Advertisement
ದೆಹಲಿ ಮೂಲದ 30 ವರ್ಷದ ವ್ಯಕ್ತಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಈತ ಜೂ. 7ರಂದು ತನ್ನ ಪತ್ನಿಯೊಂದಿಗೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಗೆ ಆಗಮಿಸಿ ಅಲ್ಲಿಂದ ಕಾರ್ ಮೂಲಕ ತಾಲೂಕಿನ ಟಿಬೆಟಿಯನ್ ಕ್ಯಾಂಪ್‌ಗೆ ಆಗಮಿಸಿದ್ದ. ಈ ದಂಪತಿ ಕ್ಯಾಂಪ್ ಆಗಮಿಸಿದಾಗ ಟಿಬೆಟಿಯನ್ ಆಡಳಿತ ಸಮಿತಿಯವರು ಇವರನ್ನು 14 ದಿನಗಳ ಕಾಲ ಕ್ವಾರಂಟೈನ್ ಇಟ್ಟಿದ್ದು, ಜೂ. 10ರಂದು ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಪತಿಯ ವರದಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. ಪತ್ನಿಯ ವರದಿ ಬರುವುದು ಬಾಕಿಯಿದೆ. ಈ ವ್ಯಕ್ತಿಯೊಂದಿಗೆ ಹಾಸ್ಟೆಲ್‌ನಲ್ಲಿ ಪ್ರಥಮ ಸಂಪರ್ಕದಲ್ಲಿದ್ದ 30 ಜನರು ಹಾಗೂ ಈ ವ್ಯಕ್ತಿಯ ಮಾವನ ಮನೆಯ 10 ಜನರನ್ನು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ವ್ಯಕ್ತಿಯನ್ನು ಕಾರವಾರ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಯಿತು.
Advertisement
ದೆಹಲಿಯಿಂದ ಮಾವನ ಮನೆಗೆ ಬಂದವನಿಗೆ ಸೋಂಕು
12:46 PM Jun 17, 2020 | Suhan S |
Advertisement
Udayavani is now on Telegram. Click here to join our channel and stay updated with the latest news.