋಂಕಿತರ ಪೈಕಿ ಮಂಗಳವಾರ 7ಜನ, ಬುಧ ವಾರ 27ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದರ ಜತೆಗೆ ಮತ್ತೆ 12 ಜನರಲ್ಲಿ ಸೋಂಕು ದೃಢಪಟ್ಟು ಸೋಂಕಿತರ ಸಂಖ್ಯೆ 218ಕ್ಕೆ ಏರಿಕೆ ಆಗಿದೆ. ಹುಬ್ಬಳ್ಳಿಯ ಕೃಷಿ ಕಾರ್ಮಿಕ ನಗರದ ಸೋಂಕಿತ ಯುವತಿಯ ಸಂಪರ್ಕದಿಂದ ನಾಲ್ವರಿಗೆ ಹಾಗೂ ನವಲಗುಂದ ತಾಲೂಕಿನ
ಮೊರಬ ಗ್ರಾಮದ ಇಬ್ಬರು ಸೋಂಕಿತರಿಂದ ಐದು ಜನರಿಗೆ ಕೋವಿಡ್ ಸೋಂಕು ಹಬ್ಬಿದೆ. ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದ ನಿವಾಸಿಯಾದ ಸೋಂಕಿತ ಪಿ-8742 (20 ವರ್ಷದ ಯುವತಿ) ಸಂಪರ್ಕದಿಂದ 12 ವರ್ಷದ ಬಾಲಕ (ಪಿ-9783), 18 ವರ್ಷದ ಯುವತಿ (ಪಿ-9784), 17 ವರ್ಷದ ಯುವಕ (ಪಿ-9785), 40 ವರ್ಷದ ಮಹಿಳೆ (ಪಿ-9791) ಸೇರಿ ನಾಲ್ವರಲ್ಲಿ ಸೋಂಕು ತಾಗಿದೆ. ಇದಲ್ಲದೇ ನವಲಗುಂದ ತಾಲೂಕಿನ ಮೊರಬ ಗ್ರಾಮದ ಜಾಡರಪೇಟ ನಿವಾಸಿಯಾದ ಸೋಂಕಿತ ಪಿ-8741 (34 ವರ್ಷದ ಪುರುಷ) ಸಂಪರ್ಕದಿಂದ 45 ವರ್ಷದ ಮಹಿಳೆ (ಪಿ-9787), 63 ವರ್ಷದ ಪುರುಷ (ಪಿ-9788), 48 ವರ್ಷದ ಮಹಿಳೆ (ಪಿ-9789), 28 ವರ್ಷದ ಪುರುಷ (ಪಿ-9790) ಹಾಗೂ ಅದೇ ಗ್ರಾಮದ ಸೋಂಕಿತ ಪಿ-7040 (72 ವರ್ಷದ ವೃದ್ಧ) ಸಂಪರ್ಕದಿಂದ 43 ವರ್ಷದ ಮಹಿಳೆ (ಪಿ-9786) ಸೇರಿ ಐದು ಜನರಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರ ಗುಣಲಕ್ಷಣವುಳ್ಳ ಹುಬ್ಬಳ್ಳಿ ಗೂಡ್ಸ್ ರಸ್ತೆ ನಿವಾಸಿಯಾದ 85 ವರ್ಷದ ಪುರುಷ (ಪಿ-9792), ಹುಬ್ಬಳ್ಳಿ ಕೇಶ್ವಾಪೂರ ನಿವಾಸಿಯಾದ 32 ವರ್ಷದ ಮಹಿಳೆ(ಪಿ-9794)ಯಲ್ಲಿ ಸೋಂಕು ದೃಢಪಟ್ಟಿದೆ. ಇದರ ಜತೆಗೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ನಿವಾಸಿಯಾದ 39 ವರ್ಷದ ಮಹಿಳೆಯಲ್ಲೂ (ಪಿ-9793) ಸೋಂಕು ದೃಢಪಟ್ಟಿದ್ದು, ಈ ಸೋಂಕಿತ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
27 ಜನ ಗುಣಮುಖ: ಹುಬ್ಬಳ್ಳಿ ನೇಕಾರ ನಗರದ ನಿವಾಸಿಯಾದ 63 ವರ್ಷದ ಪುರುಷ (ಪಿ-6256), ಜೂ.16ರಂದು ಸೋಂಕು ದೃಢಪಟ್ಟಿದ್ದ ಧಾರವಾಡದ ನಾರಾಯಣಪೂರ ನಿವಾಸಿಯಾದ 57 ವರ್ಷದ ಪುರುಷ (ಪಿ-7382), ಉಣಕಲ್ ನಿವಾಸಿಯಾದ 19 ವರ್ಷದ ಯುವಕ (ಪಿ-6537), 44 ವರ್ಷದ ಮಹಿಳೆ (ಪಿ-6538), 46 ವರ್ಷದ ಪುರುಷ (ಪಿ-6539), ಜೂ.17ರಂದು ಸೋಂಕು ದೃಢಪಟ್ಟಿದ್ದ ಧಾರವಾಡ ಕಿಲ್ಲಾ ರಸ್ತೆಯ ಕಟ್ಟಿಚಾಳ ನಿವಾಸಿಯಾದ 30 ವರ್ಷದ ಮಹಿಳೆ (ಪಿ-7541), 27 ವರ್ಷದ ಪುರುಷ ಪಿ-6523 ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಜೂ.23ರಂದು ರಾತ್ರಿ ಬಿಡುಗಡೆಯಾಗಿದ್ದಾರೆ.
ಇನ್ನು 5 ವರ್ಷದ ಬಾಲಕಿ(ಪಿ-7540) ಹಾಗೂ 4ವರ್ಷದ ಬಾಲಕ (ಪಿ-7543) ಗುಣಮುಖರಾಗಿ ಜೂ.24ರಂದು (ಬುಧವಾರ) ಬಿಡುಗಡೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಪೈಕಿ 99 ಜನ ಗುಣಮುಖರಾಗಿದ್ದಾರೆ.