ಮುಂಬೈ: ನ.25 ರಿಂದ ಡಿ.21ರವರೆಗೆ ಇಂಗ್ಲೆಂಡಿನಿಂದ ತಾಯ್ನಾಡಿಗೆ ಮರಳಿದ್ದ ಮತ್ತೆ ಮೂವರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಈ ಮೂಲಕ ಲಂಡನ್ ನಿಂದ ಮುಂಬೈಗೆ ಮರಳಿದ್ದ 1765 ಮಂದಿಯಲ್ಲಿ 6 ಮಂದಿಗೆ ಪಾಸಿಟಿವ್ ದೃಢಪಟ್ಟಂತಾಗಿದೆ. ಇಂಗ್ಲೆಂಡಿನಲ್ಲಿ ರೂಪಾಂತರಿ ಕೊರೊನಾ ವೈರಾಣುವಿನ ಆತಂಕವಿರುವ ಹಿನ್ನೆಲೆಯಲ್ಲಿ ಇವರೆಲ್ಲರ ಮಾದರಿಗಳನ್ನು ಪುಣೆಯ ಎನ್‌ಐವಿ ಲ್ಯಾಬ್‌ಗ ಕಳುಹಿಸಿಕೊಡಲಾಗಿದೆ.
ಇಂಗ್ಲೆಂಡಿನಿಂದ ರಾಜ್ಯಕ್ಕೆ ಮರಳಿದ್ದ 2,935 ಮಂದಿಯಲ್ಲಿ ಮುಂಬೈ ಪ್ರಕರಣಗಳೂ ಸೇರಿ ಒಟ್ಟು 21 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಮುಂಬೈ-6, ನಾಗ್ಪುರ-5, ಥಾಣೆ-3, ಪುಣೆ, ನಾಸಿಕ್ ಮತ್ತು ಬುಲ್ಧಾನಾದಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ:ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಚಂದ್ರನ ಅಂಗಳದಲ್ಲಿ 3 ಎಕರೆ ಜಮೀನು “ಗಿಫ್ಟ್’ ನೀಡಿದ ಪತಿ
ರೂಪಾಂತರಿ ವೈರಾಣುವಿನ ಶಂಕೆ ಕುರಿತಾದ ಇವರೆಲ್ಲರ ವರದಿ ಪುಣೆಯ ಲ್ಯಾಬ್‌ನಿಂದ ಶೀಘ್ರವೇ ಬರಲಿದೆ.