Advertisement
ರಾಜ್ಯದ ಅತ್ಯಧಿಕ ಕೊರೊನಾ ಪಾಸಿಟಿವ್ ಪತ್ತೆಯಾದ 178 ತಾಲೂಕುವಾರು ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಶೇ.1.63 ಪಾಸಿಟಿವ್ ಪತ್ತೆಯಾಗುವ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅನಂತರ ಸ್ಥಾನದಲ್ಲಿ ಕೊಡಗು ತಾಲೂಕಿನ ಸೋಮವಾರಪೇಟೆ ಶೇ.1.2, ವಿರಾಜಪೇಟೆ ಶೇ.0.98, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ತಾಲೂಕಿನಲ್ಲಿ ಶೇ.0.85ರಷ್ಟು ಪಾಸಿಟಿವ್ ಪತ್ತೆಯಾಗಿದೆ. ಡಿ.19ರಿಂದ 29ರ ವರೆಗೆ ಒಟ್ಟು 9,60,992 ಮಂದಿ ಸ್ವಾéಬ್ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 3,620 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.
Related Articles
Advertisement
ಹೊರರಾಜ್ಯದೊಂದಿಗೆ ಗಡಿ ಹಂಚಿಕೊಂಡ ಕರ್ನಾಟಕದ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿದೆ. ಆಂಧ್ರ ಪ್ರದೇಶದ ಗಡಿಯ ಬಳ್ಳಾರಿಯಲ್ಲಿ 97,847 ಪಾಸಿಟಿವ್, ಚಿತ್ರದುರ್ಗದಲ್ಲಿ 36,770 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ತೆಲಂಗಾಣದ ಗಡಿಯಲ್ಲಿರುವ ಕಲಬುರಗಿ 61,980, ಬೀದರ್ 24,352 ಪಾಸಿಟಿವ್, ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ 80,124, ವಿಜಯಪುರ 36295 ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಚಾಮರಾಜ ನಗರ 33,118, ಬೆಂಗಳೂರು ನಗರ 1262397, ರಾಮನಗರ 24222 ಹಾಗೂ ಕೇರಳದ ಗಡಿಭಾಗದ ದ.ಕ. 1,16,341 , ಕೊಡಗು 37742 , ಗೋವಾದ ಗಡಿ ಭಾಗದಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 56662 ಪಾಸಿಟಿವ್ ಪತ್ತೆಯಾಗಿದೆ. ಆ ಮೂಲಕ 30 ಜಿಲ್ಲೆಗಳಲ್ಲಿ ಪತ್ತೆಯಾದ ಒಟ್ಟು 30 ಲಕ್ಷ ಕೊರೊನಾ ಪಾಸಿಟಿವ್ ಪ್ರಕರಣದಲ್ಲಿ ಗಡಿ ಹಂಚಿಕೊಂಡ ಜಿಲ್ಲೆಯಲ್ಲಿ 12 ಜಿಲ್ಲೆಯಲ್ಲಿ 15.30 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ರಾಜ್ಯದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ವಿವಿಧ ವಲಯದಲ್ಲಿ 15ದಿನಗಳಿಗೊಮ್ಮೆ ರ್‍ಯಾಂಡಮ್ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕು ಪತ್ತೆಯಾದ ತತ್‌ಕ್ಷಣವೇ ಅವರ ಸಂಪರ್ಕಿತರನ್ನು ಪತ್ತೆ ಮಾಡಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. –ರಂದೀಪ್‌ಆಯುಕ್ತರು ಆರೋಗ್ಯ ಇಲಾಖೆ.
ರಾಜ್ಯದಲ್ಲಿ ಪಾಸಿಟವ್ ದರ ಅಧಿಕವಿರುವ ತಾಲೂಕು ಪಟ್ಟಿ :
ತಾಲೂಕು / ಟೇಸ್ಟ್ ಸಂಖ್ಯೆ ಪಾಸಿಟಿವ್/ ಶೇಕಡವಾರು
ಸಕಲೇಶಪುರ 1592 26 1.63
ಸೋಮವಾರಪೇಟೆ 5925 71 1.2
ವಿರಾಜಪೇಟೆ 6843 67 0.98
ಬೆ.ದಕ್ಷಿಣ 98665 843 0.85
ಕೋಲಾರ 4659 39 0.84
ವಾರದ ಜಿಲ್ಲಾ ಪಾಸಿಟಿವ್ ದರಪಟ್ಟಿ
ಜಿಲ್ಲೆ ಶೇಕಡವಾರು
ಕೊಡಗು 1.04
ಬೆ. ನಗರ 0.86
ಕೋಲಾರ 0.54
ಬೆ. ಗ್ರಾಮಾಂತರ 0.44
ಉಡುಪಿ 0.44